ಹೆತ್ತಕ್ಕಿ ಗ್ರಾಮದಲ್ಲಿ ಚರಂಡಿಯಲ್ಲಿ ತ್ಯಾಜ್ಯ ತುಂಬಿರುವುದು.
ಬೆಂಗಳೂರು ದೇಶದಲ್ಲೇ ಪ್ರಸಿದ್ಧಿ ಹೊಂದಿದ್ದರೂ ರಾಜಧಾನಿಗೆ ಕೂಗಳತೆ ದೂರದಲ್ಲಿರುವ ಹೋಸಕೋಟೆ ತಾಲೂಕು ನಂದಗುಡಿ ಹೋಬಳಿಯ ಹಲವು ಗ್ರಾಮಗಳಲ್ಲಿ ಇಂದಿಗೂ ಕುಡಿಯುವ ನೀರು, ಚರಂಡಿ ನಿರ್ವಹಣೆ ಕಾಣದೆ ಪರಿತಪಿಸುವ ಪರಿಸ್ಥಿತಿ ಜೀವಂತವಾಗಿದೆ.
ಹೆತ್ತಕ್ಕಿ ಗ್ರಾಪಂ ವ್ಯಾಪ್ತಿಯ ಮಾರಸಂಡಹಳ್ಳಿ, ಹೆತ್ತಕ್ಕಿ, ಬಂಡಹಳ್ಳಿ, ಬಾಣಮಾಕನಹಳ್ಳಿ, ಲಿಂಗಾಪುರ, ಅಗಸರಹಳ್ಳಿ, ಬೀರಹಳ್ಳಿ, ಓಬಳಹಳ್ಳಿ, ಸತ್ಯಗಾನಹಳ್ಳಿ, ಹುಳುವನಹಳ್ಳಿ 10 ಕಂದಾಯ ಗ್ರಾಮಗಳು ಮೂರು ಮಜರಾ ಗ್ರಾಮಗಳು ಒಳಪಟ್ಟಿದ್ದು, ವಾರ್ಷಿಕ 18 ಲಕ್ಷ ರೂ. ತೆರಿಗೆ ವಸೂಲಿ ಮಾಡಲಾಗುತ್ತದೆ. ಆದರೆ, ಹಣ ಕೈ ಸೇರಿದ ಮೇಲೆ ಜನರ ಆಗು&ಹೋಗುಗಳ ಬಗ್ಗೆ ಜಿಲ್ಲಾಡಳಿತವಾಗಲೀ, ತಾಲೂಕು ಆಡಳಿತವಾಗಲೀ ಜನರಿಂದಲೇ ಆಯ್ಕೆಯಾಗಿ ಅಧಿಕಾರದ ಗದ್ದುಗೆ ಏರಿದ ಜನಪ್ರತಿನಿಧಿಗಳಾಲೀ ತಮಗೂ ಜನರ ಸಮಸ್ಯೆಗೂ ಸಂಬಂಧವಿಲ್ಲದಂತೆ ವರ್ತಿಸುವ ಮೂಲಕ ಅಮಾನವೀಯ ಕಾಲಟ್ಟಸೃಷ್ಟಿಸುತ್ತಿದ್ದಾರೆ.
ಈ ಎಲ್ಲ ಗ್ರಾಮಗಳಲ್ಲಿ ಅಬ್ಬಬ್ಬಾ ಅಂದರೂ 6 ಸಾವಿರ ಜನ ವಾಸಿಸುತ್ತಿದ್ದು, ಪಂಚಾಯಿತಿಗೆ ಆಯಾ ಗ್ರಾಮಗಳಿಂದ 12 ಮಂದಿ ಸದಸ್ಯರು ಆಯ್ಕೆಯಾಗಿ ಹೋಗಿದ್ದರೂ ಮೂಲ ಸೌಲಭ್ಯಒದಗಿಸುವಲ್ಲಿ ವಿಲರಾದರು. 15ನೇ ಹಣಕಾಸು ಯೋಜನೆಯಡಿ 30 ಲಕ್ಷ ರೂ. ಬಂದಿದ್ದರೂ ಗ್ರಾಮಗಳಲ್ಲಿ ಚರಂಡಿಸ್ವಚ್ಛತೆ ಕಾಣದೆ ಗಬ್ಬು ನಾರುತ್ತಿವೆ.
