ಅಕ್ರಮ ಗೋವು ಸಾಗಾಟ ಮತ್ತು ಹತ್ಯೆ ತಡೆಗಟ್ಟುವ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಲಾಯಿತು.  
ರಾಜ್ಯ

ಇನ್ನುಮುಂದೆ ಅಕ್ರಮ ಗೋವು ಸಾಗಾಟ ಮಾಡಿದ್ರೆ 7 ವರ್ಷ ಜೈಲು, 10 ಲಕ್ಷ ದಂಡ

ಪ್ರಮುಖ ಮುಖ್ಯಾಂಶಗಳು

  • ಇನ್ನುಮುಂದೆ ಅಕ್ರಮ ಗೋವು ಸಾಗಾಟ ಮಾಡಿದ್ರೆ 7 ವರ್ಷ ಜೈಲು
  • ಅಕ್ರಮ ಗೋಹತ್ಯೆಗೆ 10 ಲಕ್ಷದ ವೆಗೆ ದಂಡ ವಿಧಿಸಲಾಗುವುದು
  • ಬಕ್ರೀದ್ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಂದ ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು:ಬೆಂಗಳೂರು ನಗರಜಿಲ್ಲೆಯಲ್ಲಿ ಗೋವುಗಳ ಅಕ್ರಮಸಾಗಣೆ ಅಥವಾ ಹತ್ಯೆ ಮಾಡಿದಲ್ಲಿಏಳು ವರ್ಷ ಜೈಲು,ಹಾಗೂ 10ಲಕ್ಷ ರೂ.ಗಳವರೆಗೆ ದಂಡ ವಿಧಿಸಲಾಗುವುದುಎಂದು ಜಿಲ್ಲಾಧಿಕಾರಿ ಜಿ.ಜಗದೀಶಎಚ್ಚರಿಕೆ ನೀಡಿದ್ದಾರೆ.

ಬಕ್ರೀದ್ಸಂದರ್ಭದಲ್ಲಿ ಒಂಟೆ,ಗೋವುಗಳ ಅಕ್ರಮಸಾಗಣೆ ಮತ್ತು ಹತ್ಯೆ ಮಾಡುವುದನ್ನುತಡೆಗಟ್ಟುವ ಬಗ್ಗೆ ಬುಧವಾರ ತಮ್ಮಕಚೇರಿ ಸಭಾಂಗಣದಲ್ಲಿ ನಡೆದಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲೆಗೆಬರುವ ಸಾಗಣೆ ವಾಹನಗಳ ತಪಾಸಣೆನಡೆಸಿ ಗೋವು,ಒಂಟೆಗಳ ಅಕ್ರಮಸಾಗಣೆ ಕಂಡುಬಂದಲ್ಲಿ ಯಾವುದೇಮುಲಾಜಿಲ್ಲದೆ ಸೂಕ್ತ ಕಾನೂನುಕ್ರಮಜರುಗಿಸುವಂತೆ ಪೊಲೀಸ್ ಮತ್ತುಸಾರಿಗೆ ಇಲಾಖೆ ಅಧಿಕಾರಿಗಳಿಗೆಸೂಚಿಸಿದ ಜಿಲ್ಲಾಧಿಕಾರಿಗಳು,ಗೋವುಗಳನ್ನುಪಶುಪಾಲನಾ ಇಲಾಖೆಯ ಸಹಯೋಗದೊಂದಿಗೆಗೋಶಾಲೆಗಳಿಗೆ ಅದೇ ವಾಹನದಲ್ಲಿಸಾಗಿಸಿ ಸುರಕ್ಷಿತಗೊಳಿಸುವಂತೆಸೂಚಿಸಿದರು.

ಅಕ್ರಮವಾಗಿಒಂಟೆ ಅಥವಾ ಗೋಹತ್ಯೆ,ಸಾಗಾಟ ಮಾಡುವುದುಕಂಡುಬಂದಲ್ಲಿ ಸಾರ್ವಜನಿಕರುಬೆಂಗಳೂರು ನಗರ ಪಾಲಿಕೆಗಳ ಸಹಾಯವಾಣಿ1533ಕ್ಕೆಕರೆ ಮಾಡಿ ದೂರು ನೀಡಬಹುದು ಎಂದಜಿಲ್ಲಾಧಿಕಾರಿಗಳು,ಹಬ್ಬದ ಸಂದರ್ಭಗಳಲ್ಲಿಉತ್ಪತ್ತಿಯಾಗುವ ತ್ಯಾಜ್ಯವನ್ನುಸಾರ್ವಜನಿಕ ಸ್ಥಳಗಳಲ್ಲಿ ಹಾಕದಂತೆಎಚ್ಚರ ವಹಿಸಬೇಕು.ಪ್ರಾಣಿ ವಧೆಯಿಂದಉತ್ಪತ್ತಿಯಾಗುವ ತ್ಯಾಜ್ಯವಿಲೇವಾರಿಯನ್ನು ನಿಯಮಾನುಸಾರನಿರ್ವಹಣೆ ಮಾಡಬೇಕು ಎಂದು ಬಿಬಿಎಂಪಿಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿಬೆಂಗಳೂರು ನಗರ ಜಿಲ್ಲೆಯ ಪಶುಪಾಲನಇಲಾಖೆಯ ಉಪ ನಿರ್ದೇಶಕ ಡಾ.ಪರಮೇಶ್ವರ್ಹಾಗೂ ಜಿಬಿಎ ಉಪ ನಿರ್ದೇಶಕರಾದಡಾ. ಚಂದ್ರಯ್ಯಮತ್ತಿತರರು ಉಪಸ್ಥಿತರಿದ್ದರು.