ಗದಗ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಲ್ಲಿ ಅಂತಃಪ್ರಜ್ಞೆ ಪ್ರಕ್ರಿಯೆ ಪರಿಚಯಾತ್ಮಕ ವಿಷಯದ ಕುರಿತು ಏಪ್ಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಗೌರಿ ನಾಯರ್​ ಅವರನ್ನು ಸನ್ಮಾನಿಸಲಾಯಿತು. ಎಸ್​.ವೈ. ಚಿಕ್ಕಟ್ಟಿ, ಕುನಾಲ್​ ಕೇತಕಾಳಿ, ಜೆ. ಕೆ. ಜಮಾದಾರ, ಬಿಪಿನ್​ ಚಿಕ್ಕಟ್ಟಿ, ವಿನಯ ಚಿಕ್ಕಟ್ಟಿ, ಶೋಭಾ ಸ್ಥಾವರಮಠ, ಪುಷ್ಪಲತಾ ಬೆಲೇರಿ, ಶ್ರೀಶೈಲ ಬಡಿಗೇರ ಇತರರು ಇದ್ದರು. 
ರಾಜ್ಯ

ಸಮಯಕ್ಕೆ ಸರಿಯಾಗಿ ಬಾರದ ಬುದ್ಧಿ, ಸಾವಿರ ಬುದ್ಧಿ ಇದ್ದರೂ ರದ್ದಿ ಇದ್ದಂತೆ: ಗೌರಿ ನಾಯರ್​

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ಅಂತಃಪ್ರಜ್ಞೆ ಎಂಬುದು ನಮ್ಮ ಒಳಗಿನ ಜ್ಞಾನ. ಮನಸ್ಸು ಶಾಂತವಾಗಿದ್ದರೆ ಗಮನ ಕೇಂದ್ರಿಕೃತವಾಗಿದ್ದರೆ, ನಮ್ಮೊಳಗಿನ ಆಲೋಚನೆಗಳು ತಮ್ಮಷ್ಟಕ್ಕೆ ತಾವೇ ನಮ್ಮನ್ನು ಉತ್ತಮ ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ ಎಂದು ಬೆಂಗಳೂರಿನ ಆರ್ಟ ಆ್​ ಲಿವಿಂಗ್​ ಸೀನಿಯರ್​ ಇಂಟರ್​ ನ್ಯಾಶನಲ್​ ಟೀಚರ್​ ಗೌರಿ ನಾಯರ್​ ಹೇಳಿದರು.
ನಗರದ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಏರ್ಪಡಿಸಿದ್ದ ಅಂತಃಪ್ರಜ್ಞೆ ಪ್ರಕ್ರಿಯೆ ಪರಿಚಯಾತ್ಮಕ ವಿಷಯದ ಕುರಿತು ಏರ್ಪಡಿಸಿದ್ದ ಉಪನ್ಯಾಸದಲ್ಲಿ ಮಾತನಾಡಿದ ಅವರು, ಪಾಠಗಳನ್ನು ನೆನೆಪಿಟ್ಟುಕೊಳ್ಳುವ ಬದಲು ಅರ್ಥಮಾಡಿಕೊಳ್ಳಲು ಅಂತಃಪ್ರಜ್ಞೆ ಪ್ರಕ್ರಿಯೆ ಪರಿಚಯಾತ್ಮಕ ಸಹಾಯ ಮಾಡುತ್ತದೆ. ಪರೀೆಗಳಲ್ಲಿ, ಸ್ಪರ್ಧೆಗಳಲ್ಲಿ, ಸಮಸ್ಯೆಗೆ ಪರಿಹಾರ ನೀಡುವಲ್ಲಿ ವೇಗ ಮತ್ತು ನಿಖರತೆಯನ್ನು ನೀಡುತ್ತದೆ. ವಿಜ್ಞಾನ, ಕಲೆ, ಕ್ರೀಡೆ ಹೀಗೆ ಯಾವ ೇತ್ರದಲ್ಲಾದರೂ ಹೊಸತನದ ಚಿಂತನೆ ಬೆಳೆಯುತ್ತದೆ. ಆತ್ಮವಿಶ್ವಾಸ ಮತ್ತು ತಮ್ಮ ನಿರ್ಧಾರಗಳಲ್ಲಿ ಸ್ಥಿರವಾಗಿರುವಂತೆ ನೆರವಾಗುತ್ತದೆ. ಜ್ಞಾನ ಹೊರಗಿನಿಂದ ಬರುತ್ತದೆ. ವಿಚಾರಿಸುವುದನ್ನು, ಕಲ್ಪನೆ ಮಾಡುವುದನ್ನು ಮತ್ತು ಸ್ವತಃ ಯೋಚಿಸುವುದನ್ನು ವಿದ್ಯಾಥಿರ್ಗಳು ಕಲಿಯಬೇಕು. ಸಮಯಕ್ಕೆ ಸರಿಯಾಗಿ ಬಾರದ ಬುದ್ಧಿ, ಸಾವಿರ ಬುದ್ಧಿ ಇದ್ದರೂ ರದ್ದಿ ಇದ್ದಂತೆ. ಅಭ್ಯಾಸ ಮಾಡಿರುವ ಎಲ್ಲಾ ವಿಷಯ ನೆನೆಪಿನಲ್ಲಿ ಉಳಿಯಲು ನಿಮ್ಮೊಳಗಿನ ಅಂತಃಪ್ರಜ್ಞೆಯೇ ಮುಖ್ಯ ಕಾರಣ ಎಂದು ತಿಳಿಸಿದರು.
ಬೆಂಗಳೂರಿನ ಸುರಾನ್​ ವಿದ್ಯಾಲಯ ಪ್ರಾಂಶುಪಾಲ ಸಂದೀಪ್​ ಮಾತನಾಡಿ, ವಿದ್ಯಾಥಿರ್ಗಳೇ ನಿಮ್ಮೊಳಗೆ ಅನನ್ಯವಾದ ಸಾಮರ್ಥ್ಯ. ಕಲಿಯುವ ಕುತೂಹಲ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಶಕ್ತಿಯೇ ಅಂತಃಪ್ರಜ್ಞೆ. ನಮ್ಮ ಶಿಣ ವ್ಯವಸ್ಥೆಯ ಗುರಿ ಕೇವಲ ಪುಸ್ತಕ ಜ್ಞಾನ ಕಲಿಸುವುದಲ್ಲ. ವಿದ್ಯಾಥಿರ್ಗಳಲ್ಲಿ ಸ್ವಚಿಂತನೆ, ಸೃಜನಾತ್ಮಕತೆ, ನಿರ್ಧಾರದ ಶಕ್ತಿ ಹಾಗೂ ಅಂತರಂಗದ ಶಕ್ತಿಯನ್ನು ಅರಿಯುವ ಸಾಮರ್ಥ್ಯ ಬೆಳೆಸುವುದು. ವಿದ್ಯಾಥಿರ್ಗಳಲ್ಲಿರುವ ಅಂತಃಪ್ರಜ್ಞೆಯ ಲಣಗಳು, ಹೊಸದನ್ನು ಹುಡುಕುವ ಜಿಜ್ಞಾಸೆ, ಪ್ರಶ್ನಿಸುವ ಮನಸ್ಸು, ಸೃಜನಶೀಲ ಚಿಂತನೆ ಮತ್ತು ನಾನು ಮಾಡಬಲ್ಲೆ ಎಂಬ ಧೃಡವಾದ ನಂಬಿಕೆ ಇವುಗಳಿಂದಲೇ ತಾವು ಎಲ್ಲರಿಗಿಂತ ವಿಭಿನ್ನವಾದ ಜ್ಞಾನ ಹೊಂದಿ ಬುದ್ಧಿವಂತರಾಗಲು ಸಾಧ್ಯ ಎಂದು ತಿಳಿಸಿದರು.
