ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಈಶ್ವರ ಬಿ.ಖಂಡ್ರೆ 
ರಾಜ್ಯ

ಸರ್ಕಾರಿ ಜಾಗದಲ್ಲಿ ಫಲವೃಕ್ಷೋದ್ಯಾನ

ಬೆಂಗಳೂರು:
ಪ್ರತಿ ಗ್ರಾಮಗಳಲ್ಲಿ ಫಲವೃಕ್ಷೋದ್ಯಾನ ಅಭಿವೃದ್ಧಿಪಡಿಸುವುದರಿಂದ ಗ್ರಾಮದಲ್ಲಿ ಹಸಿರು ಹೊದಿಕೆ ಹೆಚ್ಚುತ್ತದೆ. ನಿರುದ್ಯೋಗಿ, ಭೂರಹಿತ ಯುವಜನರಿಗೆ ಉದ್ಯೋಗವೂ ಲಭಿಸುತ್ತದೆ, ಗ್ರಾಪಂ ಮತ್ತು ಕಂದಾಯ ಇಲಾಖೆಗೆ ಆದಾಯವೂ ಬರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಂಚಾಯಿತಿ ವ್ಯಾಪ್ತಿಯ ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಭೂಮಿಯಲ್ಲಿ ತೋಟಗಾರಿಕೆ ಬೆಳೆಗಳಾದ ಮಾವು, ಸಪೋಟ, ಬೆಟ್ಟದ ನೆಲ್ಲಿಕಾಯಿ, ತೆಂಗು, ಹೈಬ್ರೀಡ್ ನೇರಳೆ, ಹುಣಸೆ ಇತ್ಯಾದಿ ಬೆಳೆಸಿದರೆ ಆದಾಯ ಬರುತ್ತದೆ. ಸರ್ಕಾರಿ ಭೂ ಒತ್ತುವರಿಯೂ ನಿಲ್ಲುತ್ತದೆ ಎಂದಿದ್ದಾರೆ. ತೋಟಗಾರಿಕೆ ಬೆಳೆಯ ಈ ವೃಕ್ಷಗಳನ್ನು ಯಾವಾಗ ಬೇಕಾದರೂ ತೆರವು ಮಾಡಿ ಸರ್ಕಾರದ ಯೋಜನೆಗಳಿಗೆ ಭೂಮಿ ಬಳಸಿಕೊಳ್ಳಲು ಅವಕಾಶ ಇರುತ್ತದೆ.
ವಿಬಿಜಿ ರಾಮ್ ಜಿ ಸಹಯೋಗದಡಿ ವೃಕ್ಷೋದ್ಯಾನ ಅಭಿವೃದ್ಧಿಗೆ ಕಂದಾಯ-ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಕ್ರಿಯಾಯೋಜನೆ ರೂಪಿಸುವಂತೆ ಇಲಾಖೆ ಕಾರ್ಯದರ್ಶಿಗೆ ಖಂಡ್ರೆ ಸೂಚಿಸಿದ್ದಾರೆ.