ನೆಲಮಂಗಲ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜನ ಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಶಾಸಕ ಎನ್. ಶ್ರೀನಿವಾಸ್ ಸ್ವೀಕರಿಸಿದರು. ತಹಸೀಲ್ದಾರ್ ಮಲ್ಲೇಶ್ಬೀರಪ್ಪ ಪೂಜಾರ್, ತಾಲೂಕು ಪಂಚಾಯಿತಿ ಇಒ ಡಾ. ಬಿಂಧು, ಬಿಇಒ ರಮೇಶ್, ನಗರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಭರತ್ಗೌಡ, ಎಎಸ್ಐ ಬಿ.ಎಸ್.ರು ಇತರರು ಇದ್ದರು.
ನೆಲಮಂಗಲ : ತಾಲೂಕಿನ ಎಲ್ಲ ಬಡ, ನಿರಾಶ್ರಿತರಿಗೆ ಉಚಿತ ನಿವೇಶನ ನೀಡುವ ನಿಟ್ಟಿನಲ್ಲಿ ಈಗಾಗಲೇ ಅಗತ್ಯ ಕ್ರಮಕೈಗೊಳ್ಳಲಾಗಿದ್ದು, ಶ್ರೀದಲ್ಲಿ ಹಂಚಿಕೆ ಮಾಡಲಾಗುವುದು ಎಂದು ಶಾಸಕ ಎನ್. ಶ್ರೀನಿವಾಸ್ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನ ಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು. ನಗರದ ಪ್ರದೇಶಕ್ಕೆ ಹೊಂದಿಕೊಂಡಿರುವ ತಾಲೂಕಿನಲ್ಲಿ
ಭೂಮಿಯ ಬೆಲೆ ಅಧಿವಾಗಿದೆ. ಸರ್ಕಾರಿ ಜಮೀನು ಲಭ್ಯತೆ ಕಡಿಮೆ ಆಗುತ್ತಿದೆ. ಆದರೂ ತನ್ನ ಅಧಿಕಾರಾವಧಿಯಲ್ಲಿ ಉಚಿತ ನಿವೇಶನ ನೀಡಿ ೇತ್ರದ ಬಡಜನರ ಪರವಾಗಿ ನಿಲ್ಲುವೆ. ಇದು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತಾಗಲಿದೆ ಎಂದರು.
ಜನ ಸ್ಪಂದನಾ ಕಾರ್ಯಕ್ರಮದಲ್ಲಿ ನೂರಾರು ಸಾರ್ವಜನಿಕರು ಸಮಸ್ಯೆಯನ್ನು ಶಾಸಕರಿಗೆ ನೀಡಿ ಪರಿಹಾರಕ್ಕಾಗಿ ಮನವಿ ಮಾಡಿದರು. ಕೆಲವು ಸಮಸ್ಯೆ ಸ್ಥಳದಲ್ಲಿಯೇ ಪರಿಹರಿಸಿದರೆ, ದೊಡ್ಡ ಸಮಸ್ಯೆಗಳನ್ನು ಹದಿನೈದು ದಿನಗಳ ಒಳಗಾಗಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನ ಸೋಲದೇನವಹಳ್ಳಿ ವ್ಯಾಪ್ತಿಯಲ್ಲಿ 90 ಎಕರೆ ಸರ್ಕಾರಿ ಜಾಗವಿದ್ದು, 1996ರಿಂದಲೂ ಉಳುಮೆ ಮಾಡಿಕೊಂಡು ಅರ್ಜಿ ಹಾಕಿಕೊಂಡಿರುವ ರೈತರಿಗೆ ಭೂಮಿ ಮಂಜೂರು ಮಾಡಿಸಿಕೊಡುವಂತೆ ಮನವಿ ಮಾಡಿದರು.
ನಿವೇಶನ ಹಂಚಿಕೆ.. : ತಾಲೂಕಿನಲ್ಲಿ ಸುಮಾರು 200ಕ್ಕೂ ಅಧಿಕವಾದ ಸರ್ಕಾರಿ ಜಮೀನು ಗುರುತು ಮಾಡಲಾಗಿದೆ. ಈಗಾಗಲೇ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ 139 ಎಕರೆ ಪ್ರದೇಶದಲ್ಲಿ ನಿವೇಶನ ಹಂಚಲು ಸಿದ್ಧವಿದ್ದು, ನೆ ಸಿದ್ಧಪಡಿಸಿ ಬಡಾವಣೆ ನಿರ್ಮಿಸುವುದು. ಶ್ರೀದಲ್ಲಿ ಬಡನಿರಾಶ್ರಿತರಿಗೆ ಉಚಿತ ನಿವೇಶನ ಹಂಚುವುದಾಗಿ ಶಾಸಕ ಎನ್. ಶ್ರೀನಿವಾಸ್ ಮಾಹಿತಿ ನೀಡಿದರು.
ಸಾರ್ವಜನಿಕರ ಸಮಸ್ಯೆ : ಸಾರ್ವಜನಿಕರು ಖಾತೆಗಳು, ಇ&ಸ್ವತ್ತು, ಪಹಣಿ, ಆರೋಗ್ಯ, ಪೌತಿ ಖಾತೆ, ರಸ್ತೆ ನಿರ್ಮಾಣ, ಜಮೀನು ಸರ್ವೇ, ಯಂಟಗಾನಹಳ್ಳಿ, ದಾಸೇನಹಳ್ಳಿಯಲ್ಲಿ ವಿದ್ಯುತ್ ಟ್ರಾನ್ಸ್ಾಮ್ರ್ ಅಳವಡಿಕೆ, ಅಧಿಕಾರಿಗಳ ನಿಧಾನಗತಿಯ ಕೆಲಸಗಳು, ಮುಂತಾದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಹಾಗೂ ರೈತರ ಶಾಸಕರಿಗೆ ಮನವಿ ನೀಡಿದರು.
