ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಯವೈಖರಿprotest ಖಂಡಿಸಿ ಉಪವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀಗೆ ತಿಪಟೂರು ತಾಲೂಕಿನಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮುಖಂಡರು ಮನವಿ ಸಲ್ಲಿಸಿದರು. ಯೋಗಾನಂದಸ್ವಾಮಿ, ಟಿಎಸ್​ ಸಿದ್ದಣ್ಣ, ಶ್ರೀನಿವಾಸ್​, ಸೋಮಶೇಖರ್​, ಸಾವಿತ್ರಮ್ಮ, ಸಿದ್ದಲಿಂಗಯ್ಯ ಇತರರು ಇದ್ದರು. 
ರಾಜ್ಯ

ಅಮೆರಿಕದೊಂದಿಗೆ ಮುಕ್ತ ವಾಣಿಜ್ಯ ಒಪ್ಪಂದ ಸಲ್ಲ protest

ತಿಪಟೂರು :ಅಮೆರಿಕದೊಂದಿಗೆ ಮುಕ್ತ ವಾಣಿಜ್ಯ ಒಪ್ಪಂದ ಸಾಧ್ಯವಿಲ್ಲ ಎಂದು ತಾಲೂಕು ರೈತಸಂಘ ಅಧ್ಯಕ್ಷ ತಿಮ್ಲಾಪುರ ದೇವರಾಜು ಆಗ್ರಹಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಯವೈಖರಿ ಖಂಡಿಸಿ ಉಪವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಬಲವಂತ ಭೂ ಸ್ವಾಧಿನ ನಿಲ್ಲಿಸಬೇಕು. ಭೂ ಸುಧಾರಣೆ ಕಾಯ್ದೆಗೆ ತಂದಿರುವ ತಿದ್ದುಪಡಿ ಕೈ ಬಿಡಬೇಕು. ರಾಷ್ಟ್ರದಲ್ಲಿ ಬರ ಬರುವುದು ನಿಶ್ಚಿತವಾಗಿರುವ ಕಾರಣ ಎಸ್​ಡಿಆರ್​ಎಫ್​ ಹಾಗೂ ಎನ್​ಡಿಆರ್​ಎಫ್​ ನಿಧಿ ಬಿಡುಗಡೆ ಮಾಡಬೇಕು ಎಂದರು.
protest
ರಾಜ್ಯ ಹಾಗೂ ಕೇಂದ್ರ ಸರ್ಕಾರ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್​ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳಿಗೆ ಕೃಷಿ ಸಾಲ ಮನ್ನಾ ಮಾಡುವಂತೆ ನಿರ್ದೇಶಿಸಬೇಕು. ಖಾತೆದಾರರಿಗೆ ಮತ್ತು ಬಗರ್​ಹುಕುಂ ಸಾಗುವಳಿದಾರರಿಗೆ ಅರಣ್ಯ ಭೂಮಿ ಒತ್ತುವರಿದಾರರೆಂದು ದೌರ್ಜನ್ಯವೆಸುಗುವ ಕೆಲಸ ನಿಲ್ಲಿಸಬೇಕೆಂದು ಸೂಚಿಸಿದರು.
ಮುಖಂಡ ಬಿ.ಯೋಗಾನಂದಸ್ವಾಮಿ, ಟಿಎಸ್​ ಸಿದ್ದಣ್ಣ, ಶ್ರೀನಿವಾಸ್​, ಸಿದ್ದಬಸವನಾಯಕ, ಬಿ.ಎಂ.ಸೋಮಶೇಖರ್​, ಕೆಆರ್​ ಕಮಲಾ, ಸಾವಿತ್ರಮ್ಮ, ಆರ್​.ಟಿ.ಮಲ್ಲಿಕಾರ್ಜುನಯ್ಯ, ಸಿದ್ದಲಿಂಗಯ್ಯ, ಜಿ.ಎಸ್​.ಷಡಕ್ಷರಿ, ಜಿ.ಎಂ.ಲೋಕೇಶ್​, ಮಹಲಿಂಗಪ್ಪ ಜಿ.ಚಂದ್ರಶೇಖರಯ್ಯ ಇತರರು ಇದ್ದರು.