ಸಾಂದರ್ಭಿಕ ಚಿತ್ರ 
ರಾಜ್ಯ

ಸಿಲಿಕಾನ್ ಸಿಟಿಯಲ್ಲಿ 'ಸೀಕ್ರೆಟ್' ಅಫೇರ್ ಹವಾ: ವಿವಾಹೇತರ ಡೇಟಿಂಗ್‌ನಲ್ಲಿ ಬೆಂಗಳೂರೇ ನಂಬರ್ 1! Digital Dating

ಪ್ರಮುಖ ಮುಖ್ಯಾಂಶಗಳು

  • ಭಾರತವು ಸಾಂಪ್ರದಾಯಿಕವಾಗಿ "ನಾವಿಬ್ಬರೂ ನಮಗಿಬ್ಬರು" ಎಂಬ ಕೌಟುಂಬಿಕ ಮೌಲ್ಯಗಳಿಗೆ ಒತ್ತು ನೀಡುವ ರಾಷ್ಟ್ರ
  • ಇತ್ತೀಚಿನ ದಿನಗಳಲ್ಲಿ ಈ ಕಲ್ಪನೆಗಳ ಹಿಂದೆ ಒಂದು ದೊಡ್ಡ ಬದಲಾವಣೆ ಸದ್ದಿಲ್ಲದೆ ನಡೆಯುತ್ತಿದೆ
  • ಹೆಚ್ಚಿನ ಸಂಖ್ಯೆಯ ಭಾರತೀಯರು ಮದುವೆಯ ನಂತರ ಮತ್ತೊಂದು ವ್ಯಕ್ತಿಯೊಂದಿಗೆ ಒಡನಾಟ ಹೊಂದಿರುತ್ತಾರೆ
Digital Dating: ಭಾರತವು ಸಾಂಪ್ರದಾಯಿಕವಾಗಿ "ನಾವಿಬ್ಬರೂ ನಮಗಿಬ್ಬರು" ಎಂಬ ಕೌಟುಂಬಿಕ ಮೌಲ್ಯಗಳಿಗೆ ಮತ್ತು ವಿವಾಹ ಎಂಬ ಪವಿತ್ರ ಬಂಧಕ್ಕೆ ಹೆಸರುವಾಸಿಯಾದ ರಾಷ್ಟ್ರ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಕಲ್ಪನೆಗಳ ಹಿಂದೆ ಒಂದು ದೊಡ್ಡ ಬದಲಾವಣೆ ಸದ್ದಿಲ್ಲದೆ ನಡೆಯುತ್ತಿದೆ. ವಿವಾಹೇತರ ಡೇಟಿಂಗ್ ಅಪ್ಲಿಕೇಶನ್ ಗ್ಲೀಡೆನ್ ನಡೆಸಿರುವ ಇತ್ತೀಚಿನ ಸಮೀಕ್ಷೆಯು ಭಾರತೀಯ ಸಮಾಜದ ನೈತಿಕ ಚೌಕಟ್ಟುಗಳು ಬದಲಾಗುತ್ತಿರುವುದನ್ನು ಸಾಬೀತುಪಡಿಸುತ್ತಿದೆ.
ಹೆಚ್ಚಿನ ಸಂಖ್ಯೆಯ ಭಾರತೀಯರು ಮದುವೆಯ ನಂತರ ಒಡನಾಟ, ದೃಢೀಕರಣ ಅಥವಾ ಭಾವನಾತ್ಮಕ ಬೆಂಬಲ ಮತ್ತು ದೈಹಿಕ ಆಕರ್ಷಣೆಯ ಕೊರತೆ ಕಂಡುಬಂದಲ್ಲಿ ಅವುಗಳನ್ನು ಪಡೆಯುವ ಸಲುವಾಗಿ ಈ ಪ್ಲಾಟ್​ಫಾರ್ಮ್​ಗಳತ್ತ ಮುಖ ಮಾಡುತ್ತಿದ್ದಾರೆ. ಆದಾಗ್ಯೂ, ಇದು ಕೇವಲ ಗಾಳಿಸುದ್ದಿಯಲ್ಲ. ಸಂಖ್ಯೆಗಳು ಆ ಬದಲಾವಣೆಯನ್ನು ಪ್ರತಿಬಿಂಬಿಸಲು ಪ್ರಾರಂಭಿಸಿವೆ.
