ನೆಲಮಂಗಲ ತಾಲೂಕಿನ ಬೆಣ್ಣೆಗೆರೆ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂ.
ನೆಲಮಂಗಲ : ದಾಬಸ್ಪೇಟೆ ಹೋಬಳಿ ಬೆಣ್ಣೆಗೆರೆ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಂದ ಆಡಳಿತ ಮಂಡಳಿ ಸೂಪರ್ಸೀಡ್ ಆಗಿರುವ ನಡುವೆಯೂ ಅವ್ಯವಹಾರದ ಆರೋಪ ಕೇಳಿಬಂದಿದೆ.
ಸಂದಲ್ಲಿ ಲೆಕ್ಕಪತ್ರ ನಿರ್ವಹಣೆ ಮಾಡದಿರುವುದು, ಸಹಕಾರ ಸಂಗಳ ಕಾಯ್ದೆ ಉಲ್ಲಂಘಿಸಿ ಆಡಳಿತ ಮಂಡಳಿಗೆ ಹೊಸ ಸದಸ್ಯರ ಸೇರ್ಪಡೆ ಮಾಡಿಕೊಂಡಿರುವುದನ್ನು ವಿರೋಧಿಸಿ ಕೆಲ ಸದಸ್ಯರು ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದಾಗ್ಯೂ ಬಹುಮತ ಇಲ್ಲದಿದ್ದರೂ ಸಹಕಾರ ಸಂ ನಡೆಸುತ್ತಿರುವುದನ್ನು ಪ್ರಶ್ನಿಸಿ ಆಡಳಿತ ಮಂಡಳಿಯ ಸದಸ್ಯರೊಬ್ಬರು ಹೈಕೊರ್ಟ್ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿದಾರರ ದೂರಿನ ಬಗ್ಗೆ ಸೂಕ್ತ ಕ್ರಮವಹಿಸುವಂತೆ ಸಹಾಯಕ ನಿಬಂಧಕರಿಗೆ ಜ.28ರಂದು ಆದೇಶ ನೀಡಿತ್ತು. ಹೈಕೋರ್ಟ್ ಆದೇಶದಂತೆ ವಿಚಾರಣೆ ನಡೆಸಿದ ಸಹಾಯಕ ನಿಬಂಧಕರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಕ್ಕೆ ಬಹುಮತ ಇಲ್ಲದಿರುವುದನ್ನು ಮನಗಂಡು ಪ್ರಸ್ತುತ ಆಡಳಿತ ಮಂಡಳಿ ರದ್ದು ಮಾಡಿ ಹೊಸ ಆಡಳಿತ ರಚನೆ ಮಾಡುವವರೆಗೆ ವಿಶೇಷ ಅಧಿಕಾರಿ ನೇಮಕ ಮಾಡಲು ೆ.25ರಂದು ಆದೇಶ ಹೊರಡಿಸಿತ್ತು.
ಅದರಂತೆ ಫೆ.27ರಂದು ಮಹಿಳಾ ಸಹಕಾರ ಸಂಕ್ಕೆ ಸಹಕಾರ ಸಂಗಳ ಅಭಿವೃದ್ಧಿ ಅಧಿಕಾರಿಯನ್ನು ವಿಶೇಷ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಅಂದೇ ಸಹಕಾರ ಸಂದ ಮೊಹರು (ಕಾಗದ ಪತ್ರಗಳ ಮೇಲೆ ಮುದ್ರೆಯ ಗುರುತು ಮತ್ತು ಅಂತಹ ಮುದ್ರೆಯನ್ನು ಒತ್ತುವ ಸಾಧನ), ಚೆಕ್ ಬುಕ್ಗಳನ್ನು ಸಂದ ಕಾರ್ಯದರ್ಶಿ ಅವರಿಂದ ವಶಕ್ಕೆ ಪಡೆಯಲಾಗಿತ್ತು. ಆದರೆ, ಮಾ.13ರಂದು ಸಹಕಾರದ ಸಂದ ಖಾತೆ ಇದ್ದ ಬ್ಯಾಂಕಿಗೂ ಸಂದ ನಡವಳಿಯ ಜತೆಗೆ ವಿಶೇಷ ಅಧಿಕಾರಿಯ ದಾಖಲೆಗಳನ್ನು ಮರುದಾಖಲಿಸುವಂತೆ ಮಾಹಿತಿ ನೀಡಿದ್ದರೂ ಮಾರ್ಚ್ನಲ್ಲಿ ವಿವಿಧ ದಿನಗಳಂದು ಸುಮಾರು 10.93 ಲಕ್ಷ ರೂಪಾಯಿಯನ್ನು ಸಂದ ಉಳಿತಾಯ ಖಾತೆಯಿಂದ ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ.
