ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲರ ಮೃತ ದೇಹಕ್ಕೆ ವಿಭೂತಿ ಧರಿಸಿ ಆಶೀರ್ವಾದ ಮಾಡಿದ ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು. ಪಂಡರಪುರದ ಪಾಂಡುರಂಗ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಔಸೇಕರ್ ಮಹಾರಾಜ್ ಉಪಸ್ಥಿತರಿದ್ದರು.  
ರಾಜ್ಯ

ಕೇಂದ್ರದ ಮಾಜಿ ಗೃಹಸಚಿವ ಶಿವರಾಜ್ ಪಾಟೀಲ್ ನಿಧನ; ಕಾಶೀ ಜಗದ್ಗುರುಗಳ ಸಂತಾಪ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರದ ಮಾಜಿ ಗೃಹಸಚಿವ ಶಿವರಾಜ ಪಾಟೀಲ್ ನಿಧನ
  • 91ರ ಇಳಿವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಮೃತ
  • ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಸಂತಾಪ

ಲಾತೂರು:ಕೇಂದ್ರದ ಮಾಜಿಗೃಹಸಚಿವ,ಮಹಾರಾಷ್ಟ್ರದಲಾತೂರ್ ಮೂಲದ ಶಿವರಾಜ ಪಾಟೀಲ್ಶುಕ್ರವಾರ ನಿಧನರಾಗಿದ್ದಾರೆ. 91 ವರ್ಷ ವಯಸ್ಸಾಗಿದ್ದಪಾಟೀಲ್ ಕಳೆದ ಕೆಲ ದಿನಗಳಿಂದವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಲಾತೂರುನಗರಸಭೆ ಸದಸ್ಯರಾಗಿ ರಾಜಕೀಯಪ್ರವೇಶ ಮಾಡಿದ ಶಿವರಾಜ ಪಾಟೀಲ್,ಮಹಾರಾಷ್ಟ್ರವಿಧಾನಸಭೆಯ ಸದಸ್ಯರಾಗಿ,ಸ್ಪೀಕರ್ ಆಗಿ,7 ಬಾರಿ ಲೋಕಸಭಾಸದಸ್ಯರಾಗಿ,ಲೋಕಸಭೆ ಸ್ಪೀಕರ್ಆಗಿ, ಯುಪಿಎಸರ್ಕಾರದಲ್ಲಿ ಗೃಹಸಚಿವರಾಗಿನಂತರ ಪಂಜಾಬ್ ರಾಜ್ಯದ ರಾಜ್ಯಪಾಲರಾಗಿಸೇವೆ ಸಲ್ಲಿಸಿದ್ದರು.

ಶಿವರಾಜಪಾಟೀಲರ ನಿಧನಕ್ಕೆ ಕಾಶೀ ಜಗದ್ಗುರುಡಾ.ಚಂದ್ರಶೇಖರಶಿವಾಚಾರ್ಯ ಭಗವತ್ಪಾದರು ತೀವ್ರಸಂತಾಪ ವ್ಯಕ್ತಪಡಿಸಿದ್ದಾರೆ. ಕಳೆದ ಮೂರ್ನಾಲ್ಕುದಶಕಗಳಿಂದ ಶ್ರೀಪೀಠದ ಬಗ್ಗೆಅಪಾರ ಭಕ್ತಿ-ಶ್ರದ್ಧೆಇರಿಸಿಕೊಂಡಿದ್ದ ಶಿವರಾಜ ಪಾಟೀಲರಅಗಲಿಕೆಯ ನೋವನ್ನು ಸಹಿಸುವ ಶಕ್ತಿಅವರ ಕುಟುಂಬಕ್ಕೆ ಮತ್ತು ಅಭಿಮಾನಿಬಳಗಕ್ಕೆ ದೇವರು ಅನುಗ್ರಹಿಸಲಿಎಂದು ಜಗದ್ಗುರುಗಳು ಹಾರೈಸಿದ್ದಾರೆ.ಅಂತಿಮ ದರ್ಶನಪಡೆದ ಕಾಶೀ ಜಗದ್ಗುರುಗಳು,ಶಿವರಾಜ ಪಾಟೀಲರುತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿಯಾವುದೇ ಕಳಂಕವಿಲ್ಲದೆಸಚ್ಚಾರಿತ್ರ್ಯವನ್ನು ಕಾಪಾಡಿಕೊಂಡಿದ್ದಅಪರೂಪದ ರಾಜಕಾರಣಿ ಎಂದುಬಣ್ಣಿಸಿದ್ದಾರೆ.