ಸಾಂದರ್ಭಿಕ ಚಿತ್ರ 
ರಾಜ್ಯ

ಕಲಿಕೆ ಉತ್ತೇಜಿಸಲು ಉಚಿತ ಬಸ್‌ಪಾಸ್!

ಮಂಜುನಾಥ ಗದಗಿನ
ವಿಜಯವಾಣಿ ಸುದ್ದಿಜಾಲ ರಟ್ಟಿಹಳ್ಳಿ
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಳ, ಶಾಲೆಗಳಿಂದ ದೂರ ಉಳಿಯ ಬಾರದು ಎಂದು ಸರ್ಕಾರ ನಾನಾ ಯೋಜನೆ ಜಾರಿಗೆ ತಂದು ಶ್ರಮಿಸುತ್ತಿದೆ. ಇದರ ಜತೆ ಏಳನೇ ತರಗತಿ ನಂತರ ಮಕ್ಕಳು ಶಾಲೆ ಬಿಡಬಾರದು ಎಂಬ ಉದ್ದೇಶದಿಂದ ಉತ್ತೀರ್ಣರಾಗಿ ಪ್ರೌಢಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ಕಲ್ಪಿಸಲು ಮುಂದಾಗಿದ್ದಾರೆ ರಟ್ಟಿಹಳ್ಳಿ ತಾಲೂಕಿನ ಲಿಂಗದೇವರಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲೆಯ ಮುಖ್ಯ ಶಿಕ್ಷಕ ಎಂ.ಕೆ.ಹೊಳಜೋಗಿ.
ಲಿಂಗದೇವರಕೊಪ್ಪ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸೌಲಭ್ಯಗಳಿವೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಪ್ರೌಢ ಶಾಲೆಗೆ ಪಕ್ಕದ ಕುಂಚೂರು, ಹೆಡಿಯಾಲ, ಸುಣಕಲ್‌ಬಿದರಿ, ಹಿರೇಕೆರೂರು ಪಟ್ಟಣ ಮತ್ತು ಗ್ರಾಮಗಳಿಗೆ ತೆರಳುತ್ತಾರೆ. ಕೆಲವು ಮಕ್ಕಳ ತೀರಾ ಬಡತನದಲ್ಲಿ ಇರುವ ಕಾರಣಕ್ಕೆ ದುಡ್ಡುಕೊಟ್ಟು ಬಸ್‌ನಲ್ಲಿ ಹೋಗಲು ಸಾಧ್ಯವಾಗದೆ ಶಾಲೆ ಅರ್ಧಕ್ಕೆ ಬಿಡುವ ಪರಿಸ್ಥಿತಿ ಇದೆ. ಹೀಗಾಗಿ ಲಿಂಗದೇವರಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತ ಏಳನೇ ತರಗತಿ ವಿದ್ಯಾರ್ಥಿಗಳು ಪ್ರೌಢಶಾಲೆಗೆ ಬೇರೆ ಊರಿಗೆ ಹೋದರೆ ಅವರಿಗೆ ಸ್ವಂತ ವೆಚ್ಚದಲ್ಲಿ ಬಸ್‌ಪಾಸ್ ಒದಗಿಸಲು ಹೊಳಜೋಗಿ ಸಂಕಲ್ಪ ಮಾಡಿದ್ದಾರೆ. ಇದು ಜನರ ಮೆಚ್ಚೆಗೆಗೆ ಪಾತ್ರವಾಗಿದೆ.
ದಾಖಲಾತಿ-ಹಾಜರಾತಿ ಹೆಚ್ಚಳಕ್ಕೆ ಪ್ರಯತ್ನ: ಈ ಮೊದಲು ಲಿಂಗದೇವರಕೊಪ್ಪದ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಿಸಲು 1-7 ತರಗತಿಗೆ ದಾಖಲಾಗುವ ಎಲ್ಲ ವಿದ್ಯಾರ್ಥಿಗಳಿಗೆ 1111 ರೂ. ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತಿದ್ದಾರೆ. ನಲಿ-ಕಲಿ ವಿದ್ಯಾರ್ಥಿಗಳಿಗೆ ಹಾಜರಾತಿ ಹೆಚ್ಚಿಸಲು ದಿನಕ್ಕೆ 1ರೂ.ಗಳಂತೆ ಮಾಸಿಕವಾಗಿ ಮಕ್ಕಳ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದ್ದಾರೆ.
"

ಮಕ್ಕಳು ಸರ್ಕಾರಿ ಬಸ್‌ನಲ್ಲಿ ಹೋಗಲು ಅಗತ್ಯವಾಗಿರುವ ಬಸ್‌ಪಾಸ್ ಸೌಲಭ್ಯಕೆ ತಗಲುವ ವೆಚ್ಚವನ್ನು ವೈಯಕ್ತಿಕವಾಗಿ ವಿದ್ಯಾರ್ಥಿಗಳಿಗೆ 3 ವರ್ಷಗಳ ಕಾಲ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸುವವರೆಗೆ ಉಚಿತವಾಗಿ ವ್ಯವಸ್ಥೆ ಮಾಡಲಾಗುವುದು. ಈ ಯೋಜನೆ ನಮ್ಮ ಶಾಲೆಯಿಂದ ತೆರಳುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಸಲಿದೆ. ನಾನು ಈ ಶಾಲೆಯಲ್ಲಿ ಇರೋವರೆಗೂ ಈ ಸೌಲಭ್ಯ ಕಲ್ಪಿಸುವೆ.

ಸರ್ಕಾರಿ ಶಾಲೆಗಳ ಸಬಲೀಕಣಕ್ಕೆ ಈ ಎಲ್ಲ ಪ್ರಯತ್ನ ಮಹತ್ವಾಗಿದೆ. ಸರ್ಕಾರಿ ಶಾಲೆಯ ಇತರ ಎಲ್ಲ ಶಿಕ್ಷಕರು, ಮುಖ್ಯ ಶಿಕ್ಷಕರು ವಿಭಿನ್ನ ಯೋಜನೆ ಹಾಕಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಳವಾಗುತ್ತದೆ. ಮುಖ್ಯ ಶಿಕ್ಷಕ ಎಂ.ಕೆ. ಹೊಳಜೋಗಿ ಅವರ ಕಾರ್ಯಗಳು ಪ್ರಶಂಸರ್ಹವಾಗಿದೆ.

ಲ್ 01ಎ: ಶ್ರೀಧರ್ ಎನ್. ಬಿ.ಇ.ಓ ಹಿರೇಕೆರೂರು-ರಟ್ಟಿಹಳ್ಳಿ.