ವಿದ್ಯಾದಾನ ಸಮಿತಿಯ ಅಧ್ಯ ಶ್ರೀನಿವಾಸ ಹುಯಿಲಗೋಳ ಮಾತನಾಡಿ, ಯೋಗ ಕೇವಲ ವ್ಯಾಯಾಮವಲ್ಲ. ಮನಸ್ಸು, ದೇಹ, ಪ್ರಾಣ ಮತ್ತು ಭಾವನೆಗಳನ್ನು ಸಮತೋಲನಗೊಳಿಸುವ ಒಂದು ಪಾಠ. ನಿಮ್ಮ ದೇಹವನ್ನು ಬಲಿಷ್ಠವಾಗಿ, ಮನಸ್ಸನ್ನು ಶಾಂತವಾಗಿ ಮತ್ತು ಚಿಂತನೆಗಳನ್ನು ಸ್ಪಷ್ಠವಾಗಿ ರೂಪಿಸುತ್ತದೆ. ವಿದ್ಯಾಥಿರ್ಗಳಲ್ಲಿ ಏಕಾಗ್ರತೆಯನ್ನು ವೃದ್ಧಿಸಿ, ಪಾಠದಲ್ಲಿ ಗಮನ ಕೊಡಲು ಸಹಾಯ ಮಾಡುತ್ತದೆ. ಅದರ ಜೊತೆಗೆ ಶಿಸ್ತಿನ ಜೀವನ ಶೈಲಿಯನ್ನು ಬೆಳೆಸುತ್ತದೆ. ಧ್ಯಾನವು ನಮ್ಮೊಳಗಿನ ಶಕ್ತಿ, ಜಗತ್ತಿನ ಶಬ್ದ ಗದ್ದಲಗಳಿಂದ ದೂರವಾಗಿ, ಸ್ವತಃ ನಿಮ್ಮೊಳಗೆ ಶಾಂತಿ ಮತ್ತು ಸಮಾಧಾನವನ್ನು ಕಂಡುಕೊಳ್ಳುವ ಪ್ರಕ್ರಿಯೆ ಆಗಿದೆ ಎಂದರು.
ಅಧ್ಯ ಪ್ರೊ. ಎಸ್​. ವೈ ಚಿಕ್ಕಟ್ಟಿ ಮಾತನಾಡಿ, ವಿದ್ಯಾಥಿರ್ಗಳಲ್ಲಿರುವ ಅಂತಃಪ್ರಜ್ಞೆಯೇ ಆಳವಾದ ಜ್ಞಾನ. ಅಂತಃಪ್ರಜ್ಞೆ ಪ್ರತಿ ವಿದ್ಯಾಥಿರ್ಯಲ್ಲೂ ಸಹಜವಾಗಿ ಅಡಗಿದೆ. ಅದನ್ನು ಜಾಗೃತಗೊಳಿಸುವುದು ನಮ್ಮ ಶಿಣದ ಮುಖ್ಯ ಗುರಿಗಳಲ್ಲಿ ಒಂದು. ಮಕ್ಕಳು ಯೋಗ, ಧ್ಯಾನದ ಕುರಿತು ಮನೆಯಲ್ಲೂ ಅನುಸರಿಸಿದರೆ ಅವರ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ತರಲು ಸಾಧ್ಯ. ಪಾಲಕರ ಸಹಕಾರವಿಲ್ಲದೆ ಯಾವುದು ಸಾಧ್ಯವಿಲ್ಲ. ಮಕ್ಕಳಿಗೆ ಯೋಗ ಧ್ಯಾನ ಮಹತ್ವದ ಕುರಿತು ಅರಿಯಲು ಪಾಲಕರು ಸಯಮ ಮೀಸಲಿಡಬೇಕು ಎಂದರು.
ಕಾರ್ಯಕ್ರಮದಲ್ಲಿ ಗೌರಿ ನಾಯರ ಅವರನ್ನು ಸನ್ಮಾನಿಸಲಾಯಿತು. ಕುನಾಲ್​ ಕೇತಕಾಳಿ, ಜೆ. ಕೆ. ಜಮಾದಾರ, ಬಿಪಿನ್​ ಚಿಕ್ಕಟ್ಟಿ, ವಿನಯ ಚಿಕ್ಕಟ್ಟಿ, ಶೋಭಾ ಸ್ಥಾವರಮಠ, ಪುಷ್ಪಲತಾ ಬೆಲೇರಿ, ಶ್ರೀಶೈಲ ಬಡಿಗೇರ ಇತರರು ಇದ್ದರು.