ಯಾದಗಿರಿ ಸೋಮನಾಥರೆಡ್ಡಿಗೌಡ ಯಲ್ಹೇರಿ, ಶಂಕರಲಿAಗಮ್ಮ ಸೋಮನಾಥರೆಡ್ಡಿಗೌಡ ಯಲ್ಹೇರಿ, ಡಾ.ವೀರಬಸವಂತರಡ್ಡಿ ಮುದ್ನಾಳ್ ಹಾಗೂ ವೆಂಕಟರಡ್ಡಿ ಮುದ್ನಾಳ್ ಸ್ಮರಣಾರ್ಥ ಶುಕ್ರವಾರ ಏರ್ಪಡಿಸಿದ್ದ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆಗೆ ಮಾಡಿಸಿಕೊಂಡ ೩೫೦ ಜನರಿಗೆ ಕನ್ನಡಕ ವಿತರಿಸಲಾಯಿತು. ಸಾನ್ನಿಧ್ಯ ವಹಿಸಿದ್ದ ಹೆಡಗಿಮದ್ರಿಯ ಶ್ರೀ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಹಿರಿಯ ನೆನಪಿನಲ್ಲಿ ಇಂತಹ ಜನೋಪಯೋಗಿ ಕಾರ್ಯ ಹಮ್ಮಿಕೊಂಡಿದ್ದÄ ಇತರರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ ಕಣ್ಣಿನ ತಪಾಸಣೆ ಮಾಡಿ ಉಚಿತವಾಗಿ ಕನ್ನಡಕ ನೀಡಿದ್ದರಿಂದ ಬಡವರಿಗೆ ಮತ್ತೊಮ್ಮೆ ದೃಷ್ಟಿ ಬಂದAತಾಗಿದೆ. ಇಂತಹ ಶಿಬಿರಗಳು ಮೇಲಿಂದ ಮೇಲೆ ನಡೆಸುವ ಮೂಲಕ ಬಡವರಿಗೆ ನೇತ್ರ ಭಾಗ್ಯ ನೀಡಬೇಕೆಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ್ ಮಾತನಾಡಿ, ಪ್ರತಿವರ್ಷ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯ ಬಡವರಿಗೆ ಅನುಕೂಲ ಮಾಡಿಕೊಡುವ ಕೆಲಸ ಆಗುತ್ತಿದೆ. ನೇತ್ರ ತಜ್ಞರಾದ ಡಾ.ಪ್ರದೀಪರೆಡ್ಡಿ, ಡಾ.ವಿವೇಕಾನಂದರೆಡ್ಡಿ ಯಲ್ಹೇರಿ ಕಳೆದ ಮೂರು ದಿನಗಳಲ್ಲಿ ೫೦ ಜನರ ಉಚಿತ ಕಣ್ಣಿನ ಶಸöಚಿಕಿತ್ಸೆ ಮೂಲಕ ಹಿರಿಯರನ್ನು ವಿನೂತನ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ ಎಂದು ಕೊಂಡಾಡಿದರು. ನೇತ್ರ ತಜ್ಞ ಶರಣಗೌಡ ಯಲ್ಹೇರಿ, ಭೀಮಣ್ಣಗೌಡ ಕ್ಯಾತ್ನಾಳ, ಶಂಕರ ಸೋನಾರ ಇತರರಿದ್ದರು. 
ರಾಜ್ಯ

೫೦ ಜನರ ಕಣ್ಣಿನ ಉಚಿತ ಶಸöಚಿಕಿತ್ಸೆ

ಪ್ರಮುಖ ಮುಖ್ಯಾಂಶಗಳು

  • ಲಿಂಗೈಕ್ಯ ನಾಲ್ವರು ಹಿರಿಯರ ಸ್ಮರಣಾರ್ಥ ನೇತ್ರ ತಪಾಸಣೆ ಕಾರ್ಯಕ್ರಮ
ಯಾದಗಿರಿ : ಸೋಮನಾಥರೆಡ್ಡಿಗೌಡ ಯಲ್ಹೇರಿ, ಶಂಕರಲಿAಗಮ್ಮ ಸೋಮನಾಥರೆಡ್ಡಿಗೌಡ ಯಲ್ಹೇರಿ, ಡಾ.ವೀರಬಸವಂತರಡ್ಡಿ ಮುದ್ನಾಳ್ ಹಾಗೂ ವೆಂಕಟರಡ್ಡಿ ಮುದ್ನಾಳ್ ಸ್ಮರಣಾರ್ಥ ಶುಕ್ರವಾರ ಏರ್ಪಡಿಸಿದ್ದ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆಗೆ ಮಾಡಿಸಿಕೊಂಡ ೩೫೦ ಜನರಿಗೆ ಕನ್ನಡಕ ವಿತರಿಸಲಾಯಿತು.
ಸಾನ್ನಿಧ್ಯ ವಹಿಸಿದ್ದ ಹೆಡಗಿಮದ್ರಿಯ ಶ್ರೀ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಹಿರಿಯ ನೆನಪಿನಲ್ಲಿ ಇಂತಹ ಜನೋಪಯೋಗಿ ಕಾರ್ಯ ಹಮ್ಮಿಕೊಂಡಿದ್ದÄ ಇತರರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶೇಷವಾಗಿ ಕಣ್ಣಿನ ತಪಾಸಣೆ ಮಾಡಿ ಉಚಿತವಾಗಿ ಕನ್ನಡಕ ನೀಡಿದ್ದರಿಂದ ಬಡವರಿಗೆ ಮತ್ತೊಮ್ಮೆ ದೃಷ್ಟಿ ಬಂದAತಾಗಿದೆ. ಇಂತಹ ಶಿಬಿರಗಳು ಮೇಲಿಂದ ಮೇಲೆ ನಡೆಸುವ ಮೂಲಕ ಬಡವರಿಗೆ ನೇತ್ರ ಭಾಗ್ಯ ನೀಡಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ್ ಮಾತನಾಡಿ, ಪ್ರತಿವರ್ಷ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯ ಬಡವರಿಗೆ ಅನುಕೂಲ ಮಾಡಿಕೊಡುವ ಕೆಲಸ ಆಗುತ್ತಿದೆ. ನೇತ್ರ ತಜ್ಞರಾದ ಡಾ.ಪ್ರದೀಪರೆಡ್ಡಿ, ಡಾ.ವಿವೇಕಾನಂದರೆಡ್ಡಿ ಯಲ್ಹೇರಿ ಕಳೆದ ಮೂರು ದಿನಗಳಲ್ಲಿ ೫೦ ಜನರ ಉಚಿತ ಕಣ್ಣಿನ ಶಸöಚಿಕಿತ್ಸೆ ಮೂಲಕ ಹಿರಿಯರನ್ನು ವಿನೂತನ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ ಎಂದು ಕೊಂಡಾಡಿದರು.
ನೇತ್ರ ತಜ್ಞ ಶರಣಗೌಡ ಯಲ್ಹೇರಿ, ಭೀಮಣ್ಣಗೌಡ ಕ್ಯಾತ್ನಾಳ, ಶಂಕರ ಸೋನಾರ ಇತರರಿದ್ದರು.