Four killed in horrific accident 
ರಾಜ್ಯ

ಭೀಕರ ಅಪಘಾತಕ್ಕೆ ನಾಲ್ವರು ಬಲಿ

ಕೋಲಾರ ಡೆಸ್ಕ್
ಬೇತಮಂಗಲ: ಬೇತಮಂಗಲ ಸಮೀಪದ ದೊಡ್ಡಕಾರಿ ಬಳಿ ಹಾದುಹೋಗಿರುವ ಬೆಂಗಳೂರು&ಚೆನ್ನೆ ಕಾರಿಡಾರ್​ನಲ್ಲಿ ಸೋಮವಾರ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಬೆಂಗಳೂರಿನ ವಿದ್ಯಾರಣ್ಯಪುರದ ಶಾರದಾಬಾಯಿ (70), ಇವರ ಅಳಿಯ ದೇವೇಂದ್ರ ಕುಮಾರ್​(42), ಮೊಮ್ಮಕ್ಕಳಾದ ವಿಷ್ಣು (15), ದೀತ್​ (20) ಮೃತರು.

ಇಲ್ಲಿಯವರೆಗೆ 29 ಮಂದಿ ಬಲಿ!

ಒಂದೂವರೆ ವರ್ಷದ ಹಿಂದೆ ಕೋಟಿಲಿಂಗ ಕಮ್ಮಸಂದ್ರ ಗ್ರಾಮದ ಒಂದೇ ಕುಟುಂಬದ ನಾಲ್ವರು ಅಪಘಾತದಲ್ಲಿ ಮೃತಪಟ್ಟರು. ನಂತರ ಹೊಸಕೋಟೆಯಿಂದ ಕೆಜಿಎ್​ನ ಕೃಷ್ಣಾಪುರ ಟೋಲ್​ ಪ್ಲಾಜಾವರೆಗಿನ ರಸ್ತೆಯಲ್ಲಿ ಈವರೆಗೆ ಒಟ್ಟು 25ಮಂದಿ ಮೃತಪಟ್ಟಿದ್ದಾರೆ. ಇದೀಗ ಸುಂದರಪಾಳ್ಯ ಟೋಲ್​ ವ್ಯಾಪ್ತಿಯಲ್ಲಿ ನಾಲ್ವರು ಸೇರಿ ಒಟ್ಟಾರೆ 29 ಮಂದಿ ಈ ರಸ್ತೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಶಾಂತಾಬಾಯಿ ತನ್ನ ಇಬ್ಬರು ಹೆಣ್ಣು ಮಕ್ಕಳು, ಅಳಿಯಂದಿರು ಹಾಗೂ ಇಬ್ಬರು ಮೊಮ್ಮಕ್ಕಳೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಕೊಂಡು ಸೋಮವಾರ ಬೆಂಗಳೂರಿನತ್ತ ಚೆನ್ನೆ&ಬೆಂಗಳೂರು ಹೈವೇಯಲ್ಲಿ ವಾಪಸ್​ ಬರುತ್ತಿದ್ದಾಗ ಈ ದು@ರ್ಟನೆ ಸಂಭವಿಸಿದೆ. ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಹೈವೇ ಪಕ್ಕದ ಹಳ್ಳಕ್ಕೆ ಪಲ್ಟಿಯಾಗಿದೆ.
ಕೆಜಿಎ್​ ಎಸ್​ಪಿ ಶಿವಾಂಶು ರಜಪೂತ್​, ಡಿವೈಎಸ್​ಪಿ ಲ್ಮಯ್ಯ, ಸರ್ಕಲ್​ ಇನ್​ಸ್ಪೆಕ್ಟರ್​ ಎಸ್​. ಆರ್​. ಜಗದೀಶ್​ ಭೇಟಿ ನೀಡಿ ಪರಿಶೀಲಿಸಿದರು. ಬೇತಮಂಗಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.