ಚಿಂಚೋಳಿ ತಾಲೂಕಿನ ಗಾರಂಪಳ್ಳಿಯಲ್ಲಿ ರೈತರಿಗೆ ಬೀಜ ವಿತರಿಸಲಾಯಿತು. ಅಭಿಲಾಷ ಸುಬೇದಾರ, ಚಂದ್ರಶೇಖರ ಗುತ್ತೇದಾರ್, ಬಸವರಾಜ ದೇಶಮುಖ, ಶಿವಕುಮಾರ ಅಂಬಲಗಿ, ಗೋಪಾಲ ಎಂ.ಪಿ., ಸಂಗಯ್ಯ ಸ್ವಾಮಿ, ಮೋಹನ ಗುತ್ತೇದಾರ್ ಇತರರಿದ್ದರು.
- ಉದ್ಯಮಿ ಚಂದ್ರಶೇಖರ ಗುತ್ತೇದಾರ್ ಹೇಳಿಕೆ
- ಗಾರಂಪಳ್ಳಿಯಲ್ಲಿ ಕೃಷಿ ಇಲಾಖೆ ಕಾರ್ಯಕ್ರಮ
ಚಿಂಚೋಳಿ: ಕಸ್ಕೋಟಾ ಕಳೆ ಪರವಾಲಂಬಿ ಕಳೆಯಾಗಿದ್ದು, ನಿಯಂತ್ರಣಕ್ಕೆ ಔಷಧವಿಲ್ಲ. ತಾಲೂಕು ಸೇರಿ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡಿದೆ. ಗ್ರಾಮಸ್ಥರ ಹೋರಾಟದ ಫಲವಾಗಿ ಇಂದು ಎಲ್ಲರಿಗೂ ಉಚಿತ ಬೀಜ ಲಭ್ಯವಾಗುತ್ತಿದೆ ಎಂದು ಉದ್ಯಮಿ ಚಂದ್ರಶೇಖರ ಗುತ್ತೇದಾರ್ ಹೇಳಿದರು.
ಶ್ರೀ ನಂದಿ ಬಸವೇಶ್ವರ ದೇವಸ್ಥಾನದ ಎಂ.ಬಿ.ಅಂಬಲಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಆತ್ಮನಿರ್ಭರತಾ ಯೋಜನೆಯಡಿ ಉಚಿತ ಬೀಜ ವಿತರಣೆ ಸಮಾರಂಭದಲ್ಲಿ ಮಾತನಾಡಿ, ಕಸ್ಕೋಟಾ ಕುರಿತು ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದರಿಂದಲೇ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಿದೆ. ಹೈದರಾಬಾದ್ ವಿಶ್ವವಿದ್ಯಾಲಯದ ವಿಾನಿಗಳು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಬಳಿಕ ವರದಿಯಂತೆ ಕ್ರಮ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸಹಾಯಕ ಕೃಷಿ ನಿರ್ದೇಶಕ ಅಭಿಲಾಷ ಸುಬೇದಾರ, ಪ್ರಮುಖರಾದ ಬಸವರಾಜ ದೇಶಮುಖ, ಗೋಪಾಲ ಎಂ.ಪಿ., ಬಸವರಾಜ ದೇಶಮುಖ, ಶಿವಕುಮಾರ ಅಂಬಲಗಿ, ಸಂಗಯ್ಯ ಸ್ವಾಮಿ, ಮೋಹನ ಗುತ್ತೇದಾರ್, ರೇವಣಸಿದ್ದಪ್ಪ ಮೇಲಿನಕೇರಿ, ಇಸ್ಮಾಯಿಲ್, ನಾಗರಾಜ ಗುತ್ತೇದಾರ್, ರಜನಿಕಾಂತ ಬುಳ್ಳಾ, ಅಮೃತ ಮಡಿವಾರ, ಮೌನೇಶ ಮುಸ್ತಾರಿ ಇತರರಿದ್ದರು.
"
ಕಸ್ಕೋಟಾ ನಿಯಂತ್ರಣಕ್ಕಾಗಿ ವಿಶೇಷ ಸಂಶೋಧನೆ ನಡೆಸಲು ಈಗಾಗಲೇ ಹೈದರಾಬಾದ್ ವಿಾನಿಗಳು ವರದಿ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರವು ತ್ವರಿತಗತಿಯಲ್ಲಿ ಅನುಮೋದನೆ ನೀಡಬೇಕು. ವರದಿ ಆಧಾರಿತ ರೈತರಿಗೆ ಪರಿಹಾರ ಕಲ್ಪಿಸಬೇಕು. ಕೇವಲ ಬೀಜ ವಿತರಣೆಗೆ ಸುಮ್ಮನಿರುವುದಿಲ್ಲ. ಗೊಬ್ಬರ ಪೂರೈಸಬೇಕು. ಇಲ್ಲದಿದ್ದರೆ ಕೃಷಿ ಕಚೇರಿ ಮುಂದೆ ಪ್ರತಿಭನೆಗೆ ಸಜ್ಜಾಗಬೇಕಾಗುತ್ತದೆ.
— > ಗೋಪಾಲ ಎಂ.ಪಿ., ಅಧ್ಯ, ಕಸ್ಕೋಟಾ ನಿಮೂರ್ಲನೆ ಹೋರಾಟ ಸಮಿತಿ