ಚಿತ್ತಾಪುರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಲಿಂಗಾರೆಡ್ಡಿ ಭಾಸರೆಡ್ಡಿ, ನಾಗರಾಜ ಭಂಕಲಗಿ, ರಮೇಶ ಮರಗೋಳ, ಶಿವಲಿಂಗಪ್ಪ ವಾಡೇದ, ಬಸವರಾಜ ಪಾಟೀಲ್ ಇದ್ದರು.
- ರಮೇಶ ಮರಗೋಳ ಮಾಹಿತಿ
- ಚಿತ್ತಾಪುರದಲ್ಲಿ ವೀರಶೈವ ಮಹಾಸಭೆ ಮೀಟಿಂಗ್
ಚಿತ್ತಾಪುರ : ಸ್ಟೇಷನ್ ರಸ್ತೆಯ ವೀರಶೈವ ಸಮಾಜದ ನಿವೇಶನದಲ್ಲಿ ವೀರಶೈವ ಕಲ್ಯಾಣ ಮಂಟಪ (ಎಸಿ) ನಿರ್ಮಾಣಕ್ಕೆ ಸೋಮವಾರ ಮಧ್ಯಾಹ್ನ 1ಕ್ಕೆ ಅಡಿಗಲ್ಲು ನೆರವೇರಿಸಲಾಗುವುದು ಎಂದು ವೀರಶೈವ ಕಲ್ಯಾಣ ಮಂಟಪ ನಿರ್ಮಾಣ ಸಮಿತಿ ಅಧ್ಯಕ್ಷ, ಬಸವ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ರಮೇಶ ಮರಗೋಳ ತಿಳಿಸಿದ್ದಾರೆ.
ಶರಣಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದ ಕಲ್ಯಾಣ ಮಂಟಪ ಕಾಮಗಾರಿಗೆ ಇದೀಗ ಮರುಜೀವ ಬಂದಿದೆ. ಎಲ್ಲ ತೊಡಕುಗಳು ನಿವಾರಣೆಯಾಗಿದ್ದು, ಬಸವ ಜಯಂತಿಯಂದು ಕಾಮಗಾರಿಗೆ ಚಾಲನೆ ನೀಡಲಾಗುವುದು. ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣು ಮೋದಿ ಸೇರಿ ಹಲವರು ಭಾಗಿಯಾಗಲಿದ್ದಾರೆ. ಸಮಾಜದ ಮುಖಂಡರು ಹಾಗೂ ಭಕ್ತರ ದೇಣಿಗೆಯಿಂದ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ವೀರಶೈವ ಸಮಾಜಕ್ಕೆ ಹಸ್ತಾಂತರಿಸಲಾಗುತ್ತದೆ ಎಂದರು.
ಮಹಾಸಭಾ ತಾಲೂಕು ಗೌರವಾಧ್ಯಕ್ಷ ಲಿಂಗಾರೆಡ್ಡಿಗೌಡ ಭಾಸರೆಡ್ಡಿ ಮಾತನಾಡಿದರು. ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಪ್ರಮುಖರಾದ ಶಿವಲಿಂಗಪ್ಪ ವಾಡೇದ, ಬಸವರಾಜ ಪಾಟೀಲ್ ಬೆಳಗುಂಪಾ, ವೀರಣ್ಣಗೌಡ ಪರಸರೆಡ್ಡಿ, ಚಂದ್ರಶೇಖರ ಅವಂಟಿ, ಜಗಣ್ಣಗೌಡ ರಾಮತೀರ್ಥ, ರವೀಂದ್ರ ಸಜ್ಜನಶೆಟ್ಟಿ, ಆನಂದ ಪಾಟೀಲ್ ನರಿಬೋಳ, ನಾಗನಗೌಡ ಅಲ್ಲೂರ, ಅಂಬರೀಶ್ ಸುಲೇಗಾಂವ, ಓಂಕಾರೇಶ್ವರ ರೇಶ್ಮಿ, ಅನಿಲ ವಡಡ್ಡಗಿ, ರವೀಂದ್ರರೆಡ್ಡಿ ಭಂಕಲಗಿ, ರವೀಂದ್ರರೆಡ್ಡಿ ಅನಪುರ, ರಾಜಶೇಖರ ತಿಮ್ಮನಾಕ, ಚಂದ್ರಶೇಖರ ಉಟಗೂರ, ಬಸವರಾಜ ಹೂಗಾರ, ಶಿವರಾಜ ಪಾಟೀಲ್ ಇತರರಿದ್ದರು.
ಶಾಂತಪ್ಪ ಚಾಳಿಕರ್ ನಿರೂಪಣೆ ಮಾಡಿದರು.