ಗಂಗಾವತಿ ತಾಲೂಕಿನ ಆಗೋಲಿ ಸನಿಹದ ಬೆಟ್ಟದ ಪರಿಸರದಲ್ಲಿ ಶವಗುಣಿ ಮೇಲೆ ನೆಟ್ಟ ನಿಲುಸುಗಲ್ಲು ಪತ್ತೆಯಾಗಿರುವುದು. ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್,ಸಹಾಯಕರಾದ ಮಂಜುನಾಥ ದೊಡ್ಮನಿ, ಹರನಾಯಕ ಇದ್ದರು. 
ರಾಜ್ಯ

ನೆಟ್ಟ ನಿಲುಸುಗಲ್ಲು ಪತ್ತೆ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಆಗೋಲಿ
  • ಸನಿಹದ
  • ಬೆಟ್ಟ
ಗಂಗಾವತಿ: ತಾಲೂಕಿನ ಆಗೋಲಿ ಸನಿಹದ ಬೆಟ್ಟದ ಪರಿಸರದಲ್ಲಿ 2,500 ವರ್ಷಗಳ ಹಿಂದೆ ಪ್ರಚಲಿತದಲ್ಲಿದ್ದ ಶವಗುಣಿ ಮೇಲೆ ನೆಟ್ಟ ನಿಲುಸುಗಲ್ಲು ಪತ್ತೆಯಾಗಿದ್ದು, ಸಂಶೋಧನೆಗೆ ಪೂರಕವಾಗಿದೆ.
ಗಡ್ಡಿ, ಆಗೋಲಿ ರಸ್ತೆ ಬಲಬದಿಗೆ ಬೂದಿಗುಡ್ಡದ ಬುಡದಲ್ಲಿ ನಿಲುಸುಗಲ್ಲಿದ್ದು, ನಾಲ್ಕು ಅಡಿ ಎತ್ತರ ಮತ್ತು ಒಂದು ಅಡಿ ಅಗಲವಿದೆ. ನೈಸರ್ಗಿಕ ಶಿಲೆಯಾಗಿದ್ದು, ಅಂಕುಡೊಂಕಾಗಿದೆ. 2200 ರಿಂದ 3000 ವರ್ಷಗಳ ಹಿಂದೆ ಉದ್ದೇಶಿತ ಪ್ರದೇಶದಲ್ಲಿದ್ದ ಬುಡಕಟ್ಟು ಸಮುದಾಯಕ್ಕೆ ಸೇರಿದ ಸಮಾಧಿಯಾಗಿದ್ದು, ಕಬ್ಬಿಣ ಬಹತ್ ಶಿಲಾಯುಗಕ್ಕೆ ಸೇರಿದ ಜನರು, ಸತ್ತವರಿಗಾಗಿ ಹಲವು ರೀತಿಯ ಸಮಾಧಿಗಳನ್ನು ನಿರ್ಮಿಸುವ ಪದ್ಧತಿಯಿದ್ದು, ಅದೇ ಮಾದರಿಯಲ್ಲಿ ಶವಗುಣಿಯಿದೆ.
ಈ ಬಗ್ಗೆ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಮಾತನಾಡಿ, ಶಿಲಾವೃತ್ತದೊಳಗಿನ ನಿಲುಸುಗಲ್ಲು (ಮೆನ್ಹಿರ್ ವಿತ್ ಸ್ಟೋನ್ ಸರ್ಕಲ್) ಅಪರೂವಾಗಿದ್ದು, ಶಿಲಾಯುಗದ ಜನರು ವಸತಿ ಜಾಗದಲ್ಲಿ ಸತ್ತರೆ ನಿರ್ದಿಷ್ಟ ಪಡಿಸಿದ ಸ್ಥಳ (ಸ್ಮಶಾನ)ದಲ್ಲಿ ಹೂತು ಸಮಾಧಿ ಕಟ್ಟುತ್ತಿದ್ದರು. ಬೇಟೆಗಾಗಿಯೋ ಅಥವಾ ಇನ್ನಿತರ ಕಾರಣಕ್ಕಾಗಿ ದೂರ ತೆರಳಿದ್ದಾಗ ಅವರಲ್ಲಿ ಯಾರಾದರೂ ಮರಣ ಹೊಂದಿದರೆ ಶವವನ್ನು ಒಯ್ಯಲು ಸಾಧ್ಯವಾಗದೇ ಆ ಜಾಗದಲ್ಲಿಯೇ ಹೂಳುತ್ತಿದ್ದರು
ಕೆಲದಿನಗಳ ನಂತರ ಶವಗುಣಿಯ ಮೇಲೆ ಬೆಟ್ಟದಿಂದ ಆಯ್ದು ತಂದ ಚಪ್ಪಡಿಕಲ್ಲನ್ನು ನೆಡುತ್ತಿದ್ದರು. ನಿಲುಸುಗಲ್ಲುಗಳೇ ಮುಂದೆ ಕಲ್ಗೊಂಬೆಯ (ಆಂಥೋ್ರೆೆಮಾರ್ಫಿಕ್ ಟೂಮ್ಸ್) ಆಕಾರ ಪಡೆದುಕೊಂಡವು ಎಂದರು ತಿಳಿಸಿದರು.