ಗದಗ ತೋಂಟದಾರ್ಯ ಮಠದಲ್ಲಿ ಜರುಗಿದ ಶಿವಾನುಭ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ತೋಂಟದ ಸಿದ್ಧರಾಮ ಶ್ರೀಗಳು, ಡಾ. ಉಮೇಶ ಪುರದ, ಪ್ರಭಾವತಿ ಕಲ್ಲನಗೌಡರ, ಡಾ. ರಮೇಶ ಕಲ್ಲನಗೌಡರ, ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಸಿದ್ಧರಾಮ ಪಟ್ಟೇದ, ಪ್ರತಿಭಾ ಬಡ್ನಿ, ವೀರಣ್ಣ ಗೋಟಡಕಿ, ಕೆ. ಎಸ್​. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಇತರರು ಇದ್ದರು. 
ರಾಜ್ಯ

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ತೋಂಟದ ಸಿದ್ಧರಾಮ ಶ್ರೀಗಳು

ವಿಜಯವಾಣಿ ಸುದ್ದಿಜಾಲ ಗದಗ
ಮನುಷ್ಯನ ಅತಿಯಾದ ದುರಾಸೆಯಿಂದ ಪರಿಸರದ ಅಸಮತೋಲನ ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ಮನುಷ್ಯ ಆರೋಗ್ಯರ್ಪೂಣ ಬದುಕು ನಡೆಸುವುದು ಬಹಳ ಕಷ್ಟ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದಲ್ಲಿ ಇತ್ತಿಚೆಗೆ ಜರುಗಿದ ಶಿವಾನುಭವದ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಪ್ರಗತಿಯ ಹೆಸರಿನಲ್ಲಿ ಸಹಜವಾದ ಪರಿಸರವನ್ನು ನಾಶ ಮಾಡಿ ಅಸಹಜವಾದ ಕಾಂಕ್ರೀಟ್​ ಕಟ್ಟಡಗಳನ್ನು ಅತಿಯಾಗಿ ನಿಮಿರ್ಸುತ್ತಿದ್ದೇವೆ. ಪರಿಸರದಲ್ಲಿ ಅಸಮತೋಲನ ಉಂಟಾಗಿ ನೀರು, ಗಾಳಿ ಹಾಗೂ ಆಹಾರದಲ್ಲಿ ವಿಷಬೆರೆಕೆಯಾಗಿ ಮನುಷ್ಯ ಅನೇಕ ರೋಗಗಳಿಗೆ ಈಡಾಗುತ್ತಿದ್ದಾನೆ. ಮನುಷ್ಯ ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು. ಪರಿಸರ ಸಂರಣೆ ನಮ್ಮೆಲ್ಲರ ಮೊದಲ ಆದ್ಯತೆ ಆಗಬೇಕು ಎಂದು ಹೇಳಿದರು.
ಅಂತರಾಷ್ಟ್ರೀಯ ಪರಿಸರ ದಿನಾಚರಣೆಯ ಕುರಿತು ಪ್ರೊ. ಸಿ. ಎಸ್​. ಅರಸನಾಳ ಅವರು ಮಾತನಾಡಿ, ಪ್ರಕೃತಿ ತನ್ನ ಸಮತೋಲನಕ್ಕಾಗಿ ಅನೇಕ ಸಂಕೇತಗಳನ್ನು ಮನುಷ್ಯನಿಗೆ ನೀಡುತ್ತದೆ. ಪ್ರಕೃತಿಗೆ ಕಿವಿಗೊಡದೆ ಅತಿಯಾದ ದುರಾಸೆಯಿಂದ ಗಿಡ ಮರಗಳನ್ನು ನಾಶ ಮಾಡುತ್ತಿದ್ದೇವೆ. ಶುದ್ಧ ಗಾಳಿ, ನೀರು, ಆಹಾರಗಳಿಲ್ಲದೆ ಪರಿತಪಿಸುವಂತಾಗಿದೆ. ಇದಕ್ಕೆ ಕಾರಣ ಪ್ರಕೃತಿ ನಾಶ. ಪ್ರತಿಯೊಬ್ಬ ಮನುಷ್ಯನು ಗಿಡಮರಗಳನ್ನು ಹಚ್ಚಿ ಸಂರಣೆ ಮಾಡುವುದರ ಮೂಲಕ ಸಹಜವಾದ ಪ್ರಕೃತಿ ನಿರ್ಮಾಣ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಡಾ. ಉಮೇಶ ಪುರದ, ಪ್ರಭಾವತಿ ಕಲ್ಲನಗೌಡರ, ಡಾ. ರಮೇಶ ಕಲ್ಲನಗೌಡರ, ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಸಿದ್ಧರಾಮ ಪಟ್ಟೇದ, ಪ್ರತಿಭಾ ಬಡ್ನಿ, ವೀರಣ್ಣ ಗೋಟಡಕಿ, ಕೆ. ಎಸ್​. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಇತರರು ಇದ್ದರು.