ಮುನವಳ್ಳಿ ಹಾಲು ಉತ್ಪಾದಕರ ಸಹಕಾರ ಸಂದ ರಜತ ಮಹೋತ್ಸವವನ್ನು ಮುರುಂದ್ರ ಶ್ರೀ ಹಾಗೂ ಮುಕ್ತಾನಂದ ಶ್ರೀ ಉದ್ಘಾಟಿಸಿದರು. ಪಂಚನಗೌಡ ದ್ಯಾಮನಗೌಡರ, ಸದೆಪ್ಪ ವಾರಿ, ಜಗದೀಶ ಹಿರೇಮಠ ಇತರರಿದ್ದರು.
ಮುನವಳ್ಳಿ: ರೈತರು ಕೃಷಿ ಜತೆ ಹೈನುಗಾರಿಕೆ ಅಳವಡಿಸಿಕೊಳ್ಳುವುದರಿಂದ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಮುನವಳ್ಳಿ ಹಾಲು ಉತ್ಪಾದಕರ ಸಹಕಾರ ಸಂದ ಅಧ್ಯ ಪಂಚನಗೌಡ ದ್ಯಾಮನಗೌಡರ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮುನವಳ್ಳಿ ಹಾಲು ಉತ್ಪಾದಕರ ಸಹಕಾರ ಸಂದ ರಜತ ಮಹೋತ್ಸವ ಹಾಗೂ ಬೋನಸ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಾಲಿಗೆ ನ್ಯಾಯಯುತ ಬೆಲೆ ಒದಗಿಸುವ ಸದುದ್ದೇಶದಿಂದ 25 ವರ್ಷಗಳ ಹಿಂದೆ ಸ್ಥಾಪಿಸಿದ ಹಾಲು ಉತ್ಪಾದಕರ ಸಹಕಾರ ಸಂ ಉತ್ಪಾದಕರ ಸಹಕಾರ, ಆಡಳಿತ ಮಂಡಳಿ ಪರಿಶ್ರಮದಿಂದ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.
ಸೋಮಶೇಖರ ಮಠದ ಮುರುಂದ್ರ ಶ್ರೀ ಹಾಗೂ ಶಿಂದೋಗಿಯ ಮುಕ್ತಾನಂದ ಶ್ರೀ ಮಾತನಾಡಿದರು.
ಸಾವಯವ ಕೃಷಿಕ ಜಗದೀಶ ಹಿರೇಮಠ ಸೇರಿದಂತೆ ಸಂಕ್ಕೆ ಹೆಚ್ಚು ಹಾಲು ಪೂರೈಸಿದ ಹಾಲು ಉತ್ಪಾದಕರನ್ನು ಸನ್ಮಾನಿಸಿ, ಬೋನಸ್ ವಿತರಿಸಲಾಯಿತು.
ಬೆಳಗಾವಿ ಹಾಲು ಒಕ್ಕೂಟದ ನಿರ್ದೇಶಕ ಸದೆಪ್ಪ ವಾರಿ, ಬೆಮುಲ್ ಉಪವ್ಯವಸ್ಥಾಪಕ ಡಾ.ರಾಜೇಂದ್ರ ಮೆಳವಂಕಿ, ವಿಸ್ತರಣಾಧಿಕಾರಿ ರವಿ ತಳವಾರ, ಬಸವರಾಜ ಕುಳ್ಳೂರ ಸಂದ ಉಪಾಧ್ಯ ಚಂದ್ರಶೇಖರ ಶಿರಸಂಗಿ, ನಿರ್ದೇಶಕರಾದ ಮಾರುತಿ ಬಾರಕೇರ, ಗೋವಪ್ಪಗೌಡ ಕಳಸನಗೌಡ್ರ, ಪಂಚಪ್ಪ ಕಮತಗಿ, ಜಗದೀಶ ಬಡಿಗೇರ, ಚನ್ನಪ್ಪ ದ್ಯಾಮನಗೌಡರ, ಮಾರುತಿ ಬೆಹರೆ, ಅಮಿನ್ ಖೊಂದುನಾಯ್ಕ, ರಾಮಣ್ಣ ಭಜಂತ್ರಿ, ಮಲ್ಲಿಕಾರ್ಜುನ ತಳವಾರ, ಕಸ್ತೂರಿ ಹನಸಿ, ಶಾಂತವ್ವ ಮಾಟನವರ ಮುಖ್ಯಕಾರ್ಯನಿರ್ವಾಹಕ ಮಹಾಂತೇಶ ಗೋಮಾಡಿ, ಬಸು ಬುರ್ಲಕಟ್ಟಿ ಇತರರಿದ್ದರು. ಗಂಗಾಧರ ಗೋರಬಾಳ ನಿರೂಪಿಸಿದರು.