ಯಾದಗಿರಿ ನಗರದ ಡಿಸಿ ಕಚೇರಿ ಎದುರು ಮಂಗಳವಾರ ವಿವಿಧ ಬೇಡಿಕೆಗೆ ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಟನೆ ಜಿಲ್ಲಾ ಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್, ಸುಭಾಷ್ಚಂದ್ರ ಬಾವನೂರ, ಅಂಬರೀಷ್ ಧಣಿ, ಮರೆಪ್ಪ ಶಕರ್ಬಡಿ, ಮರೆಪ್ಪ ಕೊಟ್ಟೇಕಲ್, ಸುರೇಶ ತೆಳಿಗೇರಿ, ಮುದ್ದಪ್ಪ ಸುಲುಗಿತಿ, ಹಣಮಂತ ಗುಡಿಸಲ್ ಇತರರಿದ್ದರು.
ಯಾದಗಿರಿ: ಜಿಲ್ಲೆಯ ರೈತರಿಗೆ ಬೀಜ, ಗೊಬ್ಬರದ ಕೊರತೆ ನೀಗಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಮಂಗಳವಾರ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿ, ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ತಕ್ಷಣವೆ ಅಗತ್ಯವಿರುವಷ್ಟು ಬಿತ್ತನೆ ಬೀಜ ಮತ್ತು ಡಿಎಪಿ ಪೂರೈಕೆ ಮಾಡಬೇಕು. ಕೃಷಿ ಕೇಂದ್ರಗಳಲ್ಲಿ ಹೆಚ್ಚುವರಿ ಕೌಂಟರ್ ತೆರೆಯುವ ಮೂಲಕ ರೈತರು ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಬೇಕು. ಕೃತಕ ಅಭಾವ ಸೃಷ್ಟಿಸಿ ಲಿಂಕ್ ಬಿಸಿನೆಸ್ ದಂಧೆ ನಡೆಸುತ್ತಿರುವ ಖಾಸಗಿ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೆಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಎಐಕೆಕೆಎಂಎಸ್ ತಾಲೂಕು ಕಾರ್ಯದರ್ಶಿ ಸುಭಾಷ್ಚಂದ್ರ ಬಾವನೂರ, ಅಂಬರೀಷ್ ಧಣಿ, ಮರೆಪ್ಪ ಶಕರ್ಬಡಿ, ಮರೆಪ್ಪ ಕೊಟ್ಟೇಕಲ್, ಸುರೇಶ ತೆಳಿಗೇರಿ, ಮುದ್ದಪ್ಪ ಸುಲುಗಿತಿ, ಹಣಮಂತ ಗುಡಿಸಲ್, ದೇವಿದ್ರಪ್ಪ ಪತಪುರ್, ಬಸವರಾಜ್ ಬೋಯರ್, ಭೀಮಪ್ಪ ಬಂಗಾರಿ, ಸಾಬಯ್ಯ ಹೇಳುವರ್, ಮಾರುತಿ ದಾಸರ್, ದೇವಪ್ಪ ಪೂಜಾರಿ, ಹನುಮವ್ವ ಹೊರುಂಚಿ, ಸಲ್ಲಿಮ್ಮ ಮುಲ್ಲಾ, ಮೈಬುಬಿ ಹುಲ್ಕಲ್, ಶಾಂತಮ್ಮ ಬಂಡಿಮನಿ, ಸುಮಂಗಲ ದಾಸರ, ಸುವರ್ಣ ಕಟಕಟಿ, ರೇಣುಕಾ ಪೂಜಾರಿ ಇತರರಿದ್ದರು.