ಹುಕ್ಕೇರಿ ಪಟ್ಟಣದ ಪಿಕಾರ್ಡ್ ಬ್ಯಾಂಕ್ನಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಶರಣು ತಳ್ಳಿಕೇರಿ ಅವರನ್ನು ಸನ್ಮಾನಿಸಲಾಯಿತು. ನಿಖಿಲ ಕತ್ತಿ, ಮಹಾವೀರ ನಿಲಜಗಿ, ಸತ್ಯಪ್ಪ ನಾಯಿಕ, ಸತೀಶ ಅಪ್ಪಾಜಿಗೋಳ ಇತರರಿದ್ದರು.
ಹುಕ್ಕೇರಿ: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಭಾರತೀಯ ಜನತಾ ಪ ಹಮ್ಮಿಕೊಂಡಿರುವ ಪ್ರತಿಭಟನೆ ಮತ್ತು ಸುವರ್ಣ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮದಲ್ಲಿ ಹುಕ್ಕೇರಿ ತಾಲೂಕಿನಿಂದ 3 ಸಾವಿರಕ್ಕೂ ಅಧಿಕ ಜನ ಭಾಗವಹಿಸುವರು ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಸ್ಥಳಿಯ ಪಿಕಾರ್ಡ್ ಬ್ಯಾಂಕ್ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಗೋವಿನಜೋಳಕ್ಕೆ ಬೆಂಬಲ ಬೆಲೆ, ಕಬ್ಬಿಗೆ ಪ್ರೋತ್ಸಾಹ ಧನ ಹೆಚ್ಚಳ ಸೇರಿ ಹಲವಾರು ವಿಷಯಗಳಲ್ಲಿ ರಾಜ್ಯ ಸರ್ಕಾರ ರೈತ ಮತ್ತು ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಆದ್ದರಿಂದ ಬಿಜೆಪಿ ಪ ಇದನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿಮುಟ್ಟಿಸುವ ಕಾರ್ಯ ಮಾಡಲಾಗುತ್ತದೆ ಎಂದರು.
ಬಿಜೆಪಿ ಪದ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಮಾತನಾಡಿ, ರಾಜ್ಯ ಸರ್ಕಾರ ಯಾವಾಗ ತೊಲಗುತ್ತದೆ ಎಂಬ ಭಾವ ಜನರಲ್ಲಿ ಮೂಡಿದೆ. ಮುಖ್ಯಮಂತ್ರಿ ಕುರ್ಚಿ ಕಿತ್ತಾಟದಲ್ಲಿ ಜನಪರ ಕಾರ್ಯಗಳನ್ನು ಮರೆತಿರುವುದರಿಂದ ಜನ ಬೇಸತ್ತು ಹೋಗಿದ್ದಾರೆ. ಅದಕ್ಕಾಗಿ ಜನಪರ ಕಾರ್ಯ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಪದ ಚಿಕ್ಕೋಡಿ ಜಿಲ್ಲಾ ಅಧ್ಯ ಸತೀಶ ಅಪ್ಪಾಜಿಗೋಳ, ಪ್ರಧಾನ ಕಾರ್ಯದರ್ಶಿ ಅಮೃತ ಕುಲಕರ್ಣಿ, ರೈತ ಮೋರ್ಚಾ ಅಧ್ಯ ರಾಜು ಹರಗನ್ನವರ ಮಾತನಾಡಿದರು.
ಬೆಮುಲ್ ನಿರ್ದೇಶಕ ರಾಯಪ್ಪ ಡೂಗ, ವಿದ್ಯುತ್ ಸಹಕಾರ ಸಂದ ಅಧ್ಯ ಮಹಾವೀರ ನಿಲಜಗಿ, ನಿರ್ದೇಶಕರಾದ ಕಲಗೌಡ ಪಾಟೀಲ, ಸತ್ಯಪ್ಪ ನಾಯಿಕ, ಶಿವಾನಂದ ಮುಡಸಿ, ಕೆಂಪಣ್ಣ ವಾಸೇದಾರ, ಮಹಾದೇವ ರಸಾಗರ, ಮುಖಂಡರಾದ ಮಹಾನಿಂಗ ಸನದಿ, ಸುನೀಲ ಪರ್ವತರಾವ, ಗುರು ಕುಲಕರ್ಣಿ, ಸುನೀಲ ನೇರ್ಲಿ, ಶೀತಲ ಬ್ಯಾಳಿ, ಎ.ಕೆ.ಪಾಟೀಲ, ಪ್ರಶಾಂತ ಪಾಟೀಲ, ಆದರ್ಶ ಅಂಕಲಗಿ, ಲಿಂಗರಾಜ ನಾಯಕ, ರೋಹನ ನೇಸರಿ, ರವಿ ಪರಕನಟ್ಟಿ, ರಾಜು ಮುನ್ನೋಳಿ, ಸುರೇಶ ತೇರಣಿ, ದಯಾನಂದ ಅಮ್ಮಣಗಿ, ಶಮೀರ್ಳಾ ಬಡಮಲ್ಲನವರ, ಸವಿತಾ ಏಣಗಿಮಠ, ಸಂಗೀತಾ ಮಾನಗಾಂವಿ, ಮಂಜುಳಾ ವಾಲಿ, ತ್ರಿವೇಣಿ ಕಾಂಬಳೆ, ಪುಷ್ಪಾ ಹೊಸಮನಿ, ಜ್ಯೋತಿ ವಿಭೂತಿಮಠ ಇತರರಿದ್ದರು. ಮಂಡಲ ಅಧ್ಯ ರಾಚಯ್ಯ ಹಿರೇಮಠ ಸ್ವಾಗತಿಸಿದರು. ಗೋಪಾಲ ಚನಗೌಡರ ನಿರೂಪಿಸಿದರು.