ಕಲಬುರಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಸೋಮವಾರ ಆಯೋಜಿಸಿದ್ದ ಚರ್ಮರೋಗ ತಪಾಸಣೆ ಉಚಿತ ಶಿಬಿರದಲ್ಲಿ ರೋಗಿಗಳಿಗೆ ಔಷಧಿ, ಸನ್ ಸ್ಕ್ರೀನ್ ಲೋಷನ್ ವಿತರಿಸಲಾಯಿತು. ಡಾ.ನಾಗೇಂದ್ರ ಮಂಠಾಳೆ, ಡಾ.ವಿಜಯಕುಮಾರ ಕಪ್ಪಿಕೇರಿ, ಡಾ.ಮಲ್ಲಿಕಾರ್ಜುನ ತೆಗನೂರ, ಡಾ.ಎಂ.ಆರ್.ಪೂಜಾರಿ ಇತರರಿದ್ದರು.
- ಕಲಬುರಗಿ ಬಸವೇಶ್ವರ ಆಸ್ಪತ್ರೆ
ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ಚರ್ಮರೋಗ ವಿಭಾಗದ ಅಡಿಯಲ್ಲಿ ಚರ್ಮ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಚರ್ಮರೋಗ ತಪಾಸಣಾ ಉಚಿತ ಶಿಬಿರ ಸೋಮವಾರ ಆಯೋಜಿಸಲಾಗಿತ್ತು.
ಆಸ್ಪತ್ರೆಯ ಹೊರ ರೋಗಿಗಳ ವಿಭಾಗ 6ರಲ್ಲಿ ನಡೆದ ಈ ಶಿಬಿರದಲ್ಲಿ 150ಕ್ಕಿಂತಲೂ ಹೆಚ್ಚು ರೋಗಿಗಳು ಭಾಗವಹಿಸಿ ಶಿಬಿರದ ಲಾಭ ಪಡೆದುಕೊಂಡರು. ಬಸವೇಶ್ವರ ಆಸ್ಪತ್ರೆಯ ಚರ್ಮ ರೋಗ ತ ವೈದ್ಯರು ತಂಡ ಹಾಗೂ ವಿಭಾಗದ ಮುಖ್ಯಸ್ಥ ಡಾ.ಅಂಬರೀಷ್ ಬಾಡದ ಅವರು ಶಿಬಿರದಲ್ಲಿ ಭಾಗವಹಿಸಿದ ರೋಗಿಗಳಿಗೆ ಚರ್ಮ ಕ್ಯಾನ್ಸರ್ ಸೇರಿ ವಿವಿಧ ಚರ್ಮರೋಗಗಳ ತಪಾಸಣೆ ಮಾಡಿ ರೋಗ ಕುರಿತು ಜಾಗೃತಿ ಮೂಡಿಸಿದರು. ಚರ್ಮ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ಪಡೆದರೆ ಸಂಪೂರ್ಣವಾಗಿ ಗುಣ ಪಡಿಸಬಹುದು ಎಂದು ಹೇಳಿದರು.
ಶಿಬಿರದಲ್ಲಿ ಭಾಗವಹಿಸಿದ ರೋಗಿಗಳಿಗೆ ಉಚಿತ ಡರ್ಮೋಸ್ಕೋಪಿ ಪರೀೆ , ಸಂಬಂಧಿಸಿದ ರಕ್ತ ತಪಾಸಣೆ, ಜತೆಗೆ ಅಗತ್ಯ ಔಷಧಿ ಹಾಗೂ ಬಿಸಿಲಿನಿಂದ ಚರ್ಮ ಕಾಪಾಡಿಕೊಳ್ಳಲು ಸನ್ ಸ್ಕ್ರೀನ್ ಲೋಷನ್ ಉಚಿತವಾಗಿ ವಿತರಿಸಲಾಯಿತು
ಆಸ್ಪತ್ರೆಯ ಸಂಚಾಲಕ ಡಾ.ಕಿರಣ್ ದೇಶಮುಖ್, ಎಂಆರ್ಎಂಸಿ ಸಂಚಾಲಕ ಡಾ.ಶರಣಬಸಪ್ಪ ಹರವಾಳ, ಆಡಳಿತ ಮಂಡಳಿ ಸದಸ್ಯ ಡಾ.ನಾಗೇಂದ್ರ ಮಂಠಾಳೆ, ಕಾಲೇಜಿನ ಡೀನ್ ಡಾ.ಶರಣಗೌಡ ಪಾಟೀಲ, ಉಪ ಡೀನ್ ಡಾ.ವಿಜಯಕುಮಾರ ಕಪ್ಪಿಕೇರಿ, ವೈದ್ಯಕಿಯ ಅಧೀಕ ಡಾ.ಮಲ್ಲಿಕಾರ್ಜುನ ತೆಗನೂರ, ಆಡಳಿತಾಧಿಕಾರಿ ಡಾ.ಎಂ.ಆರ್.ಪೂಜಾರಿ ಇದ್ದರು.
ಬಸವೇಶ್ವರ ಆಸ್ಪತ್ರೆಯಲ್ಲಿನ ಎಲ್ಲ ವಿಭಾಗಗಳು ಇಂತಹ ಉಚಿತ ಶಿಬಿರ ನಿರಂತರವಾಗಿ ಹಮ್ಮಿಕೊಳ್ಳುತ್ತಿದ್ದು, ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸ್ಥೆಯ ಅಧ್ಯ ಶಶೀಲ್ ನಮೋಶಿ, ಉಪಾಧ್ಯ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ.ಕೈಲಾಸ ಪಾಟೀಲ್ ಮನವಿ ಮಾಡಿದ್ದಾರೆ.