ಗದಗ ನಗರದ ಕೆಎಲ್​ಇ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯನ್ನು ಜಯಶ್ರೀ ಹಿರೇಮಠ ಉದ್ಘಾಟಿಸಿದರು. ಸುಲೋಚನಾ ಕಟಗಿ, ಅಸುಂಡಿಯ ಸೂಲಗಿತ್ತಿ, ರೇಣವ್ವ ಪೂಜಾರ, ಡಾ. ಲಕ್ಷಿ$್ಮ ಕಿಲ್ಲೇದಾರ, ಡಾ. ರಮೇಶ ಇತರರು ಇದ್ದರು. 
ರಾಜ್ಯ

ಶಕ್ತಿ ಮತ್ತು ವಯಸ್ಸಿದ್ದಾಗ ಜೀವನ ರೂಪಿಸಿಕೊಳ್ಳಿ: ಜಯಶ್ರೀ ಹಿರೇಮಠ

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ಬದುಕು ಹಸನಾಗಬೇಕಾದರೆ ಪ್ರತಿಯೊಬ್ಬರು ಯಾವುದಾದರೊಂದು ಕೆಲಸವನ್ನು ಮಾಡಬೇಕು. ಒಬ್ಬರಿಂದಲೇ ಆಥಿರ್ಕ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಜಯಶ್ರೀ ಹಿರೇಮಠ ಹೇಳಿದರು.
ಕೆಎಲ್​ಇ ಸಂಸ್ಥೆಯ ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಧಕ ಮಹಿಳೆಯರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಯಾವುದಾದರೊಂದು ಕಾಯಕದಲ್ಲಿ ತೊಡಗಿಸಿಕೊಳ್ಳವುದು ಜೀವನಮಟ್ಟ ಸುಧಾರಣೆಗೆ ರಹದಾರಿ ಇದ್ದಂತೆ. ಯಾವುದೇ ಕೆಲಸವಾಗಲಿ ಪ್ರಾಮಾಣಿಕತೆ, ನಿಷ್ಟೆ, ಕಾಳಜಿ, ಶಿಸ್ತು, ತಾಳ್ಮೆಯಿಂದ ಮಾಡಬೇಕು. ಇದರಿಂದ ನಿರುದ್ಯೋಗ ಸಮಸ್ಯೆ ಬಗೆಹರಿಯುತ್ತದೆ. ಓದುವುದು ಸರ್ಕಾರಿ ನೌಕರಿಗಾಗಿ ಎಂಬ ಧೋರಣೆಯಿಂದ ಹೊರಬಂದು ಭವಿಷ್ಯದ ಬದುಕು ರೂಪಿಸಿಕೊಳ್ಳುವುದಕ್ಕೆ ಎಂಬ ತಿಳುವಳಿಕೆಯನ್ನು ಹೊಂದಬೇಕು. ಶಕ್ತಿ ಇದ್ದಾಗ, ವಯಸ್ಸಿದ್ದಾಗ ಜೀವನ ರೂಪಿಸಿಕೊಳ್ಳಬೇಕು ಎಂದರು.
ಯುವಕ ಯವತಿಯರಿಗೆ ಉದ್ಯೋಗದ ಅವಕಾಶಗಳನ್ನು ರೂಪಿಸಿಕೊಳ್ಳಲು ಪೂರಕವಾದ ಅನೇಕ ಯೋಜನೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವು ಯೋಜನೆಗಳು ಜಾರಿ ತಂದಿವೆ. ಯೋಜನೆಗಳ ಸದುಪಯೋಗ ಮಾಡಿಕೊಂಡರೆ ಯುವಕ ಯುವತಿಯರು ಅನೇಕರಿಗೆ ಉದ್ಯೋಗ ನೀಡಿ ತಾವೂ ಆಥಿರ್ಕ ಅಭಿವೃದ್ಧಿಯ ಪಥದೊಳಗೆ ಸಾಗಬಹುದಾಗಿದೆ ಎಂದು ಹೇಳಿದರು.
ಸುಲೋಚನಾ ಕಟಗಿ, ಅಸುಂಡಿಯ ಸೂಲಗಿತ್ತಿ, ರೇಣವ್ವ ಪೂಜಾರ, ಡಾ. ಲಕ್ಷಿ$್ಮ ಕಿಲ್ಲೇದಾರ, ಡಾ. ರಮೇಶ ಇತರರು ಇದ್ದರು.