Four injured as car crashes into road divider
ಚಿಂತಾಮಣಿ: ಬೆಂಗಳೂರು ರಸ್ತೆಯ ಕೈವಾರ ಕ್ರಾಸ್ ಬಳಿ ಶುಕ್ರವಾರ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ.
ಬೆಂಗಳೂರಿನ ಚಿರಂತ್(40), ರಾಕೇಶ್(41), ಸಾಫೀರ್(31), ಸೋನಾಲಿ(31) ಗಾಯಗೊಂಡವರು. ನಗರದ ಹೊರವಲಯದ ಕೋಲಾರ ರಸ್ತೆಯಲ್ಲಿರುವ ರೇಷ್ಮೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಐಎಫ್ಎಸ್ ಅಧಿಕಾರಿ ವಿನೋದ್ ಅವರೊಂದಿಗೆ ಹಮ್ಮಿಕೊಂಡಿದ್ದ ಸೆಮಿನಾರ್ನಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಸೆಮಿನಾರ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸಾಗುವಾಗ ವಿನೋದ್ಮತ್ತು ತಂಡ ಒಂದು ಕಾರಿನಲ್ಲಿ, ಈ ನಾಲ್ವರು ಮತ್ತೊಂದು ಕಾರಿನಲ್ಲಿ ಸಾಗುತ್ತಿದ್ದರು. ಕೈವಾರ ಕ್ರಾಸ್ನಲ್ಲಿದ್ದ ಅಂಗಡಿಯವರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ರಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಷಯ ತಿಳಿದ ಕೈವಾರ ಹೊರಠಾಣೆ ಎಎಸ್ಐ ಪ್ರಕಾಶ್ ಮತ್ತು ಸಿಬ್ಬಂದಿ ಸ್ಥಳ ಪರಿಶೀಲಿಸಿದರು. ದೂರು ನೀಡದ ಕಾರಣ ಪ್ರಕರಣ ದಾಖಲಾಗಿಲ್ಲ ಎಂದು ಎಎಸ್ಐ ತಿಳಿಸಿದ್ದಾರೆ.