ಕಲಬುರಗಿಯಲ್ಲಿ ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಬುಧವಾರ ಏರ್ಪಡಿಸಿದ್ದ ಉದ್ಯಮಿಗಳ ಜತೆ ಸಂವಾದ ಕಾರ್ಯಕ್ರಮದಲ್ಲಿ ಉಪ ಪೊಲೀಸ್ ಆಯುಕ್ತೆ ಶಾಲೂ ಅವರನ್ನು ಸನ್ಮಾನಿಸಲಾಯಿತು. ಸತ್ಯನಾಥ ಶೆಟ್ಟಿ, ನರಸಿಂಹ ಮೆಂಡನ್, ಗಿರಿಧರ ಭಟ್, ಮೊಯಿನುದ್ದೀನ್, ಶರಣು ಪಾಟೀಲ್, ಮಾಲಾ ಕಣ್ಣಿ ಇತರರಿದ್ದರು.
- ಕಲಬುರಗಿ ಡಿಸಿಪಿ ಶಾಲೂ ಅಭಯ
- ಹೋಟೆಲ್ ಅಸೋಸಿಯೇಷನ್ನಿಂದ ಸಂವಾದ ಕಾರ್ಯಕ್ರಮ
ಕಲಬುರಗಿ: ಹೋಟೆಲ್ ಉದ್ಯಮಿಗಳು ಕಾನೂನು ಚೌಕಟ್ಟಿನಲ್ಲಿ ಸುಗಮವಾಗಿ ವ್ಯಾಪಾರ ವಹಿವಾಟು ನಡೆಸಲು ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಪೊಲೀಸ್ ಉಪ ಆಯುಕ್ತೆ (ಕಾನೂನು ಮತ್ತು ಭದ್ರತೆ) ಶಾಲೂ ಹೇಳಿದರು.
ಸಾರ್ವಜನಿಕ ಉದ್ಯಾನವನದ ಯಾತ್ರಿಕ ನಿವಾಸ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಹೋಟೆಲ್, ಬೇಕರಿ ಮತ್ತು ವಸತಿಗೃಹ ಮಾಲೀಕರ ಜತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ವಸತಿಗೃಹದಲ್ಲಿ ಸಿಸಿ ಕ್ಯಾಮರಾ, ನೋಂದಣಿ ಪುಸ್ತಕ ಮತ್ತು ಗ್ರಾಹಕರ ಆಧಾರ್ ಕಾರ್ಡ್ ಕಡ್ಡಾಯ ಹೊಂದಿರಬೇಕು. ಜೂಜಾಟ, ವೇಶ್ಯಾವಾಟಿಕೆ ಸೇರಿ ಅಕ್ರಮ ಚಟುವಟಿಕೆಗಳಿಗೆ ವಸತಿಗೃಹ ನೀಡಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಹೋಟೆಲ್ ಅಸೋಸಿಯೇಷನ್ ಉಪಾಧ್ಯಕ್ಷ ಸತ್ಯನಾಥ ಶೆಟ್ಟಿ ಅವರು ಹೋಟೆಲ್ಗಳಲ್ಲಿನ ಸಮಸ್ಯೆಗಳತ್ತ ಗಮನ ಸೆಳೆದರು. ಉದ್ಯಮಿಗಳಿಗೆ ಯಾವುದೇ ರೀತಿಯಲ್ಲಿ ಕಿರುಕುಳ ನೀಡದಂತೆ ಪೊಲೀಸರಿಗೆ ಸಲಹೆ ನೀಡಲಾಗುವುದು. ಆಧಾರ್ ಕಾರ್ಡ್, ಸಿಸಿ ಕ್ಯಾಮರಾ ಸೇರಿ ಸೂಕ್ತ ದಾಖಲೆಪತ್ರ ಇಟ್ಟುಕೊಳ್ಳುವಂತೆ ಶಾಲೂ ಸಲಹೆ ನೀಡಿದರು.
ಅಧ್ಯತೆ ವಹಿಸಿದ್ದ ಅಸೋಸಿಯೇಷನ್ ಜಿಲ್ಲಾಧ್ಯ ನರಸಿಂಹ ಮೆಂಡನ್ ಮಾತನಾಡಿ, ಉದ್ಯಮಿಗಳು ಮತ್ತು ಪೊಲೀಸ್ ಇಲಾಖೆ ಮಧ್ಯೆ ಸಹಕಾರ ನಿರಂತರವಾಗಿರಲಿ ಎಂದು ಹೇಳಿದರು.
ಸಂಘದ ವಸತಿ ವಿಭಾಗದ ಉಪಾಧ್ಯಕ್ಷ ಗಿರಿಧರ ಭಟ್, ಬೇಕರಿ ವಿಭಾಗದ ಉಪಾಧ್ಯ ಮೊಯಿನುದ್ದೀನ್, ಹೋಟೆಲ್ ವಿಭಾಗದ ಉಪಾಧ್ಯಕ್ಷ ಶರಣು ಪಾಟೀಲ್ ಸೇರಿ 50ಕ್ಕೂ ಹೆಚ್ಚು ಉದ್ಯಮಿಗಳು ಪಾಲ್ಗೊಂಡಿದ್ದರು. ಅಸೋಸಿಯೇಷನ್ ಕಾರ್ಯದರ್ಶಿ ಮಹಾಕೀರ್ತಿ ಶೆಟ್ಟಿ ಸ್ವಾಗತಿಸಿ ನಿರೂಪಣೆ ಮಾಡಿದರು. ಕೋಶಾಧಿಕಾರಿ ಸುನೀಲ್ ಶೆಟ್ಟಿ ವಂದಿಸಿದರು. ಹೋಟೆಲ್ ಅಸೋಸಿಯೇಷನ್ಗೆ ಮೊದಲ ಬಾರಿಗೆ ಆಗಮಿಸಿದ ಡಿಸಿಪಿಯವರಿಗೆ ಸ್ಮರಣಿಕೆ ಹಾಗೂ ಹೂಗುಚ್ಛ ನೀಡಿ ಸನ್ಮಾನ ಮಾಡಲಾಯಿತು.
ಅನೇಕ ಬಾರಿ ಎಚ್ಚರಿಕೆ ನೀಡಿದರೂ ಕಾನೂನು ಪಾಲನೆಯಲ್ಲಿ ವಿಫಲವಾಗುತ್ತಿರುವ ಹೋಟೆಲ್ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಪ್ರ ತಪಾಸಣೆ ನಡೆಸಲಾಗುತ್ತಿದೆ. ಹೋಟೆಲ್, ವಸತಿಗೃಹ ಉದ್ಯಮಿಗಳ ಸಮಸ್ಯೆಗಳಿಗೆ ಪೊಲೀಸ್ ಇಲಾಖೆ ಸದಾ ಸ್ಪಂದಿಸಲಿದೆ.