ಕಾಂಪೌಂಡ್ ತೆರವಿಗೆ ಸ್ಥಳದಲ್ಲೇ ಆದೇಶ: ನಗರದ ವಿವರ್ಸ್ ಕಾಲನಿಯ ಸ. ನಂ 165ರ ಬಡಾವಣೆ ನಿರ್ಮಿಸಿದ್ದು, ರಸ್ತೆಯನ್ನು ಅನಧಿಕೃತವಾಗಿ ನಕಲಿ ಖಾತೆ ಮಾಡಿಸಿಕೊಂಡು ರಸ್ತೆಯಲ್ಲಿ ಕಾಂಪೌಡ್ ನಿರ್ಮಿಸಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಬಡಾವಣೆ ನಿವಾಸಿಗಳು ಶಾಸಕರ ಗಮನಕ್ಕೆ ತಂದರು. ಅನಧಿಕೃತ, ನಕಲಿಖಾತೆಯನ್ನು ವಜಾಗೊಳಿಸಿ ಕೂಡಲೇ ಕಾಂಪೌಂಡ್ ತೆರವು ಕಾರ್ಯ ಮಾಡುವಂತೆ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಶಾಸಕರು ಆದೇಶ ನೀಡಿದರು.
ಶಾಸಕ ಎನ್. ಶ್ರೀನಿವಾಸ್ ಮಾತನಾಡಿ, ಜನಸ್ಪಂದನದಿಂದಾಗಿ ತಾಲೂಕಿನ ಸಾಕಷ್ಟು ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಿದೆ. ಈಗಾಗಲೇ ಸಾವಿರಾರು ರೈತರು, ಸಾರ್ವಜನಿಕರು ಪ್ರಯೋಜನ ಪಡೆದುಕೊಂಡಿದ್ದಾರೆ. ಕಚೇರಿಗಳಿಗೆ ರೈತರು ಸಾರ್ವಜನಿಕರು ಅಲೆಯುವುದನ್ನು ತಪ್ಪಿಸಲು ತಾಲೂಕಿನಲ್ಲಿ ಆಡಳಿತ ಯಂತ್ರ ಅತ್ಯಂತ ವೇಗ ನೀಡಲುವ ಉದ್ದೇಶದಿಂದ ಆಗಿಂದಾಗ್ಗೆ ಜನಸಂಪರ್ಕ ಸಭೆ ನಡೆಸಲಾಗುತ್ತಿದೆ ಎಂದರು.
ತಹಸೀಲ್ದಾರ್ ಮಲ್ಲೇಶ್ಬೀರಪ್ಪ ಪೂಜಾರ್ ಮಾತನಾಡಿ, ತಾಲೂಕು ಕಚೇರಿಯಲ್ಲಿ ಶಾಸಕರ ನೇತೃತ್ವದಲ್ಲಿ 9ನೇ ಜನಸ್ಪಂದನಾ ಕಾರ್ಯಕ್ರಮ ಇದಾಗಿದೆ. ಈಗಾಗಲೇ 400ಕ್ಕೂ ಹೆಚ್ಚು ಆರ್ಜಿಯನ್ನು ಸ್ವೀಕರಿಸಿದ್ದು, ಸ್ಥಳದಲ್ಲೇ ಬಹುತೇಕ ಅರ್ಜಿಗೆ ಪರಿಹಾರ ಒದಗಿಸಿಲಾಗಿದೆ. ಇನ್ನೂ ಕೆಲ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗೆ ರವಾನಿಸಲಾಗಿದೆ. ಪರಿಹರಿಸಲು ಸಾಧ್ಯವಿರದ ಅರ್ಜಿಗಳಿಗೆ ಹಿಂಬರಹ ನೀಡಿ ಮುಂದಿನ ಕ್ರಮಕ್ಕೆ ಸಹಕರಿಸಲಾಗಿದೆ. ಉಳಿಕೆ 20 ಅರ್ಜಿ ಮಾತ್ರ ಬಾಕಿ ಇದ್ದು, ಮುಂದಿನ ಸಭೆಯೊಳಗಾಗಿ ಬಗ್ಗೆ ಹರಿಸಲಾಗುವುದು ಎಂದು ಹೇಳಿದರು.
ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ಕೆ. ನಾಗರಾಜು, ಮಾಜಿ ಅಧ್ಯಕ್ಷ ಎಂ. ನಾರಾಯಣ್ಗೌಡ, ಮಾಜಿ ಸದಸ್ಯ ಬಿ.ಜಿ.ವಾಸು, ನಗರಸಭೆ ಅಧ್ಯಕ್ಷ ಎನ್. ಗಣೇಶ್, ಸದಸ್ಯ ಸಿ. ಪ್ರದಿಪ್, ಮುಖಂಡ ಸಿ.ಎಂ.ಗೌಡ, ಚಿಕ್ಕಣ್ಣ, ಜಯರಾಮ್, ಮುನಿಯಪ್ಪ, ರಮೇಶ್, ಭಕ್ತನಪಾಳ್ಯಮುನಿರಾಜು, ರವಿಕುಮಾರ್ ಮತ್ತಿತರರು ಇದ್ದರು.