ಗದಗ ತೊಂಟದಾರ್ಯ ಮಠದಲ್ಲಿ ಜರುಗಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ತೋಂಟದ ಶ್ರೀಗಳು, ವೀರೇಶ ಬುಳ್ಳಾ, ಮಲ್ಲಿಕಾರ್ಜುನ ನೇಗಿನಹಾಳ, ಅತಾ ಹಿರೇಮಠ, ರಾಜಗೋಪಾಲ ಕಡ್ಲಿಕೊಪ್ಪ, ಕೊಟ್ಟೂರೇಶ್ವರ ಕೋರಿ, ಸುರೇಶ, ಪಾರ್ವತಿ ಹಾಲಬಾವಿ, ರಶ್ಮಿ ಅಂಗಡಿ, ವಿನಾಯಕ ಮಾನ್ವಿ, ಶಕುಂತಲಾ ಸಿಂಧೂರ, ಡಾ. ಉಮೇಶ ಪುರದ, ರಮೇಶ ಕಲ್ಲನಗೌಡರ, ವಿವೇಕಾನಂದಗೌಡ ಪಾಟೀಲ, ದಾನಯ್ಯ ಗಣಾಚಾರಿ, ಕಳಸಾಪುರ ಶೆಟ್ಟರ, ಐ.ಬಿ. ಬೆನಕೊಪ್ಪ, ರತ್ನಕ್ಕ ಪಾಟೀಲ ಇತರರು ಇದ್ದರು.
ಅಸಮಾನತೆಯಿಂದ ಕೂಡಿದ್ದ ಸಮಾಜದಲ್ಲಿಯ ಅಂಧಶ್ರದ್ಧೆ, ಮೂಢನಂಬಿಕೆ, ಕಂದಾಚಾರಗಳನ್ನು ತೊಲಗಿಸಿ ಸಮಸಮಾಜವನ್ನು ಕಟ್ಟಿದವರು ಬಸವೇಶ್ವರರು. ಸಮಾಜೋಧಾಮಿರ್ಕ ಚಳುವಳಿಯ ಹರಿಕಾರರು ಬಸವಣ್ಣನವರು ಎಂದು ಡಾ. ತೋಂಟದ ಸಿದ್ದರಾಮ ಶ್ರೀಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂದ ಅಡಿಯಲ್ಲಿ ತೋಂಟದಾರ್ಯ ಮಠದಲ್ಲಿ ಜರುಗಿದ ಬಸವ ಜಯಂತಿ ಹಾಗೂ 2794 ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಜಗತ್ತಿನ ಮೊದಲ ಪ್ರಜಾಪ್ರಭುತ್ವ ನಿರ್ಮಾತೃ ಬಸವಣ್ಣನವರು. ಬಸವೇಶ್ವರರು ಮಾನವ ಸಂಸತಿಗೆ ಕಳಂಕ ತರುವ ಜಾತಿ, ವರ್ಗ, ಲಿಂಗಗಳ ಅಸಮಾನತೆಯನ್ನು ತೊಲಗಿಸಿ ಕಾಯಕ, ದಾಸೋಹದ ಮೂಲಕ ಸಮಾಜೋಧಾಮಿರ್ಕ ಚಳುವಳಿಯನ್ನು ಹುಟ್ಟು ಹಾಕಿ ಮಾನವತೆಯ ಅಡಿಯಲ್ಲಿ ಎಲ್ಲರೂ ಒಂದೇ ಎಂಬ ಸಮಾನತೆಯ ಸಂದೇಶವನ್ನು ಸಾರಿದರು. ವಿಶ್ವದೆಲ್ಲೆಡೆ ರಾಜಪ್ರಭುತ್ವಗಳು ಆಳ್ವಿಕೆ ಮಾಡುತ್ತಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಹೊಂದಿ ಶ್ರೀಸಾಮಾನ್ಯನು ಚರ್ಚೆಯಲ್ಲಿ ಭಾಗವಹಿಸುವಂತಹ ಅನುಭವ ಮಂಟಪವೆಂಬ ಸಂಸತ್ತನ್ನು ಕಟ್ಟಿದ ವಿಶ್ವದ ಮೊದಲ ದಾರ್ಶನಿಕರು ಎಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಬಳ್ಳಾರಿಯ ನಿಷ್ಠಿ ರುದ್ರಪ್ಪ ಅವರು "ಕರ್ನಾಟಕದ ಸಂಸತಿಕ ನಾಯಕ ಬಸವೇಶ್ವರರು' ಎಂಬ ವಿಷಯದ ಕುರಿತು ಮಾತನಾಡಿ, ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರು ನುಡಿದಂತೆ ನಡೆದವರು. 12 ನೇ ಶತಮಾನದಲ್ಲಿ ಶೋಷಿತರ ಧ್ವನಿಯಾದವರು. ಅನೇಕ ಮೌಢ್ಯ ಆಚರಣೆಳನ್ನು ಅಳಿಸಿ ಸಮಾಜದ ಶ್ರೇಯೋಭಿವೃದ್ಧಿಗೆ ಮೌಲಿಕ ಸಂದೇಶಗಳನ್ನು ನೀಡಿದ್ದಾರೆ. ಪ್ರಸ್ತುತ ಈ ವಿಶ್ವಕ್ಕೆ ಬಸವಣ್ಣನವರ ತತ್ವ ಸಂದೇಶಗಳು ಬಹಳ ಅವಶ್ಯ ಎಂದು ಎಂದರು.