ಭಾರತದಲ್ಲಿ ವಿವಾಹೇತರ ಡೇಟಿಂಗ್ ಅಪ್ಲಿಕೇಶನ್ ಗ್ಲೀಡೆನ್ ಈಗ 4 ಮಿಲಿಯನ್ ಚಂದಾದಾರರ ಗಡಿಯನ್ನು ದಾಟಿದೆ. ಈ ಸಂಖ್ಯೆ ಕೇವಲ ಒಂದು ಅಂಕಿ ಅಂಶವಲ್ಲ. ಬದಲಾಗಿ ಭಾರತೀಯ ಸಮಾಜದ ಆಳದಲ್ಲಿ ಸದ್ದಿಲ್ಲದೆ ನಡೆಯುತ್ತಿರುವ ದೊಡ್ಡ ಮಟ್ಟದ ಸಾಮಾಜಿಕ ಸ್ಥಿತ್ಯಂತರದ ಸಂಕೇತವಾಗಿದೆ.
ಈ ರೀತಿಯ ಅಪ್ಲಿಕೇಶನ್​ಗಳ ಏರಿಕೆ ಪ್ರತ್ಯೇಕವಾಗಿಲ್ಲ, ಮದುವೆ, ನಿಷ್ಠೆ ಮತ್ತು ವೈಯಕ್ತಿಕ ನೆರವೇರಿಕೆಯ ಕಡೆಗೆ ಬದಲಾಗುತ್ತಿರುವ ವರ್ತನೆಗಳ ಬಗ್ಗೆ ತೋರಿಸುವ ಒಂದು ಇಣುಕು ನೋಟವಾಗಿದೆ.
2024 ರಲ್ಲಿ, ಗ್ಲೀಡೆನ್ ನಡೆಸಿದ ಒಂದು ಹೊಸ ಅಧ್ಯಯನವು ಈ ಪವಿತ್ರ ಪರಿಕಲ್ಪನೆಯ ಬಿರುಕನ್ನು ಎತ್ತಿ ತೋರಿಸಿದೆ. ಆದಾಗ್ಯೂ, ಟೈಯರ್ 1 ಮತ್ತು ಟೈಯರ್ 2 ನಗರಗಳಲ್ಲಿ 25 ರಿಂದ 50 ವರ್ಷ ವಯಸ್ಸಿನ 1,503 ವಿವಾಹಿತ ಭಾರತೀಯರನ್ನು ಒಳಗೊಂಡ ಈ ಸಮೀಕ್ಷೆಯು ದಾಂಪತ್ಯ ದ್ರೋಹವನ್ನು ನೋಡುವ ದೃಷ್ಟಿಕೋನ ಬದಲಾಗುತ್ತಿರುವುದನ್ನು ಸ್ಪಷ್ಟಪಡಿಸಿದೆ.
ಸಂಶೋಧನೆಯ ಪ್ರಕಾರ, ಶೇಕಡಾ 60 ಕ್ಕಿಂತ ಹೆಚ್ಚು ಜನರು ಸಾಂಪ್ರದಾಯಿಕವಲ್ಲದ ಡೇಟಿಂಗ್ ವಿಧಾನಗಳನ್ನು ಅಳವಡಿಸಿಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ಉದಾಹರಣೆಗೆ ಸ್ವಿಂಗಿಂಗ್, ಮುಕ್ತ ಸಂಬಂಧ ಮತ್ತು ಸಂಬಂಧ ಅರಾಜಕತೆಯನ್ನು ಹೊಂದಿರುವುದಾಗಿ ತಿಳಿದುಬಂದಿದೆ.
ಜಾಗತಿಕ ಡೇಟಿಂಗ್​ ಅಪ್ಲಿಕೇಶನ್​ ಆಶ್ಲೇ ಮ್ಯಾಡಿಸನ್​ ಬಿಡುಗಡೆ ಮಾಡಿದ ದತ್ತಾಂಶವು ಒಂದು ಅನಿರೀಕ್ಷಿತ ಸತ್ಯವನ್ನು ಹೊರಹಾಕಿದ್ದು, ಸಂಪ್ರದಾಯದ ತವರೂರಾದ ಕಾಂಚೀಪುರಂ ಈಗ ದೇಶದ 'ಅಫೇರ್' ಅಥವಾ ವಿವಾಹೇತರ ಸಂಬಂಧಗಳನ್ನು ಹೊಂದುವ ತಾಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದು ತಿಳಿಸಿದೆ.
ಮುಂಬೈನಲ್ಲಿ ಕೆಲಸ ಮಾಡುವ ಮಾರ್ಕೆಟಿಂಗ್ ವಿಶ್ಲೇಷಕಿಯೊಬ್ಬರು ಈ ವಿಚಾರವಾಗಿ ಮುಕ್ತವಾಗಿ ಮಾತನಾಡಿದ್ದು, ಇಂದಿನ ದಾಂಪತ್ಯದಲ್ಲಿರುವ 'ಸೌಂದರ್ಯ ವರ್ಧಕ' ಮುಖವಾಡವನ್ನು ಕಳಚಿವೆ. ವಿವಾಹೇತರ ಸಂಬಂಧಗಳು ಕೇವಲ ರಹಸ್ಯವಾಗಿ ಉಳಿದಿಲ್ಲ. ಅವು ಒಂದು ರೀತಿಯ ಅಲಿಖಿತ ಒಪ್ಪಂದದಂತೆ ಬದಲಾಗುತ್ತಿವೆ ಎಂದರು.
