ರಸಗೊಬ್ಬರ ಮಾರಾಟದಲ್ಲಿ ವಂಚನೆ fertilizer 
ರಾಜ್ಯ

ರಸಗೊಬ್ಬರ ಮಾರಾಟದಲ್ಲಿ ವಂಚನೆ fertilizer

ಪ್ರಮುಖ ಮುಖ್ಯಾಂಶಗಳು

  • ಹಲವು ರೈತರಿಂದ ದೂರು
  • ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರತಿಭಾ ದಾಳಿ
ಬಂಗಾರಪೇಟೆ: ರೈತರಿಗೆ ರಸಗೊಬ್ಬರ ನೀಡುವಾಗ ದರ ಹೆಚ್ಚು ಕಡಿಮೆ ಮಾಡಿ ವಂಚಿಸುತ್ತಿರುವ ಬಗ್ಗೆ ದೂರುಗಳ ಬಂದ ಹಿನ್ನೆಲೆಯಲ್ಲಿ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರತಿಭಾ ಅವರು ಮಂಗಳವಾರ ನಗರದ ಎಲ್ಲೆಮಲ್ಲಪ್ಪ ರಸ್ತೆಯಲ್ಲಿರುವ ಮಾರುತಿ ಆಗ್ರೋ ಟ್ರೇಡರ್ಸ್ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಿದ್ದು, ಸ್ಪಷ್ಟನೆ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.fertilizer
ಈ ಅಂಗಡಿಯಲ್ಲಿ ರೈತರು ಖರೀದಿ ಮಾಡುವ ರಸಗೊಬ್ಬರ ದರ ಮತ್ತು ತೂಕದಲ್ಲಿ ವ್ಯತ್ಯಾಸ ಮಾಡುತ್ತಿರುವ ಬಗ್ಗೆ ಮೋಸ ಹೋದ ರೈತರು ಕೃಷಿ ಅಧಿಕಾರಿ ಗಮನಕ್ಕೆ ತಂದಿದ್ದರು. ತಕ್ಷಣ ರೈತರ ದೂರಿಗೆ ಸ್ಪಂದಿಸಿದ ಅಧಿಕಾರಿ ದಾಳಿ ನಡೆಸಿ ಪರಿಶೀಲಿಸಿದಾಗ ಹಲವು ಲೋಪದೋಷ ಪತ್ತೆ ಹಚ್ಚಿದ್ದಾರೆ. ಕಾನೂನು ಪ್ರಕಾರ ರಸಗೊಬ್ಬರ ದರಗಳು ಇರುವ ಫಲಕ ತೂಗು ಹಾಕಿಲ್ಲ ಅಥವಾ ಒಂದು ಕಡೆ ಬರೆದಿಲ್ಲ. ನಿಗದಿತ ದರಗಳನ್ವಯ ರಸಗೊಬ್ಬರ ಮಾರಾಟ ಮಾಡುತ್ತಿಲ್ಲ. ವಿವಿಧ ಸಂಸ್ಥೆಗಳಿಂದ ರಸಗೊಬ್ಬರ ಖರೀದಿಸಿದ ಬಗ್ಗೆ ದಾಖಲಾತಿ, ಪ್ರಮಾಣ ಪ್ರತ್ರ ಇಟ್ಟಿಲ್ಲ. ರಸಗೊಬ್ಬರ ಖರೀದಿಸುವ ಬಗ್ಗೆ ನಗದು ರಸೀತಿ ಅಥವಾ ಬಿಲ್ ಸಹ ರಚನೆ ಮಾಡದಿರುವುದು ಬೆಳಕಿಗೆ ಬಂದಿದೆ.
7ದಿನದ ಒಳಗೆ ಸ್ಪಷ್ಟನೆ ನೀಡಬೇಕು. ತಪ್ಪಿದ್ದಲ್ಲಿ ಯಾವುದೇ ಸಮಜಾಯಿಷಿ ಇಲ್ಲವೆಂದು ಪರಿಗಣಿಸಿ ಪರವಾನಗಿ ರದ್ದುಗೊಳಿಸುವ ಕ್ರಮದ ಜತೆಗೆ ಅಗತ್ಯ ವಸ್ತುಗಳ ಕಾನೂನು 1955 ರ 3 ಮತ್ತು 7ನೇ ಪ್ರಕರಣದಡಿ ಕ್ರಿಮಿನಲ್ ಮೊಖದ್ದಮ್ಮೆ ಸಲ್ಲಿಸಿ ಪ್ರಾಸಿಕ್ಯೂಷನ್ ಕ್ರಮ ಜರುಗಿಸಲಾಗುವುದು ಎಂದು ಕೃಷಿ ಅಧಿಕಾರಿ ಎಚ್ಚರಿಸಿದ್ದಾರೆ.