ಇದರ ಬೆನ್ನಲ್ಲೇ ಆಡಳಿತಾಧಿಕಾರಿಯಾಗಿರುವ ಸಿಡಿಒ ಅವರು ಸೂಪರ್ಸೀಡ್ ಬಳಿಕವೂ ಸಹಕಾರ ಸಂದ ಖಾತೆಯಿಂದ ಹಣ ಡ್ರಾ ಆಗಿರುವ ಕುರಿತು ಮಾಹಿತಿ ಕೊಡುವಂತೆ ಸಂದ ಕಾರ್ಯದರ್ಶಿಗೆ ನೋಟಿಸ್ ನೀಡಿದ್ದಾರೆ.
ಠಾಣೆಗೆ ದೂರು ನೀಡಲು ನಿರ್ಧಾರ : ಸಹಕಾರ ಸಂ ಸೂಪರ್ ಸೀಡ್ ಆದ ಮೇಲೂ ಸಂದ ಖಾತೆಯಿಂದ ಹಣ ಡ್ರಾ ಮಾಡಿರುವ ವಿಚಾರ ಒಂದೆಡೆಯಾದರೆ ಸಂದ ರೈತ ಸದಸ್ಯರು ಹಾಲಿನ ಬಿಲ್ ಪಾವತಿ ಮಾಡಲು ಖಾತೆಯಲ್ಲಿ ಹಣ ಇಲ್ಲದಿರುವುದನ್ನು ತಿಳಿದ ಸಹಕಾರ ಸಂದ ಸದಸ್ಯರು ಪೊಲೀಸ್ ಠಾಣೆಗೆ ದೂರು ಹೋದಾಗ ಅವರು ಸ್ವೀಕರಿಸಿಲ್ಲ.
ಅಗತ್ಯ ಕ್ರಮ : ಸೂಪರ್ ಸೀಡ್ ಆದ ಬಳಿಕ ಕಾರ್ಯದರ್ಶಿ ಹಾಗೂ ಅಧ್ಯಕ್ಷರು ಹಣ ಡ್ರಾ ಮಾಡುವಂತಿಲ್ಲ. ಸೂಪರ್ಸೀಡ್ಗೂ ಮುನ್ನವೇ ಚೆಕ್ ವಿತರಿಸಿದ್ದಲ್ಲಿ ವಿಶೇಷ ಅಧಿಕಾರಿಯ ಗಮನಕ್ಕೆ ತರಬೇಕಿದೆ. ಸಂದ ನಡವಳಿ ಹಾಗೂ ವಿಶೇಷ ಅಧಿಕಾರಿ ಸ್ಪೆಸಿಮನ್ ಸಿಗ್ನೇಚರ್ ಮಾಹಿತಿ ನೀಡಿದ ನಂತರವೂ ಬ್ಯಾಂಕಿನ ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಎರಡು ಬಾರಿ ಹಣ ಡ್ರಾ ಮಾಡಿಕೊಳ್ಳಲಾಗಿದೆ. ಶ್ರೀದಲ್ಲಿ ಅಗತ್ಯ ಕ್ರಮವಹಿಸುವುದಾಗಿ ವಿಶೇಷ ಅಧಿಕಾರಿ ಸಿಡಿಒ ನಾಗರಾಜು ಪ್ರತಿಕ್ರಿಯೆ ನೀಡಿದ್ದಾರೆ.
ಕಾರ್ಯದರ್ಶಿ ಲೋಪ? : ಸಂಕ್ಕೆ ವಿಶೇಷ ಅಧಿಕಾರಿ ನೇಮಕವಾದ ಬಳಿಕ ಸಂದ ನಡವಳಿ ಜತೆಗೆ ವಿಶೇಷ ಅಧಿಕಾರಿಯ ಸ್ಪೆಸಿಮನ್ ಸಿಗ್ನೇಚರ್ ಪ್ರತಿಯನ್ನು ಬ್ಯಾಂಕಿಗೆ ಕೊಡುವಂತೆ ಸಂದ ಕಾರ್ಯದರ್ಶಿಗೆ ನೀಡಲಾಗಿತ್ತು. ಸಂದ ಕಾರ್ಯದರ್ಶಿ ಹಣ ಡ್ರಾ ಮಾಡಿಕೊಳ್ಳುವವರೆಗೂ ಬ್ಯಾಂಕಿಗೆ ಮಾಹಿತಿ ನೀಡದ ಕಾರಣ ಉಳಿತಾಯ ಖಾತೆಯಲ್ಲಿ ಹಣದ ವ್ಯವಹಾರವಾಗಿದೆ. ಸಂದ ರೈತ ಸದಸ್ಯರಿಗೆ ಹಾಲಿನ ಬಿಲ್ ಪಾವತಿ ಮಾಡಲು ಹಣ ಇಲ್ಲದಂತಾಗಿದೆ ಎಂದು ಸದಸ್ಯರು ಆರೋಪಿಸಿದ್ದಾರೆ.