ನಗರದ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ವಿ. ಟಿ. ನಾಯಕ ಉದ್ಘಾಟಿಸಿದರು. ಪ್ರೊ. ಬಾಹುಬಲಿ ಜೈನರ, ವರ್ಷ ಕಲ್ಕಂಬಿ, ನಮೃತಾ ಪಾಟೀಲ, ಅಕ್ಷಯ ಗುಡಿ, ಶರದಿ ಗೋಡ್ಕಿಂಡಿ ಇತರರು ಇದ್ದರು.  
ರಾಜ್ಯ

ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ನಗರದ ಆದರ್ಶ ಶಿಕ್ಷಣ ಸಮಿತಿಯಲ್ಲಿ ಶುಕ್ರವಾರ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಹಾವಿದ್ಯಾಲಯದ ಪ್ರಾಚಾರ್ಯ ವಿ. ಟಿ. ನಾಯಕ ಅವರು ಸಸಿಗೆ ನೀರಿರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬಾಲ್ಯವು ಪ್ರತಿಯೊಬ್ಬ ಮಗುವಿನ ಜೀವನದ ಅತ್ಯಂತ ಅಮೂಲ್ಯ ಹಂತವಾಗಿದೆ. ಈ ಅವಧಿಯಲ್ಲಿ ಮಕ್ಕಳು ಶಿಕ್ಷಣ, ಆಟ ಮತ್ತು ಉತ್ತಮ ಸಂಸ್ಕಾರಗಳನ್ನು ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಆದರೆ ಕೆಲ ಮಕ್ಕಳು ಸಂಕಷ್ಟ, ಬಡತನ ಮತ್ತು ಸಾಮಾಜಿಕ ಕಾರಣಗಳಿಂದ ಬಾಲಕಾಮಿರ್ಕರಾಗಿ ದುಡಿಯಬೇಕಾಗುತ್ತದೆ. ಇಂತಹ ಪ್ರಕರಣ ವಿರುದ್ಧ ಜಾಗೃತಿ ಮೂಡಿಸಲು ಜೂ. 12 ರಂದು ಬಾಲಕಾಮಿರ್ಕರ ಪದ್ಧತಿ ವಿರೋಧಿ ದಿನಾಚರಣೆ ಆಚರಿಸಲಾಗುತ್ತದೆ. ವಿಶ್ವ ಬಾಲ ಕಾಮಿರ್ಕ ಪದ್ಧತಿ ವಿರೋಧಿ ದಿನಾಚರಣೆಯನ್ನು 2002ರಲ್ಲಿ ಅಂತರರಾಷ್ಟ್ರೀಯ ಕಾಮಿರ್ಕ ಸಂಸ್ಥೆ ಆರಂಭಿಸಿತು ಎಂದರು.
ಬಾಲಕಾಮಿರ್ಕ ಪದ್ಧತಿಯ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಹಾಗೂ ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು, ಪ್ರತಿಯೊಬ್ಬ ಮಗುವಿಗೂ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷಿತ ಜೀವನದ ಹಕ್ಕುಗಳಿವೆ ಎಂಬ ಸಂದೇಶವನ್ನು ಈ ದಿನ ಸಾರುತ್ತದೆ. ಬಾಲಕಾಮಿರ್ಕ ಪದ್ಧತಿಗೆ ಬಡತನ, ನಿರುದ್ಯೋಗ, ಶಿಕ್ಷಣದ ಕೊರತೆ ಹಾಗೂ ಸಾಮಾಜಿಕ ಅಸಮಾನತೆ ಪ್ರಮುಖ ಕಾರಣಗಳಾಗಿವೆ. ಅನೇಕ ಮಕ್ಕಳು ಕಾರ್ಖಾನೆಗಳು, ಹೋಟೆಲ್​ಗಳು, ಅಂಗಡಿಗಳು ಹಾಗೂ ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದರಿಂದ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ತೊಂದರೆ ಆಗುತ್ತದೆ. ಜೊತೆಗೆ ಅವರ ಶಿಕ್ಷಣವೂ ಮಧ್ಯದಲ್ಲೇ ನಿಂತು ಹೋಗುತ್ತದೆ ಎಂದರು.
ಬಾಲಕಾಮಿರ್ಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸರ್ಕಾರ ಕಠಿಣ ಕಾನೂನುಗಳನ್ನು ಜಾರಿಗೊಳಿಸಿದೆ. ಆದರೆ, ಕಾನೂನುಗಳ ಜೊತೆಗೆ ಸಮಾಜದ ಸಹಕಾರವೂ ಅತ್ಯಗತ್ಯ. ಪ್ರತಿಯೊಬ್ಬ ನಾಗರಿಕನು ಬಾಲಕಾಮಿರ್ಕರನ್ನು ಕೆಲಸಕ್ಕೆ ನೇಮಿಸಬಾರದು ಮತ್ತು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು. ಬಾಲಕಾಮಿರ್ಕರ ಪದ್ಧತಿ ಸಮಾಜಕ್ಕೆ ಒಂದು ಕಳಂಕವಾಗಿದೆ. ಮಕ್ಕಳನ್ನು ಕಾಮಿರ್ಕರನ್ನಾಗಿ ಮಾಡುವ ಬದಲು ಅವರಿಗೆ ಶಿಕ್ಷಣ ಮತ್ತು ಉತ್ತಮ ಅವಕಾಶಗಳನ್ನು ಒದಗಿಸಬೇಕು. ಬಾಲಕಾಮಿರ್ಕರ ಪದ್ಧತಿ ವಿರೋಧಿ ದಿನಾಚರಣೆಯ ಮೂಲಕ ನಾವು ಮಕ್ಕಳ ಹಕ್ಕುಗಳನ್ನು ಗೌರವಿಸಿ, ಬಾಲ ಕಾಮಿರ್ಕರಹಿತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಟಕದ ಕಾರ್ಯಕ್ರಮ ಸಂಯೋಜಕ ಪ್ರೊ. ಬಾಹುಬಲಿ ಜೈನರ, ವರ್ಷ ಕಲ್ಕಂಬಿ, ನಮೃತಾ ಪಾಟೀಲ, ಅಕ್ಷಯ ಗುಡಿ, ಶರದಿ ಗೋಡ್ಕಿಂಡಿ ಇತರರು ಇದ್ದರು.