ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಆರೋಗ್ಯ ಕುರಿತು ವಿಚಾರ ಸಂಕಿರಣವನ್ನು ಡಾ. ರಚನಾ ದಾಡಿಬಾವಿ ಉದ್ಘಾಟಿಸಿದರು. ಸ್ನೇಹಾ ಪಾಟೀಲ, ಜ್ಯೋತಿ ರಾಮನಗೌಡ ದಾನಪ್ಪಗೌಡ್ರ, ನಂದಾ ಚಂದ್ರು ಬಾಳಿಹಳ್ಳಿಮಠ, ರ್ಪೂಣಿಮಾ ಆಟದ, ರೇಣುಕಾ ಲಿಂಗರಾಜ ಅಮಾತ್ಯ ಇತರರು ಇದ್ದರು.
ಚರ್ಮರೋಗ, ಸಕ್ಕರೆ ಕಾಯಿಲೆ ಮತ್ತು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ ಕುರಿತು ತಿಳಿವಳಿಕೆ ಬಹಳ ಅಗತ್ಯವಾಗಿದೆ. ಇವುಗಳೆಲ್ಲವೂ ಇಂದಿನ ಸಮಾಜದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಸಮಸ್ಯೆಗಳಾಗಿವೆ. ಜನರಲ್ಲಿ ಅರಿವು ಕೊರತೆಯಿಂದಾಗಿ ಈ ಕಾಯಿಲೆಗಳು ಗಂಭೀರ ರೂಪ ಪಡೆದುಕೊಳ್ಳುತ್ತಿವೆ ಎಂದು ಚರ್ಮರೋಗ ತಜ್ಞೆ ಡಾ. ರಚನಾ ದಾಡಿಬಾವಿ ಹೇಳಿದರು.
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಗುರುವಾರ ಏರ್ಪಡಿಸಿದ್ದ ಆರೋಗ್ಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಜರ್ಮರೋಗಗಳು ಅಂದರೆ ಬ್ಯಾಕ್ಟೀರಿಯಾ, ವೈರಸ್, ಂಗಸ್ ಮತ್ತು ಇತರ ಸೂಕ್ಷ$್ಮ ಅಣುಗಳಿಂದ ಉಂಟಾಗುವ ರೋಗಗಳು. ಇವು ಸಾಮಾನ್ಯವಾಗಿ ಸ್ವಚ್ಚತೆ ಕೊರತೆಯಿಂದ ಹರಡುತ್ತವೆ. ಕೈ ತೊಳೆಯದಿರುವುದು ಅಶುದ್ಧ ನೀರು ಕುಡಿಯವುದು, ಅಸ್ವಚ್ಚ ಆಹಾರ ಸೇವೆನೆ ಇವು ಪ್ರಮುಖ ಕಾರಣಗಳಾಗಿವೆ. ಚರ್ಮರೋಗಗಳನ್ನು ತಡೆಯಲು ಸ್ವಚ್ಚತೆ ಮುಖ್ಯ. ದಿನನಿತ್ಯ ಸ್ನಾನ ಮಾಡುವುದು, ಕೈಗಳನ್ನು ಸಾಬೂನಿನಿಂದ ತೊಳೆಯುವುದು, ಶುದ್ಧವಾದ ಆಹಾರ ಸೇವಿಸುವುದು ಅಗತ್ಯವಿದೆ. ಸಾರ್ವಜನಿಕ ಸ್ಥಳಗಳಲ್ಲಿ ಶೌಚತೆ ಕಾಪಾಡುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ವೈದ್ಯಕಿಯ ವಿಜ್ಞಾನ ಸಂಸ್ಥೆಯ ಜನರಲ್ ಮೆಡಿಸಿನ್ ಸಹ ಪ್ರಾಧ್ಯಾಪಕಿ ಸ್ನೇಹಾ ಪಾಟೀಲ ಮಾತನಾಡಿ ಸಕ್ಕರೆ ಕಾಯಿಲೆ ಅಥವಾ ಡಯಾಬಿಟೀಸ್ ಇಂದಿನ ಕಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ದೀರ್ಕಾಲಿಕ ರೋಗವಾಗಿದೆ. ದೇಹದಲ್ಲಿ ಇನ್ಸುಲಿನ್ ಪ್ರಾಮಾಣ ಕಡಿಮೆಯಾಗುವುದು ಅಥವಾ ಸರಿಯಾಗಿ ಕೆಲಸ ಮಾಡದಿರುವುದು ಇದರ ಮುಖ್ಯ ಕಾರಣವಾಗಿದೆ. ಹೆಚ್ಚು ದಾಹ, ಹೆಚ್ಚು ಮೂತ್ರವಿಸರ್ಜನೆ, ತೂಕ ಇಳಿಕೆಯಾಗುವುದು, ದಣಿವು ಇತ್ಯಾದಿಗಳು ಸಕ್ಕರೆ ಕಾಯಿಲೆಯ ಲಣಗಳಾಗಿವೆ. ಈ ಲಣಗಳನ್ನು ಗಮನಿಸಿ ತಣ ವೈದ್ಯರನ್ನು ಸಂಪಕಿರ್ಸುವುದು ಉತ್ತಮ ಎಂದರು.
ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಟಕದ ಅಧ್ಯೆ ಜ್ಯೋತಿ ರಾಮನಗೌಡ ದಾನಪ್ಪಗೌಡ್ರ ಮಾತನಾಡಿದರು. ನಂದಾ ಚಂದ್ರು ಬಾಳಿಹಳ್ಳಿಮಠ, ರ್ಪೂಣಿಮಾ ಆಟದ, ರೇಣುಕಾ ಲಿಂಗರಾಜ ಅಮಾತ್ಯ ಇತರರು ಇದ್ದರು.