Forest conservation is everyone's responsibility. 
ರಾಜ್ಯ

ಅರಣ್ಯ ಸಂರಕ್ಷಣೆ ಎಲ್ಲರ ಹೊಣೆ

ತುಮಕೂರು ಡೆಸ್ಕ್
ಮಧುಗಿರಿ: ಅರಣ್ಯ ರಕ್ಷಣೆ ಎಲ್ಲರ ಜವಾಬ್ದಾರಿ. ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಾಗ ತಣ ಅದನ್ನು ನಂದಿಸಿ ಪ್ರಕೃತಿ ಉಳಿವಿಗೆ ನೆರವಾಗಬೇಕು ಎಂದು ವಲಯ ಅರಣ್ಯಾಧಿಕಾರಿ ಸುರೇಶ್​ ತಿಳಿಸಿದರು.
ತಾಲೂಕಿನ ತಿಮ್ಲಾಪುರ ಅಭಯಾರಣ್ಯ ಪ್ರದೇಶದಲ್ಲಿ ಬುಧವಾರ ಅರಣ್ಯ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅರಣ್ಯ ಬೆಂಕಿ ನಂದಿಸುವ ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಅರಣ್ಯದಲ್ಲಿ ದೊಡ್ಡ ದೊಡ್ಡ ಮರ ಮತ್ತು ಗಿಡಗಳು ಬೆಳೆದಿರುತ್ತವೆ. ಎಲ್ಲರೂ ಕಾಡು ಮತ್ತು ಪ್ರಕೃತಿಯನ್ನು ಉಳಿಸಿದರೆ, ಮುಂದಿನ ಪೀಳಿಗೆ ನೆಮ್ಮದಿಯಿಂದ ಬದಕಲು ಸಾಧ್ಯ ಎಂದರು.
ಹಿಂದಿನ ದಿನಗಳಲ್ಲಿ ಸೊಪ್ಪಿನಿಂದ ಬಡಿದು ಬೆಂಕಿಯನ್ನು ಆರಿಸಲಾಗುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ಏರ್​ಮಿಷನ್​ ಸೇರಿದಂತೆ ಆಧುನಿಕ ತಂತ್ರಾನಗಳ ಮೂಲಕ ವೇಗವಾಗಿ ಉರಿಯುವ ಬೆಂಕಿಯನ್ನು ತಣವೇ ನಂದಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಅರಣ್ಯ ಪ್ರದೇಶದಲ್ಲಿ ಬೆಂಕಿ ಕಂಡುಬಂದಲ್ಲಿ ತಣವೇ 1926 ಸಹಾಯವಾಣಿಗೆ ಕರೆ ಮಾಡಿದರೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.