ಗದಗ ಡಯಟ್​ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸಮಗ್ರ ಶಿಣ ಇಲಾಖೆ ಸಹಯೋಗದಲ್ಲಿ ಶನಿವಾರ 9 ರಿಂದ 12ನೇ ತರಗತಿಯ ವಿದ್ಯಾಥಿರ್ಗಳಿಗೆ ಏರ್ಪಡಿಸಲಾಗಿದ್ದ ಕೆರಿಯರ್​ ಮೇಳವನ್ನು ಜಿಲ್ಲಾಧಿಕಾರಿ ಸಿ.ಎನ್​. ಶ್ರೀಧರ ಉದ್ಘಾಟಿಸಿದರು. ಡಾ. ಜಿ. ಎಚ್​.ಇಮ್ರಾಪೂರ, ವಿ. ವಿ. ನಡುವಿನಮನಿ, ಬಿ. ಎ್​.ಅರವಟಗಿ, ಕೆ. ವೈ. ವಿಭೂತಿ, ವಿಜಯ ಕಿರೇಸೂರ, ಶೈಲಜಾ ತಟ್ಟಿ, ಶ್ರೀನಿವಾಸ ಕುಲಕಣಿರ್, ಎಚ್​. ಬಿ. ರಡ್ಡೇರ, ಯಲ್ಲಪ್ಪ ಹಂದ್ರಾಳ, ಜಿ. ಡಿ. ದಾಸರ, ಕೆ. ಎಸ್​. ಹೂಲಗೇರಿ, ಸುಧಾ ಬನಿಕಲ್​, ಅಧೀಕ ಪ್ರಶಾಂತ ಸರ್ವಂದ, ಎಸ್​. ಆರ್​. ನದಾ ಇತರರು ಇದ್ದರು. 
ರಾಜ್ಯ

ಕೆರಿಯರ್​ ಮೇಳದಿಂದ ವಿದ್ಯಾಥಿರ್ಗಳ ಭವಿಷ್ಯ ರೂಪುಗೊಳ್ಳಲಿ: ಸಿ. ಎನ್​. ಶ್ರೀಧರ

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ವಿದ್ಯಾಥಿರ್ಗಳು ಭವ್ಯ ಭವಿಷ್ಯ ರೂಪಿಸಿಕೊಳ್ಳಲು ಉದ್ಯೋಗಕ್ಕಾಗಿ ಓದುವುದು ಅವಶ್ಯವಾಗಿದೆ. ವೃತ್ತಿ ಮಾರ್ಗದರ್ಶನ ಪಡೆದಿರುವ ವ್ಯಕ್ತಿಗೆ ಈ ದಾರಿ ಸುಗಮಗೊಳ್ಳುವುದು, ಅಂತಹ ಸುಂದರ ಭವಿಷ್ಯವನ್ನು ಸುಗಮಗೊಳಿಸಲು ಈ ಕೆರಿಯರ್​ ಮೇಳ ಪೂರಕ ಆಗಲಿದೆ ಎಂದು ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ ಹೇಳಿದರು.
