ಮುಳಬಾಗಿಲು ತಾಲೂಕು ಪುರಾತನ ಶ್ರೀದೇವಿ ಭೂದೇವಿ ಸಮೇತ ಶ್ರೀ ಗೋವಿಂದರಾಜು ಸ್ವಾಮಿ ದೇವಾಲಯದಲ್ಲಿ ಕಾಂಗ್ರೆಸ್​ ಮುಖಂಡ ವಿ. ಆದಿನಾರಾಯಣ ವಿಶೇಷ ಪೂಜೆ ಸಲ್ಲಿಸಿದರು. Dwadashi 
ರಾಜ್ಯ

ಜಾತಿ ಬೇಧ ಮರೆತು ದೇವರ ಕಾರ್ಯ ಮಾಡಿ Dwadashi

ಕೋಲಾರ ಡೆಸ್ಕ್

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್​ ಮುಖಂಡ ವಿ.ಆದಿನಾರಾಯಣ ಹೇಳಿಕೆ
ಮುಳಬಾಗಿಲು: ಮುಕ್ಕೋಟಿ ದ್ವಾದಶಿ ಪೂಜಾ ಕಾರ್ಯಕ್ರಮ ಸಮಸ್ತ ಭಕ್ತರಿಗೆ ಹಬ್ಬವಾಗಿದೆ. ಭಾರತೀಯ ಸನಾತನ ಧಾರ್ಮಿಕ ಸಂಸತಿ ಪರಂಪರೆ, ಆಚಾರ ವಿಚಾರಗಳು, ಪ್ರತಿ ವ್ಯಕ್ತಿಯನ್ನು ದೇವರ ಭಕ್ತನನ್ನಾಗಿಸಿ ಉತ್ತಮ ಸದ್ಗುಣ ಅಳವಡಿಸಿಕೊಳ್ಳುವಂತ ತರಹದಿ ಹಾಕಿಕೊಡಲಾಗಿದೆ ಎಂದು ಕಾಂಗ್ರೆಸ್​ ಮುಖಂಡ ವಿ.ಆದಿನಾರಾಯಣ ತಿಳಿಸಿದರು.
ಮುಕ್ಕೋಟಿ ದ್ವಾದಶಿ ಅಂಗವಾಗಿ ನಗರದ ಪುರಾತನ ಶ್ರೀದೇವಿ ಭೂದೇವಿ ಸಮೇತ ಶ್ರೀ ಗೋವಿಂದರಾಜು ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಂತರ ಮಾತನಾಡಿ, ಜನರು ಜಾತಿ, ಬೇಧ ಮರೆತು ಒಗ್ಗೂಡಿ ದೇವರ ಕಾರ್ಯಕ್ರಮ ಮಾಡುವುದು ನಮ್ಮ ಪೂರ್ವಿಕರ ಕಾಲದಿಂದಲೂ ಅನುಷ್ಠಾನ ಮಾಡಿಕೊಂಡು ಬರಲಾಗುತ್ತಿತ್ತು. ಅದು ಮತ್ತಷ್ಟು ಹೆಚ್ಚಾಗಬೇಕಾಗಿದೆ.
ಇದರಿಂದ ಯುವ ಜನಾಂಗದಲ್ಲಿ ಉತ್ತಮ ಅಭಿರುಚಿಗಳು ಬೆಳೆಯಲು ಸಾಧ್ಯವಾಗುತ್ತದೆ. Dwadashi ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಸದ್ವಿಚಾರಧಾರೆಗಳು ಮೈಗೂಡುತ್ತವೆ. ಇದರಿಂದ ವ್ಯಕ್ತಿತ್ವ ನಿಮಾರ್ಣದ ಜತೆಗೆ ನಾಯಕತ್ವವು ಬೆಳೆಯುತ್ತದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ರಿಯಾಜ್​ ಅಹಮದ್​, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್​.ಗೊಲ್ಲಹಳ್ಳಿ ವೆಂಕಟೇಶ್​, ಉತ್ತನೂರು ವಿಎಸ್ಸೆಸ್ಸೆಎನ್​ ಅಧ್ಯಕ್ಷ ಗುಜ್ಜನಹಳ್ಳಿ ಮಂಜುನಾಥ್​, ದೇವರಾಯ ಸಮುದ್ರ ಗ್ರಾಪಂ ಉಪಾಧ್ಯಕ್ಷ ಜಮ್ಮನಹಳ್ಳಿ ಕೃಷ್ಣಪ್ಪ, ಮುಖಂಡರಾದ ಆರ್​.ಎಸ್​.ಸುಹಾಸ್​, ಕಗ್ಗನಹಳ್ಳಿ ಶ್ರೀನಿವಾಸ್​, ಯುವ ಕಾಂಗ್ರೆಸ್​ ಎಂ. ಅಮರ್​ ಇದ್ದರು.