ಮಲ್ಲಪ್ಪ ಸಂಕೀನ್​  
ರಾಜ್ಯ

ಆರೋಗ್ಯ ತಪಾಸಣಾ ಶಿಬಿರ ಉಚಿತ ನಾಳೆ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್​ ಮಾಹಿತಿ
  • ಜೀವನ ಶೈಲಿ ಕುರಿತು ವೈದ್ಯರೊಂದಿಗೆ ಸಂವಾದ
ಯಾದಗಿರಿ: ವೈದ್ಯರ ದಿನಾಚರಣೆ ನಿಮಿತ್ತ ನಗರದ ಆಶೀರ್ವಾದ ಆಸ್ಪತ್ರೆ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲೆಯ ಪತ್ರಕರ್ತರಿಗಾಗಿ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಹಾಗೂ ನೇತ್ರ ಶಸಚಿಕಿತ್ಸಾ ಶಿಬಿರ  ಜೂ.28ರಂದು ಬೆಳಗ್ಗೆ 10ಕ್ಕೆ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್​ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಸ್ಪತ್ರೆಯ ಮುಖ್ಯಸ್ಥರೂ ಆದ ಹಿರಿಯ ವೈದ್ಯ ಡಾ.ಸಿ.ಎಂ.ಪಾಟೀಲ್​ ಅವರು ಹೃದಯ ಸಂಬಂಧಿ, ಮಧುಮೇಹ, ಅಧಿಕ ರಕ್ತದೊತ್ತಡ ಸೇರಿ ವಿವಿಧ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನೀಡಲಿದ್ದಾರೆ. ರೋಗ ನಿಯಂತ್ರಣಕ್ಕೆ ಅಗತ್ಯವಿರುವ ರಕ್ತ ಪರೀಕ್ಷೆ, ಇಸಿಜಿ, ಬಿಪಿ ತಪಾಸಣೆಗಳನ್ನು ಉಚಿತವಾಗಿ ಮಾಡಲಾಗುವುದು. ಶಹಾಪುರದ ದೃಷ್ಟಿ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಹಾಗೂ ನೇತ್ರತ ಡಾ.ಎಚ್​.ಭೀಮರೆಡ್ಡಿ ಪಾಟೀಲ್​ ಅವರ ನೇತೃತ್ವದಲ್ಲಿ ನೇತ್ರ ತಪಾಸಣೆ ಮಾಡಲಿದ್ದಾರೆ ಎಂದು ತಿಳಿಸಿದರು. ಅಗತ್ಯವಿರುವವರಿಗೆ ಉಚಿತವಾಗಿ ಶಸಚಿಕಿತ್ಸೆ ಮಾಡಲಾಗುವುದು. ಶಸಚಿಕಿತ್ಸೆಗೆ ಪ್ರತ್ಯೇಕ ದಿನಾಂಕ ನಿಗದಿಪಡಿಸಲಾಗುವುದು. ಹಿರಿಯ ವೈದ್ಯ ಸಿ.ಎಂ. ಪಾಟೀಲ್​ ಅವರು ಪತ್ರಕರ್ತರ ಸೇವೆ ಮನಗಂಡು ಶಿಬಿರವನ್ನು ನಡೆಸಲು ಸಹಕರಿಸಿದ್ದು, ಹೀಗಾಗಿ ಪತ್ರಕರ್ತರು ಕಡ್ಡಾಯವಾಗಿ ಸಂಘದ ಈ ವರ್ಷದ ಕಾರ್ಡ್​-9 ಕಡ್ಡಾಯವಾಗಿ ತೆಗೆದುಕೊಂಡು ಬರಬೇಕು. ಇಲ್ಲದೇ ಹೊದಲ್ಲಿ ಚಿಕಿತ್ಸೆಗೆ ಅವಕಾಶ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಖಾಲಿ ಹೊಟ್ಟೆಯಲ್ಲಿ ಹಲವು ಪರೀಕ್ಷೆ ಮಾಡಿಸಿ
ಶಿಬಿರಕ್ಕೂ ಮುನ್ನ ಬೆಳಗ್ಗೆ 8ರ ಸುಮಾರಿಗೆ ಖಾಲಿ ಹೊಟ್ಟೆಯಲ್ಲಿ ಸಕ್ಕರೆ ಕಾಯಿಲೆ ಟೆಸ್ಟ್​ ಮಾಡಿಸಬಹುದು. ಮೂತ್ರ ಪರೀಕ್ಷೆ, ರಕ್ತ ಪರೀಕ್ಷೆ, ಬಿಪಿ ಪರೀಕ್ಷೆ, ಇಸಿಜಿ, ಹೃದಯ ಸಂಬಂಧಿ ಕಾಯಿಲೆ ಪರೀೆ ಸೇರಿ ಹಲವು ವೈದ್ಯಕಿಯ ಪರೀಕ್ಷೆಗಳನ್ನು ಮಾಡಿಸಬಹುದು. ನೇತ್ರ ತಪಾಸಣೆ ಬಳಿಕ ಅಗತ್ಯವಿರುವವರಿಗೆ ಉಚಿತವಾಗಿ ಶಸಚಿಕಿತ್ಸೆ ಮಾಡಲಾಗುವುದು. ಶಸಚಿಕಿತ್ಸೆಗೆ ಪ್ರತ್ಯೇಕ ದಿನಾಂಕ ನಿಗದಿ ಮಾಡಲಾಗುತ್ತದೆ.
ಆರೋಗ್ಯ ಕುರಿತು ಸಂವಾದ
ಶಿಬಿರ ಮುಗಿದ ಬಳಿಕ ನಮ್ಮ ಜೀವನ ಶೈಲಿ ಹೇಗಿರಬೇಕು ಎಂಬ ಕುರಿತು ವೈದ್ಯರೊಂದಿಗೆ ಸಂವಾದ ನಡೆಯಲಿದೆ  ಹತ್ತಾರು ವಿಷಯಗಳ ಕುರಿತು ವೈದ್ಯರೊಂದಿಗೆ ನೇರವಾಗಿ ಚರ್ಚಿಸಿ ಪರಿಹಾರ ಪಡೆಯಬಹುದು ಎಂದು ಅಧ್ಯಕ್ಷ ಸಂಕೀನ್​ ತಿಳಿಸಿದ್ದಾರೆ.