ನಗರದ ಡಯಟ್​ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸಮಗ್ರ ಶಿಣ ಇಲಾಖೆ ಸಹಯೋಗದಲ್ಲಿ ಶನಿವಾರ 9 ರಿಂದ 12ನೇ ತರಗತಿಯ ವಿದ್ಯಾಥಿರ್ಗಳಿಗೆ ಏರ್ಪಡಿಸಲಾಗಿದ್ದ ಕೆರಿಯರ್​ ಮೇಳ&2026 ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾಥಿರ್ಗಳು ಮುಂದಿನ ಜೀವನ ರೂಪಿಸಿಕೊಳ್ಳಲು ವೃತ್ತಿ ಮಾರ್ಗದರ್ಶನ ಟಕವನ್ನು ರಾಜ್ಯದ ಎಲ್ಲ ಜಿಲ್ಲೆಯ ಡಯಟ್​ಗಳಲ್ಲಿ ತೆರೆಯುವ ಸರ್ಕಾರ ಆದೇಶ ನೀಡಿದ್ದು ಅದರ ಅನ್ವಯ ಗದುಗಿನಲ್ಲಿಯೂ ಈ ಟಕವನ್ನು ಇಂದು ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ಜಿಲ್ಲೆಯ ವಿದ್ಯಾಥಿರ್ ವಿದ್ಯಾಥಿರ್ನಿಯರು ಟಕದಲ್ಲಿರುವ ವಿಷಯ ತರೊಂದಿಗೆ ಸಮಾಲೋಚಿಸಿ ಮಾರ್ಗದರ್ಶನ ಪಡೆದುಕೊಳ್ಳಬೇಕು. ಜೊತೆಗೆ ವೃತ್ತಿ ಮಾರ್ಗದರ್ಶನಕ್ಕೆ ಪೂರಕವಾದ ಅತ್ಯಮೂಲ್ಯ ಗ್ರಂಥಗಳು, ಉನ್ನತ ಕೋರ್ಸಗಳ ವ್ಯಾಸಂಗಕ್ಕೆ ಅಗತ್ಯ ಪುಸ್ತಕಗಳಿದ್ದು ವಿದ್ಯಾಥಿರ್ಗಳು ಅಧ್ಯಯನ ಮಾಡಬಹುದು. ಕಂಪ್ಯೂಟರ್​ ಇಂಟರ್​ನೆಟ್​ ಸೌಲಭ್ಯವೂ ಇದ್ದು ವಿದ್ಯಾಥಿರ್ಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ವಿದೇಶಗಳಲ್ಲಿ ವ್ಯಾಸಂಗ ಮಾಡುವದಕ್ಕೂ ಭಾರತದಲ್ಲಿ ಮಾಡುವುದಕ್ಕೂ ಇಂದಿನ ದಿನಗಳಲ್ಲಿ ಬಹಳ ವ್ಯತ್ಯಾಸವಿಲ್ಲ. ವಿದೇಶಗಳಲ್ಲಿ ದೊರಕುವಂತಹ ಎಲ್ಲ ರೀತಿಯ ಸಂಪನ್ಮೂಲಗಳು, ವಿಷಯ ತರು ಭಾರತದಲ್ಲಿಯೂ ಸಹ ಇದ್ದು ಕಲಿಕಾ ಸಾಮಗ್ರಿ, ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಸಾಧಿಸಬೇಕೆಂಬ ಛಲದೊಂದಿಗೆ ಉನ್ನತ ಅಧ್ಯಯನ, ಉನ್ನತ ಸಾಧನೆ ಮಾಡಬಹುದು. 9 ರಿಂದ 12ನೇ ತರಗತಿಯ ವಿದ್ಯಾಥಿರ್ಗಳು ವೃತ್ತಿ ಮಾರ್ಗದರ್ಶನ ಪಡೆದುಕೊಂಡಿದ್ದರೆ ಅರ್ಧ ದಾರಿ ಕ್ರಮಿಸಿದಂತೆ. ಪಿಯುಸಿ ನಂತರ ಅವಕಾಶಗಳು ಹೆರಳವಾಗಿದ್ದು ಸಾಧನೆಯ ಸೂಕ್ತ ಮಾರ್ಗವನ್ನು ಕಂಡುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಸಿ. ಎನ್​. ಶ್ರಿಧರ ಅವರು ತಿಳಿಸಿದರು.
ಅಧ್ಯತೆ ವಹಿಸಿ ಮಾತನಾಡಿದ ಜಿಲ್ಲಾ ಶಿಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೆಶಕ ಜಿ.ಎಂ.ಮುಂದಿನಮನಿ, ವಿದ್ಯಾಥಿರ್ ವಿದ್ಯಾಥಿರ್ನಿಯರು ವೃತ್ತಿ ಬಗ್ಗೆ ಅರಿತುಕೊಳ್ಳಲು ಹಾಗೂ ಭವಿಷ್ಯ ರೂಪಿಸಿಕೊಳ್ಳಲು ಈ ಕೆರಿಯರ್​ ಮೇಳಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಜಿಲ್ಲೆಯ 865 ವಿದ್ಯಾಥಿರ್ಗಳು ಮೇಳದಲ್ಲಿ ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡಿದ್ದು ಈ ಮಾಹಿತಿ ಅವರ ಭವಿಷ್ಯವನ್ನು ರೂಪಿಸುವಂತಾಗಲಿ ಎಂದರು.
