ಕಲಬುರಗಿ: ನಗರದ ಡಬರಾಬಾದ್ ಕ್ರಾಸ್‌ನಲ್ಲಿರುವ ಎನ್.ಕೆ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಶಿಬಿರದಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳ ತಪಾಸಣೆ ನಡೆಸಿ ಅಗತ್ಯ ವೈದ್ಯಕೀಯ ಸಲಹೆ ಹಾಗೂ ಚಿಕಿತ್ಸೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಡಾ. ಆರಿಫ್ ರಝಾ ಅಹ್ಮದ್ (ಜಠರ, ಯಕೃತ್ ಹಾಗೂ ಅಗ್ನ್ಯಾಶಯ ಸಂಬಂಧಿತ ಶಸ್ತ್ರಚಿಕಿತ್ಸಾ ತಜ್ಞರು), ಡಾ. ಜೀಶಾನ್ ಅಲಿ (ಜೀರ್ಣಾಂಗ ಮತ್ತು ಯಕೃತ್ ರೋಗಗಳ ತಜ್ಞರು), ಡಾ. ವೀರೇಶ್ ಗೋಡಿ (ಸಾಮಾನ್ಯ ವೈದ್ಯಕೀಯ ಹಾಗೂ ದೀರ್ಘಕಾಲೀನ ಕಾಯಿಲೆಗಳ ತಜ್ಞರು), ಡಾ. ಮಹಾಲಿಂಗಂ (ಮೂಳೆ, ಕೀಲು ಹಾಗೂ ಬೆನ್ನುಹುರಿ ಶಸ್ತ್ರಚಿಕಿತ್ಸಾ ತಜ್ಞರು), ಡಾ. ಶ್ರುತಿಕಾ (ಮಹಿಳಾ ಆರೋಗ್ಯ ಮತ್ತು ಸ್ತ್ರೀರೋಗ ತಜ್ಞರು), ಡಾ. ಮೊಹಮ್ಮದ್ ತೈಫ್ ಬೆಂಗಡಿಗೇರಿ (ಮೂತ್ರಪಿಂಡ ಮತ್ತು ಮೂತ್ರನಾಳ ರೋಗಗಳ ತಜ್ಞರು), ಡಾ. ವಿವೇಕ್ ಪಾಟೀಲ್ (ನೆಫ್ರಾಲಜಿ ಮತ್ತು ಡಯಾಲಿಸಿಸ್ ತಜ್ಞರು), ಡಾ. ರಹಮಾನ್ ಹೈದರ್ (ತೀವ್ರ ನಿಗಾ ಚಿಕಿತ್ಸೆ ವಿಭಾಗದ ಮುಖ್ಯಸ್ಥರು) ಹಾಗೂ ಡಾ. ಉದಯಕುಮಾರ್ ಖಾಸಗೆ (ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರು) ಉಪಸ್ಥಿತರಿದ್ದರು. ಶಿಬಿರದಲ್ಲಿ ಸುಮಾರು 600ಕ್ಕೂ ಹೆಚ್ಚು ರೋಗಿಗಳು ಭಾಗವಹಿಸಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಯ ಸೌಲಭ್ಯವನ್ನು ಪಡೆದುಕೊಂಡರು.
ಆರೋಗ್ಯ ಸೇವೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಇಂತಹ ಶಿಬಿರಗಳನ್ನು ಮುಂದೆಯೂ ಆಯೋಜಿಸಲಾಗುವುದು ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿತು.