ಆಳಂದ ತಾಲೂಕಿನಲ್ಲಿರುವ ಬಟ್ಟರಗಾದಲ್ಲಿರುವ ಮೌಲ ಅಲಿ ದರ್ಗಾ. 
ರಾಜ್ಯ

ಮೌಲಾ ಅಲಿ ಉರುಸ್​ 7ರಿಂದ

ಬಾಬುರಾವ ಯಡ್ರಾಮಿ
ಆಳಂದ: ಬಟ್ಟರಗಾದಲ್ಲಿ ಹಜರತ್​ ಸೈಯದ್​ ಹುಸೇನಿ ಶಾಹವಲಿ ಉರ್ಫ್​ ಮೌಲಾ ಅಲಿ ಅವರ 137ನೇ ಉರುಸ್​ ಏ.7ರಿಂದ ಅದ್ದೂರಿಯಾಗಿ ನಡೆಯಲಿದೆ ಎಂದು ದರ್ಗಾದ ನಬಿಲಾಲ್​ ಲದಾಫ್​ ತಿಳಿಸಿದ್ದಾರೆ. ಧಂಗಾಪುರದ ಮಾಜಿ ಶಾಸಕ ಶರಣಬಸಪ್ಪ ಪಾಟೀಲ್​ ಅವರ ಮನೆಯಿಂದ ಏ.7ರಂದು ರಾತ್ರಿ 9ಕ್ಕೆ ಗಂಧದ ಮೆರವಣಿಗೆ ಶುರುವಾಗಿ ಬಟ್ಟರಗಾದ ಸಾಹೇಬರ ಮನೆ ತಲುಪಲಿದೆ. ಬಳಿಕ ಮನೆಯಿಂದ ದರ್ಗಾದವರೆಗೂ ಅದ್ದೂರಿ ಮೆರವಣಿಗೆ ಮೂಲಕ ಏ.8ರಂದು ಬೆಳಗ್ಗೆ 4ಕ್ಕೆ ದರ್ಗಾ ತಲುಪಿ ಪೀಠಾಧಿಪತಿ ಹಜರತ್​ ಸೈಯದ್​ ಬಾಷಾ ಸಾಹೇಬ್​ ಉರ್ಫ್​ ಖತುಬಿ ಹುಸೇನಿ ಸಜ್ಜಾದ್​ ನಶೀನ್​ ಮುತವಲಿ ಅವರ ನೇತೃತ್ವದಲ್ಲಿ ಲೇಪನ ಕಾರ್ಯ ನಡೆಯಲಿದೆ. ರಾತ್ರಿಯಿಡೀ ದೀಪ ಬೆಳಗುವ ಕಾರ್ಯಕ್ರಮ ಜರುಗುವುದು. ಏ.9ರಂದು ಸಂಜೆ 4ಕ್ಕೆ ಕುಸ್ತಿ ಕಾರ್ಯಕ್ರಮ ನಡೆಯಲಿವೆ. ಖವ್ವಾಲಿ, ಗೀಗೀ ಪದ ಹಾಗೂ ವಿವಿಧ ಸಾಂಸತಿಕ ಕಾರ್ಯಕ್ರಮಗಳು ಜರಗುವವು ಎಂದು ಮಾಹಿತಿ ನೀಡಿದ್ದಾರೆ.