ಹಾವೇರಿ ಜಿಲ್ಲಾ ವಯಸ್ಕರ ಶಿಣಾಧಿಕಾರಿ ಡಾ. ಬಿ. ಎಂ. ಬೇವಿನಮರದ ಮಾತನಾಡಿ, ಎಸೆಸೆಲ್ಸಿ, ಪಿಯುಸಿ ನಂತರ ವೃತ್ತಿ ಅವಕಾಶಗಳು ಕುರಿತು ಉಪನ್ಯಾಸ ನೀಡಿದರು. ನಾವಿಂದು ಭ್ರಮೆಯ ಲೋಕದಲ್ಲಿದ್ದೇವೆ. ಬದಲಾಗಿ ವಾಸ್ತವಿಕ ಬದುಕಿಗೆ ಒತ್ತು ನೀಡಬೇಕು. ಇದು ಸ್ಪರ್ಧಾತ್ಮಕ ಯುಗವಾಗಿದ್ದು ಕಲಿಯುವ ಆಸಕ್ತಿ ಸಾಧಿಸುವ ಛಲವಿದ್ದರೆ ಸಾಧನೆ ಸುಗಮಗೊಳ್ಳುವದು. ಸಾಧಿಸಬೇಕೆನ್ನುವ ವಿದ್ಯಾಥಿರ್ಗಳಿಗೆ ಪೋಷಕರ ಸಲಹೆ, ಶಿಕರ ಮಾರ್ಗದರ್ಶನ ಆಪ್ತ ಸಮಾಲೋಚನೆ ಅಗತ್ಯ ಎಂದರು.
ಇಗ್ನೋದ ವಿಶ್ರಾಂತ ಪ್ರಾದೇಶಿಕ ನಿರ್ದೆಶಕ ಡಾ. ಜಿ. ಎಚ್​.ಇಮ್ರಾಪೂರ ಸಿಇಟಿ, ಎನ್​ಇಇಟಿ, ಜೆಇಇ, ಎನ್​ಡಿಎ, ಎಸ್​ಡಿಎ ಸ್ಪರ್ಧಾತ್ಮಕ ಪರೀೆಗಳ ಮಾಹಿತಿ, ಪರೀೆ ಎದುರಿಸುವ ಬಗೆಯನ್ನು ವಿವರಿಸಿದರು.
ಗದಗ ಜಿಲ್ಲಾ ಚಿತ್ರಕಲಾ ಶಿಕರಿಂದ ಚಿತ್ರಪ್ರದರ್ಶನ, ವಿವಿದ ಇಲಾಖೆ ಯೋಜನೆಗಳ ಕುರಿತು ಹಾಗೂ ಶಾಲಾ ವಿದ್ಯಾಥಿರ್ಗಳ ವಿಜ್ಞಾನ ಗಣಿತ ಪ್ರಯೋಗಳ ಮಳಿಗೆ ಜನಮನ ಸೆಳೆದವು.
ಗದಗ ಗ್ರಾಮೀಣ ೇತ್ರ ಶಿಣಾಧಿಕಾರಿ ವಿ. ವಿ. ನಡುವಿನಮನಿ, ಡಯಟ್​ ಹಿರಿಯ ಉಪನ್ಯಾಸಕ ಬಿ.ಎ್​.ಅರವಟಗಿ, ಡಯಟ್​ ಉಪನ್ಯಾಸಕ ಕೆ. ವೈ. ವಿಭೂತಿ, ಜಿಲ್ಲಾ ಚಿತ್ರಕಲಾ ಶಿಕರ ಸಂದ ಅಧ್ಯ ವಿಜಯ ಕಿರೇಸೂರ, ಅಧೀಕ ಶೈಲಜಾ ತಟ್ಟಿ, ಡಯಟ್​ ಅಧೀಕ ಶ್ರೀನಿವಾಸ ಕುಲಕಣಿರ್, ಎಚ್​. ಬಿ. ರಡ್ಡೇರ, ಯಲ್ಲಪ್ಪ ಹಂದ್ರಾಳ, ಜಿ. ಡಿ. ದಾಸರ, ಕೆ. ಎಸ್​. ಹೂಲಗೇರಿ, ಸುಧಾ ಬನಿಕಲ್​, ಅಧೀಕ ಪ್ರಶಾಂತ ಸರ್ವಂದ, ಎಸ್​. ಆರ್​. ನದಾ ಇತರರು ಇದ್ದರು.