Four people who volunteered to clean a waste plant fell ill
ಚಿಕ್ಕಬಳ್ಳಾಪುರ: ತಾಲೂಕಿನ ಅಗಲಗುರ್ಕಿಯ ಖಾಸಗಿ ಸಂಸ್ಥೆಯ ತ್ಯಾಜ್ಯ ಸಂಸ್ಕರಣಾ ಘಟಕದ ಸ್ವಚ್ಛತೆಯ ವೇಳೆ ನಾಲ್ವರು ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ.
ಇಲ್ಲಿನ ಸುನೀಲ್, ಪ್ರಶಾಂತ್, ಜಯಪ್ರಕಾಶ್ ಹಾಗೂ ಮದನ್ ಅಸ್ವಸ್ಥರು. ತಾಲೂಕಿನ ಅಗಲಗುರ್ಕಿ ಕೈಗಾರಿಕಾ ಪ್ರದೇಶದಲ್ಲಿನ ಖಾಸಗಿ ಸಂಸ್ಥೆಯ ಎಸ್ಟಿಪಿ ಪ್ಲಾಂಟ್ ಸ್ವಚ್ಛಗೊಳಿಸಲು ಕಾರ್ಮಿಕರನ್ನು ನಿಯೋಜಿಸಲಾಗಿತ್ತು.
ಈ ವೇಳೆ ಘಟಕದೊಳಗಿಳಿದ ಕಾರ್ಮಿಕ ಪ್ರಶಾಂತ್ ಉಸಿರಾಟ ಸಮಸ್ಯೆಯಿಂದ ಪ್ರಜ್ಞೆ ತಪ್ಪಿದ್ದಾನೆ. ಈತನನ್ನು ರಕ್ಷಿಸಲು ಹೋದ ಮೂವರು ಕಾರ್ಮಿಕರು ಸಹ ಕುಸಿದು ಬಿದ್ದಿದ್ದಾರೆ. ತಕ್ಷಣ ಸಂಸ್ಥೆಯ ಸಿಬ್ಬಂದಿ ನಾಲ್ವರನ್ನೂ ಮೇಲಕ್ಕೆ ಎತ್ತಿದ್ದಾರೆ.
ಇಲ್ಲಿನ ಆಸ್ಪತ್ರೆಯಲ್ಲಿ ಅಸ್ವಸ್ಥರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದ್ದರಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂದಿ ಗಿರಿಧಾಮ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕಾರ್ಮಿಕರ ಕುಟುಂಬದಿಂದ ದೂರು ಸಲ್ಲಿಕೆಯಾಗಿದೆ.