ಯರಗಟ್ಟಿ ಬಸ್​ ನಿಲ್ದಾಣದಲ್ಲಿ ನಿರ್ಮಾಣವಾದ ಇಂದಿರಾ ಕ್ಯಾಂಟೀನ್​ ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಿದರು. ಗಣಪತಿ ಮಹಾರಾಜರು, ನಿಖಿಲ್​ ದೇಸಾಯಿ, ಶಂಕರ ಇಟ್ನಾಳ, ನಿಖಿಲ ಪಾಟೀಲ ಇತರರಿದ್ದರು. 
ರಾಜ್ಯ

ಬಡವರಿಗೆ ಇಂದಿರಾ ಕ್ಯಾಂಟೀನ್​ ಅಕ್ಷಯ ಪಾತ್ರೆ

ವಿಜಯವಾಣಿ ಸುದ್ದಿಜಾಲ ಯರಗಟ್ಟಿ
ಸರ್ಕಾರದ ಮಹಾತ್ವಾಕಾಂ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್​ ಬಡವರು ಮತ್ತು ನಿರ್ಗತಿಕರ ಪಾಲಿನ ಅಯ ಪಾತ್ರೆಯಾಗಿದ್ದು, ಇದನ್ನು ಉದ್ಘಾಟಿಸಲು ಸಂತಸವೆನಿಸುತ್ತದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಬಸ್​ ನಿಲ್ದಾಣದಲ್ಲಿ ನಿರ್ಮಾಣವಾದ ಇಂದಿರಾ ಕ್ಯಾಂಟೀನ್​ ಮಂಗಳವಾರ ಉದ್ಘಾಟಿಸಿ ಮಾತನಾಡಿ, ಸದ್ಯ ಯರಗಟ್ಟಿಯ ಕ್ಯಾಂಟಿನ್​ನಲ್ಲಿ ಸುಮಾರು 200 ಪ್ಲೇಟ್​ ವಿತರಿಸಲು ಅವಕಾವಿದೆ. ಬರುವ ದಿನಗಳಲ್ಲಿ ಇದನ್ನು 500 ಪ್ಲೇಟ್​ಗೆ ಹೆಚ್ಚಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಯಲ್ಲಮ್ಮನ ಗುಡ್ಡದಲ್ಲಿಯೂ ಇಂದಿರಾ ಕ್ಯಾಂಟೀನ್​ ಶ್ರೀವಾಗಿ ಪ್ರಾರಂಭಿಸುವ ಯೋಜನೆ ಇದೆ ಎಂದರು.
ಗಣಪತಿ ಮಹಾರಾಜರು ಮಾತನಾಡಿ, ಸವದತ್ತಿ ಯಲ್ಲಮ್ಮೇತ್ರದ ಸಮಗ್ರ ಅಭಿವದ್ಧಿಯಲ್ಲಿ ಶಾಸಕ ವಿಶ್ವಾಸ ವೆದ್ಯರ ಕಾರ್ಯ ಶ್ಲಾನೀಯ. ನೂತನ ಯರಗಟ್ಟಿ ತಾಲೂಕಿಗೆ ಎಲ್ಲ ಕಚೇರಿ ತಂದು ಸಾರ್ವಜನಿಕರಿಗೆ ಅನುಕೂಲ ಒದಗಿಸಬೇಕು ಎಂದರು.
ನಿಖಿಲ್​ ದೇಸಾಯಿ, ಬೆಮುಲ್​ ನಿರ್ದೇಶಕ ಶಂಕರ ಇಟ್ನಾಳ, ಪಪಂ ಸದಸ್ಯ ನಿಖಿಲ ಪಾಟೀಲ, ಹನುಮಂತ ಹಾರೂಗೊಪ್ಪ, ಸಲೀಂ ಜಮಾದಾರ, ವಿಠ್ಠಲ ದೇವರಡ್ಡಿ, ಕೀರಪ್ಪ ಹದ್ದನ್ನವರ, ಪೀರಪ್ಪ ತಳವಾರ, ವಿಠ್ಠಲ ಬಂಟನೂರ, ಮಹಾಂತೇಶ ಉಪ್ಪಿನ, ಶಿವಾನಂದ ಕರಿಗನ್ನವರ, ಪ್ರಕಾಶ ವಾಲಿ, ನೀಲಕಂಠ ಸಿದ್ದಬಸನ್ನವರ, ಬಂಗಾರಪ್ಪ ಹರಳಿ, ಛಾಯಪ್ಪ ಹುಂಡೆಕರ, ಮಲಿಕಸಾಬ್​ ಭಾಗವಾನ, ತಹಸೀಲ್ದಾರ್​ ಎಂ.ವಿ.ಗುಂಡಪ್ಪಗೋಳ, ಎಇಇ ವಿಠ್ಠಲ ತಡಸಲೂರ, ಮುಖ್ಯಾಧಿಕಾರಿ ಮಹೇಶ ಭಜಂತ್ರಿ ಇತರರಿದ್ದರು.