ತ್ಯಾಮಗೊಂಡ್ಲು ಹೋಬಳಿ ದೊಡ್ಡಬೆಲೆ ಗ್ರಾಮ ಪಂಚಾಯಿತಿಯಲ್ಲಿ ಅವಧಿ ಮುಗಿದ ಸದಸ್ಯರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಗ್ರಾಪಂ ಮಾಜಿ ಸದಸ್ಯರಾದ ಎ.ಮಂಜುನಾಥ್, ನಾಗೇಶ್, ಸೌಭಾಗ್ಯಾ, ಪದ್ಮಾಸ್ವಾಮಿ, ದೇವರಾಜ್, ದೊಡ್ಡಬೆಲೆ ಮಂಜುನಾಥ್, ಸರೋಜಮ್ಮ, ರಾಮಕೃಷ್ಣಯ್ಯ, ಕಾರ್ಯದರ್ಶಿ ಪಾರ್ಥಸಾರಥಿ.ಡಿ, ಪಿಡಿಒ ವೆಂಕಟೇಶ್ ಇನಾಂದಾರ್ ಇದ್ದರು.
ತ್ಯಾಮಗೊಂಡ್ಲು : ಗ್ರಾಮ ಪಂಚಾಯಿತಿ ಸಿಬ್ಬಂದಿ ವೇತನ ಪಡೆದು ಕೆಲಸ ಮಾಡುತ್ತೇವೆ. ಆದರೆ ಕಳೆದ ಐದು ವರ್ಷಗಳಿಂದ ಯಾವುದೇ ಪ್ರತಿಫಲಾಕ್ಷೆಗಳಿಲ್ಲದೆ ಗ್ರಾಪಂ ಸದಸ್ಯರು ಜನರ ಸೇವೆ ಮಾಡಿದ್ದಾರೆ ಎಂದು ದೊಡ್ಡಬೆಲೆ ಗ್ರಾಪಂ ಪಿಡಿಒ ವೆಂಕಟೇಶ್ ಇನಾಂದಾರ್ ಹೇಳಿದರು.
ನೆಲಮಂಗಲ ತಾಲೂಕಿನ ದೊಡ್ಡಬೆಲೆ ಗ್ರಾಪಂ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅವಧಿ ಮುಗಿದ ಸದಸ್ಯರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದರು. ನಮ್ಮ ಅವಧಿ ಮುಗಿದಿದೆ, ಇನ್ಮೇಲೆ ಗ್ರಾಪಂಗೆ ಬರುವ ಹಾಗಿಲ್ಲ ಎಂದು ಭಾವಿಸಬೇಕಿಲ್ಲ, ಎಂದಿನಂತೆ ಕಚೇರಿಗೆ ಭೇಟಿಕೊಟ್ಟು ಸಲಹೆ ಸೂಚನೆಗಳನ್ನು ಕೊಡಬಹುದು ಎಂದರು.
ಗ್ರಾಪಂ ಮಾಜಿ ಸದಸ್ಯರೂ ಆದ ಮುಖಂಡ ತಡಶೀಘಟ್ಟ ಮಂಜುನಾಥ್ ಮಾತನಾಡಿ, ಪಿಡಿಒ ವೆಂಕಟೇಶ್ ಇನಾಂದಾರ್ ಕಾರ್ಯವೈಖರಿ ಮಾದರಿಯಾಗಿದೆ. ಗ್ರಾಮಸ್ಥರೊಂದಿಗೆ ಬೆರೆತು ಉತ್ತಮ ಸೇವೆ ಮಾಡಿದ್ದಾರೆ, ಸರ್ಕಾರಿ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ ವಸೂಲಿಗಾರ ಮಂಜುನಾಥ್.ಬಿ, ಕಂಪ್ಯೂಟರ್ ಆಪರೇಟರ್ ಮಂಜಮ್ಮ.ಎಂ.ಜಿ, ಕಚೇರಿ ಸಹಾಯಕಿ ನಾಗರತ್ನಮ್ಮ, ನೀರಗಂಟಿಗಳಾದ ಕೃಷ್ಣಮೂರ್ತಿ, ರಾಜಣ್ಣ, ಸುನಂದಮ್ಮ, ಮಹೇಶ್, ಮಂಜಮ್ಮ, ಅನಿಲ್ಕುಮಾರ್, ಶಿವಕುಮಾರ್, ಗಂಗಾಧರ್, ಬಸವರಾಜು, ಮುಖಂಡರಾದ ಪುಟ್ಟರಾಜು, ಬೋಜಣ್ಣ, ನಿರ್ವಾಣಸ್ವಾಮಿ, ಗಿರೀಶ್ ಇದ್ದರು.