ಪಾವಗಡ: ಗಡಿನಾಡಿನ ಜನತೆಗೆ ಯಾವುದೇ ಪಲಾಪೇಕ್ಷ ಇಲ್ಲದೆ ಹೆಲ್ಪ್ ಸೊಸೈಟಿ ಸಂಸ್ಥೆ ಉತ್ತಮ ಸೇವೆ ನೀಡುತ್ತಿದೆ. ಅರೋಗ್ಯ ಸೇವೆ ಜೊತೆಗೆ ಶೈಕ್ಷಣಿಕ, ಸಾಮಾಜಿಕ ಸೇವೆಯಲ್ಲಿ ನಿರತವಾಗಿದೆ. ನೇತ್ರ, ಆರೋಗ್ಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಹಮ್ಮಿಕೊಂಡು ಜನರಿಗೆ ಅನುಕೂಲ ಮಾಡುತ್ತಿದೆ ಎಂದು ಡಾ. ಅರುಣ್ ಕುಮಾರ್ ಹೇಳಿದರು.
ತಾಲೂಕಿನ ನಾಗಲಮಡಿಕೆ ಹೋಬಳಿ, ತಿರುಮಣಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹೆಲ್ಪ್ ಸೊಸೈಟಿ, ಸೇವಾ ಟ್ರಸ್ಟ್ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಆಶ್ರಯದಲ್ಲಿ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ 210ಕ್ಕೂ ಹೆಚ್ಚು ಜನ ಪರೀಕ್ಷೆಗೆ ಒಳಪಟ್ಟಿದ್ದು. 58 ರೋಗಿಗಳಿಗೆ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗೆ ಬಸ್ಸಿನಲ್ಲಿ ಕಳಿಸಿಕೊಡಲಾಯಿತು.
ಮುಖಂಡರಾದ ಸುರೇಂದ್ರ ಶ್ರೀನಿವಾಸ, ಶಂಕರ ಆಸ್ಪತ್ರೆ ವೈದ್ಯ ಡಾ.ಮನ್ವಿತ್, ಡಾ.ಶ್ರುತಿ, ಸಂಯೋಜಕ ಹರೀಶ್, ಬೇಕರಿ ನಾಗರಾಜ್ ಇತರರು ಇದ್ದರು.