- ಕಾಲು ಜಾರಿಗೆ ಬಿದ್ದ ರೈತ ಸಾವು
- ಅಥಣಿ ತಾಲೂಕಿನ ಬೆವನೂರ ಗ್ರಾಮದಲ್ಲಿ ಘಟನೆ
- ಪಂಪ್ ಸೇಟ್ ಆರಂಭಿಸಲು ಹೋದ ವೇಳೆ ಅವಘಡ
ಕಾಲು ಜಾರಿ ಬಾವಿಗೆ ಬಿದ್ದು ಸಾವು
ಅಥಣಿ ಗ್ರಾಮೀಣ: ಪಂಪ್ ಸೆಟ್ ಆರಂಭಿಸಲು ಗದ್ದೆಗೆ ಹೋಗಿದ್ದ ತಾಲೂಕಿನ ಬೆವನೂರ ಗ್ರಾಮದ ರೈತ ಬಸಗೌಡ ಪಾಟೀಲ(39)ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಅಥಣಿ ತಾಲೂಕಿನ ಬೆವನೂರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಬಸಗೌಡ ಪಾಟೀಲ ಬಾವಿಗೆ ಬಿದ್ದ ಕೂಡಲೇ ಸ್ಥಳೀಯರು ರಕ್ಷಣೆಗೆ ಧಾವಿಸಿದರೂ ಪ್ರಯೋಜನವಾಗಲಿಲ್ಲ. ನಂತರ ಮೃತ ದೇಹವನ್ನು ಅಥಣಿ ಅಗ್ನಿಶಾಮಕ ದಳ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಎಸ್‌ಐ ವಿಜಯ ಪಾಟೀಲ, ತನಿಖಾಸಹಾಯಕ ಬಿ.ಬಿ.ಪಾಟೀಲ, ಗುಂಡುರಾವ್ ರಾಠೋಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.