ಹೊಸಕೋಟೆ ತಾಲೂಕು ಸಮೇತನಹಳ್ಳಿ ಗ್ರಾಪಂ ಮಲತ್ಯಾಜ್ಯ ನಿರ್ವಹಣಾ ಟಕಕ್ಕೆ ಜಿಲ್ಲಾ ಉಪ ಕಾರ್ಯದರ್ಶಿ ಶಿವಕುಮಾರ್​ ಬಿ. ಭೇಟಿ ನೀಡಿ ಪರಿಶೀಲಿಸಿದರು. ಸಮೇತನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕಾಂತರಾಜ್​, ಅಭಿವೃದ್ಧಿ ಅಧಿಕಾರಿ ಪ್ರಸಾದ್​ ಹಾಗೂ ಅಧಿಕಾರಿಗಳು ಇದ್ದರು. 
ರಾಜ್ಯ

ಎಫ್​ಎಸ್​ಟಿಪಿಯಿಂದ ಜಲಮಾಲಿನ್ಯ ತಡೆ / HOSAKOTE

ಬೆಂಗಳೂರು ಗ್ರಾಮಾಂತರ ಡೆಸ್ಕ್
ಹೊಸಕೋಟೆ : ಜಲಮೂಲಗಳು ಕಲಿಷಿತಗೊಳ್ಳದಂತೆ ತಡೆಯುವಲ್ಲಿ ಮಲಕೆಸರು ಸಂಸ್ಕರಣಾ ಟಕ (ಎಫ್​ಎಸ್​ಟಿಪಿ) ಪ್ರಮುಖ ಪಾತ್ರ ವಹಿಸಲಿದ್ದು, ಈ ಯೋಜನೆಯನ್ನು ದಕ್ಷತೆಯಿಂದ ಹಾಗೂ ಪೂರ್ಣ ಪ್ರಮಾಣದಲ್ಲಿ ಸದ್ಬಳಸಿಕೊಳ್ಳಬೇಕು ಎಂದು ಜಿಲ್ಲಾ ಉಪ ಕಾರ್ಯದರ್ಶಿ ಶಿವಕುಮಾರ್​ ಬಿ. ತಿಳಿಸಿದರು.
ತಾಲೂಕಿನ ಸಮೇತನಹಳ್ಳಿ ಗ್ರಾಪಂ ಮಲತ್ಯಾಜ್ಯ ನಿರ್ವಹಣಾ ಟಕಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಅವರು, ಪ್ರತಿ ದಿನ ವೈಜ್ಞಾನಿಕವಾಗಿ ಹಾಗೂ ನಿರಂತರವಾಗಿ ಟಕ ಕಾರ್ಯ ನಿರ್ವಹಿಸಬೇಕು. ಯಾವುದೇ ತಾಂತ್ರಿಕ ಅಡಚಣೆ ಆಗದಂತೆ ಎಚ್ಚರವಹಿಸಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಮಲತ್ಯಾಜ್ಯವನ್ನು ಎಲ್ಲೆಂದರಲ್ಲಿ ವಿಲೇವಾರಿಗೆ ಅವಕಾಶ ಕೊಡದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸಂಸ್ಕರಣೆ ನಂತರ ಲಭ್ಯವಾಗುವ ನೀರನ್ನು ಗಿಡ&ಮರಗಳಿಗೆ, ತೋಟಗಾರಿಕೆ ಹಾಗೂ ಕೃಷಿ ಉದ್ದೇಶಕ್ಕೆ ಬಳಸಬಹುದು ಎಂದು ಸಲಹೆ ನೀಡಿದರು.
ಟಕದಲ್ಲಿ ಕೆಲಸ ಮಾಡುವ ಪ್ರತಿ ಸಿಬ್ಬಂದಿಗೂ ಮಾಸ್ಕ್​, ಕೈ ಚೀಲ ಹಾಗೂ ಪಿಪಿಇ ಕಿಟ್​ ಬಳಸಬೇಕು ಎಂದ ಅವರು, ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಸಾಧಿಸುವುದು ಹಾಗೂ ಪರಿಸರ ಮಾಲಿನ್ಯವನ್ನು ತಡೆಗಟ್ಟುವುದು ಮೊದಲ ಆದ್ಯತೆಯಾಗಿದ್ದು, ಮಲತ್ಯಾಜ್ಯ ಕೆಸರು ಸಂಸ್ಕರಣಾ ಟಕ ಸಮರ್ಥ ನಿರ್ವಹಣೆಯ ಮೂಲಕ ಸಮೇತನಹಳ್ಳಿ ಗ್ರಾಮ ಪಂಚಾಯಿತಿ ಜಿಲ್ಲೆಯಲ್ಲಿ ಮಾದರಿ ಪಂಚಾಯಿತಿಯಾಗಿ ಹೊರಹೊಮ್ಮಬೇಕು ಎಂದು ತಿಳಿಸಿದರು.