Woman murdered by live-in partner in malleshwaram
- ಲಿವ್ಇನ್ ರಿಲೆಷನ್ನಲ್ಲಿದ್ದ ಸಂಗಾತಿ ಕೊಂದ ಯುವಕ ಅರೆಸ್ಟ್
- ಹಾಸನದ ಸಕಲೇಶಪುರ ಮೂಲದ ಶರತ್(25) ಎಂಬಾತನಿಂದ ಅನುಷಾ(20) ಕೊಲೆ
- ಕ್ಷುಲ್ಲಕ ಕಾರಣಕ್ಕೆ ಜಗಳ ಸಿಟ್ಟಲ್ಲಿ ಲಿವ್ಇನ್ ಸಂಗಾತಿ ಕೊಂದ ಶರತ್
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಶುರುವಾಗಿದ್ದ ಗಲಾಟೆ ವಿಕೋಪಕ್ಕೆ ತಿರುಗಿ, 20 ವರ್ಷದ ಲಿವ್ಇನ್ ಸಂಗಾತಿಯ ಕತ್ತು ಹಿಸುಕಿ ಕೊಂದ ಘಟನೆ ಬೆಂಗಳೂರಿನ ಮಲ್ಲೇಶ್ವರಂನ ತಾಯಪ್ಪ ಗಾರ್ಡನ್ನಲ್ಲಿ (Woman murdered by live-in partner in malleshwaram)ಬುಧವಾರ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಯುವತಿಯನ್ನು ಅನುಷಾ(20)ಎಂದು ಗುರುತಿಸಲಾಗಗಿದೆ. 25ವರ್ಷದ ಶರತ್ ಸದ್ಯ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಇಬ್ಬರು ಹಾಸನದ ಸಕಲೇಶಪುರದವರು. ಶರತ್ ನೀರಿನ ಟ್ಯಾಂಕರ್ ಚಾಲಕ ಹಾಗೂ ಅನುಷಾ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ, ವಿದ್ಯಾಭ್ಯಾಸ ಅರ್ಧಕ್ಕೆ ನಿಂತಿತ್ತು. ಜೊತೆಗೆ ಆಕೆಗೆ ತಂದೆ- ತಾಯಿ ಯಾರು ಇರಲ್ಲಿಲ್ಲ ಓರ್ವ ಅಕ್ಕ ಇದ್ದರು ಎನ್ನುವುದು ಪೊಲೀಸರು ನಡೆಸಿದ ತನಿಖೆಯಿಂದ ತಿಳಿದುಬಂದಿದೆ.
ಏನಾಗಿತ್ತು?
ಅನುಷಾ ಮತ್ತು ಶರತ್ ಪರಿಚಯವಾಗಿದ್ದು ಮೊದಲು ಇನ್ಸ್ಟಾಗ್ರಾಮ್ನಲ್ಲಿ. ಮೊದಲು ಮಾತುಕತೆ ಶುರುಮಾಡಿ ನಂತರ ಒಂದಾದರು. ಕಳೆದ ಆರು ತಿಂಗಳ ಹಿಂದೆ ಮಲ್ಲೇಶ್ವರಂನಲ್ಲಿ ಮನೆ ಮಾಡಿಕೊಂಡ ಅವರು, ಒಟ್ಟಾಗಿ ವಾಸ ಮಾಡುತ್ತಿದ್ದರು.
ಜೂನ್.13ರ ರಾತ್ರಿ ಅನುಷಾ ಮತ್ತು ಆಕೆಯ ಲಿವ್ಇನ್ ಸಂಗಾತಿ ಶರತ್ನೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ಶುರು ಮಾಡಿಕೊಂಡಿದ್ದಾರೆ.ಈ ಜಗಳದಲ್ಲಿ, ಶರತ್ ಅನುಷಾಳನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎನ್ನಲಾಗಿದೆ. ಆಕೆಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ತಗಾದೆ ತೆಗೆದು ಜಗಳ ತೆಗೆದಿದ್ದಾನೆ. ಇದು ವಿಕೋಪಕ್ಕೆ ತಿರುಗಿ, ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ
ಮುಂದುವರೆದು, ಅನುಷಾ ಪ್ರಜ್ಞಾಹೀನಳಾಗಿ ಬಿದ್ದಿರುವುದನ್ನು ಕಂಡ ಶರತ್ ಭಯದಿಂದ ಆಕೆಯ ಮೃತದೇಹವನ್ನು ಅಲ್ಲಿಯೇ ಬಿಟ್ಟು ಮನೆಗೆ ಪರಾರಿಯಾಗಿದ್ದಾನೆ. ಸೋಮವಾರ, ಅವರು ಘಟನೆಯ ಬಗ್ಗೆ ವಕೀಲರಿಗೆ ಮಾಹಿತಿ ನೀಡಿದಾಗ ವಿಚಾರ ಬೆಳಕಿಗೆ ಬಂದಿದೆ. ವಕೀಲರು ಶೇಷಾದ್ರಿಪುರಂ ಪೊಲೀಸರಿಗೆ ಮಾಹಿತಿ ನೀಡಿದರು, ಅವರು ಮನೆಗೆ ಭೇಟಿ ನೀಡಿದಾಗ ಶವ ಪತ್ತೆಯಾಗಿದೆ.
ಎಲ್ಲ ಕೆಲಸ ಮಾಡ್ತಿದ್ದ ಶರತ್
ಈ ಹಿಂದೆ ಇಬ್ಬರು ಕೂಡ ಜಗಳ ಮಾಡಿಕೊಂಡಿದ್ದರಂತೆ. ನಂತರ ಈಕೆ ಸಕಲೇಶಪುರಕ್ಕೆ ಹೋಗಿ ಅಲ್ಲೆ ಇದ್ಲೂಶರತ್ ಎರಡು ದಿನದ ಹಿಂದೆ ಮತ್ತೆ ಅಕೆಯನ್ನ ಕರೆದು ಕೊಂಡು ಬಂದಿದ್ದ. ಬಂದ ಎರಡೆ ದಿನಕ್ಕೆ ಇಬ್ಬರ ನಡುವೆ ಮತ್ತೆ ಜಗಳವಾಗಿತ್ತು. ಅನುಷಾ ಯಾವುದೇ ಕೆಲಸ ಕೂಡ ಮಾಡುತ್ತಿರಲಿಲ್ಲ. ಬಟ್ಟೆ, ಪಾತ್ರೆ ಎಲ್ಲವನ್ನ ಶರತ್ ವಾಶ್ ಮಾಡುತ್ತಿದ್ದ. ಇಬ್ಬರ ನಡುವೆ ಜಗಳವಾಗಿದೆ ಅ ವೇಳೆ ಕತ್ತು ಹಿಸುಕಿ ಸಾಯಿಸಿದ್ದಾನೆ ಎನ್ನಲಾಗಿದೆ.
ಸದ್ಯ ಶರತ್ ಅನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಸದ್ಯ ಶೇಷಾದ್ರಿಪುರಂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ, (ಏಜೆನ್ಸೀಸ್).