ಬೆಲಹೊಂಗಲದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿದರು. ತಹಸೀಲ್ದಾರ್ ಹನುಮಂತ ಶಿರಹಟ್ಟಿ, ನಗರಸಭೆ ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ, ಪಪಂ ಇಒ ಸಂಜೀವ ಜುನ್ನೂರು ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ಪ್ರತಿಭಾವಂತರಿಂದ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಅಂತಹ ಸಾಧಕರನ್ನು ಪುರಸ್ಕರಿಸುವುದರಿಂದ ಅವರ ಸಾಮಾಜಿಕ ಹೊಣೆಗಾರಿಕೆಯನ್ನು ಮತ್ತಷ್ಟು ಹೆಚ್ಚಿಸುವಂತಾಗುತ್ತದೆ ಎಂದು ತಹಸೀಲ್ದಾರ್ ಹನುಮಂತ ಶಿರಹಟ್ಟಿ ಹೇಳಿದರು.
ಅಖಿಲ ಕರ್ನಾಟಕ ಅಂಬೇಡ್ಕರ್ ಯುವ ಸಂದ ಆಶ್ರಯದಲ್ಲಿ ಗುರುವಾರ ತಾಪಂ ಕಚೇರಿಯಲ್ಲಿ ಆಯೋಜಿಸಿದ್ದ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಧನೆಗೆ ಜಾತಿ, ಬಡತನ ಅಡ್ಡಿಯಾಗುವುದಿಲ್ಲ, ಕಷ್ಟಗಳನ್ನು ಮೀರಿ ಶ್ರಮಪಟ್ಟಾಗ ಭವಿಷ್ಯ ಉಜ್ವಲವಾಗುತ್ತದೆ. ಸವಾಲುಗಳನ್ನು ಎದುರಿಸಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಂಬೇಡ್ಕರ್ ಯುವ ಸಂಟನೆ ಪ್ರೋತ್ಸಾಹಿಸುತ್ತಿರುವುದು ಸಾಮಾಜಿಕ ಕಳಕಳಿಗೆ ಹಿಡಿದ ಕೆಗನ್ನಡಿಯಾಗಿದೆ ಎಂದರು.
ಸಂಟನೆ ಸಂಸ್ಥಾಪಕ&ಅಧ್ಯ ಕೀರಪ್ಪ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಟನೆ ಗೌರವಾಧ್ಯ ಸುಭಾಸ ಮ್ಯಾಗೇರಿ ಅಧ್ಯತೆ ವಹಿಸಿದ್ದರು. ತಾಪಂ ಇಒ ಸಂಜೀವ ಜುನ್ನೂರು, ಜೆ ಭೀಮ ಸಂಟನೆ ಅಧ್ಯ ರಮೇಶ ರಾಯಪ್ಪಗೋಳ, ದಲಿತ ಸಂರ್ಷ ಸಮಿತಿ ಅಂಬೇಡ್ಕರ್ ಧ್ವನಿ ಅಧ್ಯ ಸುರೇಶ ರಾಯಪ್ಪಗೋಳ, ಜಿಲ್ಲಾ ಸಂಚಾಲಕ ರುದ್ರಪ್ಪ ನಿಂಗಣ್ಣವರ, ಉಪನ್ಯಾಸಕ ಬಸವರಾಜ ಪುರಾಣಿಕಮಠ, ಗುತ್ತಿಗೆದಾರ ರಮೇಶ ಹಂಚಿನಮನಿ, ಮಾದಿಗ ಸಮಾಜ ಮುಖಂಡ ಮಂಜುನಾಥ ಸಿಡ್ಲೆವ್ವಗೋಳ, ಪುಂಡಲೀಕ ಭಜಂತ್ರಿ, ಶ್ರೀನಿವಾಸ ಭರಮಣ್ಣವರ, ನಿವತ್ತ ಮುಖ್ಯಶಿಕ್ಷಕ ಶಂಕರ ಸಾಗರ, ಸಂಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
150ಕ್ಕೂ ಹೆಚ್ಚು ಸಾಧಕರನ್ನು ಸತ್ಕರಿಸಲಾಯಿತು. ಕೀರಪ್ಪ ಹೊಸಮನಿ ಸ್ವಾಗತಿಸಿದರು. ಶಿಕ ನಬಿ ಖುದ್ದನವರ ನಿರೂಪಿಸಿದರು. ಪತ್ರಕರ್ತ ಮಹಾಂತೇಶ ರಾಜಗೋಳಿ ವಂದಿಸಿದರು.