ವಿಧಾನ ಪರಿಷತ್ ಸದಸ್ಯ ಪ್ರೊ ಎಸ್. ವಿ. ಸಂಕನೂರ ಮಾತನಾಡಿ ವಿಶ್ವಗುರು ಬಸವೇಶ್ವರರು ಅಂದು ಜಾತಿರಹಿತ ಸಮಾಜವನ್ನು ಕಟ್ಟಬೇಕೆಂಬ ಅವರ ಆಶಯ ಇಂದಿಗೂ ಸಂರ್ಪೂಣವಾಗಿ ಯಶಸ್ವಿ ಆಗದಿರುವುದು ವಿಷಾದನೀಯ. ಬಸವೇಶ್ವರರು ಮೂಡನಂಬಿಕೆಗಳನ್ನು ಪ್ರಬಲವಾಗಿ ಅಲ್ಲಗಳೆದು ವೈಜ್ಞಾನಿಕ, ವೈಚಾರಿಕ ಹಿನ್ನೆಲೆಯಲ್ಲಿ ಸಮಾಜವನ್ನು ಕಟ್ಟಿದ ಸಮಾಜ ಚಿಂತಕರು ಎಂದರು.
ಮಾಜಿ ಸಚಿವ ಎಸ್ ಎಸ್ ಪಾಟೀಲ್ ಮಾತನಾಡಿ ಬಸವೇಶ್ವರರ ತತ್ವ ಚಿಂತನೆಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಸವ ಜಯಂತಿಗೆ ಅರ್ಥ ಬರುತ್ತದೆ ಎಂದರು.
ತೋಂಟದ ಸಿದ್ಧಲಿಂಗ ವಚನ ಪಾಠಶಾಲೆಯ ಅಡಿಯಲ್ಲಿ ಜರುಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಪ್ರೊ. ಶಕುಂತಲಾ ಸಿಂಧೂರ ಬರೆದ ಗದಗ ಜಿಲ್ಲೆಯ ಸಾಂಸತಿಕ ಕೊಡುಗೆಗಳು ಹಾಗೂ ಡಾ. ವೀರಣ್ಣ ರಾಜೂರ ಅವರು ಬರೆದ ಹಾಲಬಾವಿ ವೀರಭದ್ರಪ್ಪನವರು ಎಂಬ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು.
ವೀರೇಶ ಬುಳ್ಳಾ, ಮಲ್ಲಿಕಾರ್ಜುನ ನೇಗಿನಹಾಳ, ಅತಾ ಹಿರೇಮಠ, ರಾಜಗೋಪಾಲ ಕಡ್ಲಿಕೊಪ್ಪ, ಕೊಟ್ಟೂರೇಶ್ವರ ಕೋರಿ, ಸುರೇಶ, ಪಾರ್ವತಿ ಹಾಲಬಾವಿ, ರಶ್ಮಿ ಅಂಗಡಿ, ವಿನಾಯಕ ಮಾನ್ವಿ, ಶಕುಂತಲಾ ಸಿಂಧೂರ, ಡಾ. ಉಮೇಶ ಪುರದ, ರಮೇಶ ಕಲ್ಲನಗೌಡರ, ವಿವೇಕಾನಂದಗೌಡ ಪಾಟೀಲ, ದಾನಯ್ಯ ಗಣಾಚಾರಿ, ಕಳಸಾಪುರ ಶೆಟ್ಟರ, ಐ.ಬಿ. ಬೆನಕೊಪ್ಪ, ರತ್ನಕ್ಕ ಪಾಟೀಲ ಇತರರು ಇದ್ದರು.