ಒಂದು ಕಾಲದಲ್ಲಿ ಅನೈತಿಕ ಸಂಬಂಧಗಳು ಇರುವುದು ಗೊತ್ತಾದರೆ ಸಂಸಾರವೇ ಬೀದಿಗೆ ಬರುತ್ತಿತ್ತು. ಆದರೆ, ಈಗಿನ ಪರಿಸ್ಥಿತಿ ಭಿನ್ನವಾಗಿದೆ. "ಹೆಚ್ಚಿನ ಸಂದರ್ಭಗಳಲ್ಲಿ, ಪತಿಗೆ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧವಿರುವುದು ತಿಳಿದಿದ್ದರೂ ಮೌನವಾಗಿಯೇ ಇರುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಪ್ಲಿಕೇಶನ್‌ನಲ್ಲಿ ಬಳಕೆದಾರರ ನಡವಳಿಕೆ

ಗ್ಲೀಡೆನ್‌ನ ಇತ್ತೀಚಿನ ದತ್ತಾಂಶವು ಈ ಬಳಕೆದಾರರು ಯಾರು ಮತ್ತು ಅವರು ಹೇಗೆ ವರ್ತಿಸುತ್ತಾರೆ ಎಂಬುದರ ಕುರಿತು ದತ್ತಾಂಶ ಬಿಡುಗಡೆ ಮಾಡಿದೆ. ಅದರಲಲ್ಲಿ ಶೇ. 65 ರಷ್ಟು ಪುರುಷರು, ಶೇ. 35 ರಷ್ಟು ಮಹಿಳೆಯರು ಭಾಗವಹಿಸುತ್ತಾರೆ. ಕಳೆದ ಎರಡು ವರ್ಷಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ತೀವ್ರವಾಗಿ ಬೆಳೆದಿದ್ದು ಶೇ. 148 ರಷ್ಟು ಹೆಚ್ಚಾಗಿದೆ.
ಸರಾಸರಿಯಾಗಿ, ಭಾರತೀಯ ಬಳಕೆದಾರರು ದಿನಕ್ಕೆ 1 ರಿಂದ 1.5 ಗಂಟೆಗಳ ಕಾಲ ವೇದಿಕೆಯಲ್ಲಿ ಚಾಟ್ ಮಾಡುತ್ತಾರೆ. ಈ ಸಂವಹನಗಳ ಸಮಯವು ಸ್ಪಷ್ಟವಾಗಿದ್ದು, ಹೆಚ್ಚಾಗಿ ಈ ಚಟುವಟಿಕೆಯಲ್ಲಿ ಬಾಗವಹಿಸುವವರು ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ಮತ್ತು ರಾತ್ರಿ 10 ರಿಂದ ಮಧ್ಯರಾತ್ರಿಯ ನಡುವೆ ದಾಖಲಿಸಲಾಗುತ್ತದೆ.
ಈಗಾಗಲೇ ಹೇಳಿದಂತೆ, ಮೆಟ್ರೋ ನಗರಗಳು ಪ್ರಾಬಲ್ಯ ಮುಂದುವರಿಸಿದ್ದರೂ, ಈ ಪ್ರವೃತ್ತಿ ನಗರ ಕೇಂದ್ರಗಳಿಗೆ ಮಾತ್ರ ಸೀಮಿತವಾಗಿಲ್ಲ. ಆದಾಗ್ಯೂ, ಶೇ. 18 ರಷ್ಟು ಬಳಕೆದಾರರೊಂದಿಗೆ ಬೆಂಗಳೂರು ಮುಂಚೂಣಿಯಲ್ಲಿದ್ದರೆ, ಹೈದರಾಬಾದ್ (17%), ದೆಹಲಿ (11%), ಮುಂಬೈ (9%) ಮತ್ತು ಪುಣೆ (7%) ನಂತರದ ಸ್ಥಾನಗಳಲ್ಲಿವೆ.
ಆದರೆ, ಲಕ್ನೋ, ಚಂಡೀಗಢ, ಸೂರತ್, ಕೊಯಮತ್ತೂರು, ಪಾಟ್ನಾ ಮತ್ತು ಗುವಾಹಟಿ ಸೇರಿದಂತೆ ಸಣ್ಣ ನಗರಗಳಿಂದ ಬಳಕೆದಾರರಲ್ಲಿ ಹೆಚ್ಚಳ ಕಂಡುಬಂದಿದೆ (ಏಜೆನ್ಸೀಸ್​).