ಓಬಳಹಳ್ಳಿ, ಬಾಣಮಕನಹಳ್ಳಿಯಲ್ಲಿ ಶುದ್ಧ ನೀರಿನ ಘಟಕ ಇದ್ದರೂ ಇಲ್ಲದಂತಾಗಿದೆ.ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಮಾರಸಂಡಳ್ಳಿ, ಬಂಡಹಳ್ಳಿಯಲ್ಲಿ ನೀರಿಗೆ ಹಾಹಾಕಾರ ಉಂಟಾಗಿದ್ದು, ಖಾಸಗಿ ಕೊಳೆಬಾವಿಗಳಿಂದ ಸರಬರಾಜು ಮಾಡಲಾಗುತ್ತಿದೆ. ಜಲಜೀವನ್ ಮಿಷನ್ ಕಾಮಗಾರಿ ಅಧೋಗತಿಯಾಗಿದ್ದು, ಅರ್ಧಕ್ಕೆ ನಿಂತಿದ್ದು, ಬೀದಿದೀಪ ನಿರ್ವಹಣೆಯೂ ಹಳ್ಳ ಹಿಡಿದಿದೆ. ಇಷ್ಟೇಲ್ಲ ಸಮಸ್ಯೆಗಳು ಸ್ಥಳಿಯ ಅಧಿಕಾರಿಗಳು ಮತ್ತು ಸದಸ್ಯರಿಗೆ ಅರಿವಿದ್ದರೂ ಸಹ ಹಣ ಬಿಡುಗಡೆಯಾಗಲಿ ಮಾಡಿಸೋಣ ಎಂಬ ಹಾರಿಕೆ ಉತ್ತರ ಬಿಟ್ಟರೆ ಬೇರೇನೂ ಬರುವುದಿಲ್ಲ.
ಕಸ ವಿಲೇವಾರಿ, ಚರಂಡಿ ನಿರ್ವಹಣೆ ಮತ್ತು ಶುದ್ಧ ಕುಡಿಯುವ ನೀರು ಪೂರೈಕೆ, ಬೀದಿದೀಪ ನಿರ್ವಹಣೆಯನ್ನು ಸ್ಥಳಿಯ ಸರ್ಕಾರಗಳು ಮಾಡಬೇಕು. ಅಲ್ಲದೆ, ಮೂಲಸೌಕರ್ಯ ಅಭಿವೃದ್ಧಿಪಡಿಸಿ, ಗ್ರಾಮಸ್ಥರಿಗೆ ಆಡಳಿತ ಹತ್ತಿರವಾಗಿಸುತ್ತವೆ. ಆದ್ದರಿಂದ ಸರ್ಕಾರ ಸ್ಥಳಿಯ ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡುವುದು ಬಿಟ್ಟು ತ್ವರಿತವಾಗಿ ಚುನಾವಣೆ ನಡೆಸಿದರೆ ಸೂಕ್ತ.
ಜಲಜೀವನ ಮಿಷನ್ ಕಾಮಗಾರಿ ಯಾವ ಗ್ರಾಮದಲ್ಲೂ ಇನ್ನೂ ಪೂರ್ಣಗೊಂಡಿಲ್ಲ. ಘನತ್ಯಾಜ್ಯ ಘಟಕ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಬೀದಿ ದೀಪ ನಿರ್ವಹಣೆ, ನೈರ್ಮಲ್ಯ ನಿರ್ವಹಣೆ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆ ಪಡೆದು ಗ್ರಾಮಗಳ ಸಮಸ್ಯೆಬಗೆಹರಿಸಲಾಗುವುದು.