ಅಮಟೂರ ಗ್ರಾಮದಲ್ಲಿ ಸಾಂಸತಿಕ ಭವನ ನಿರ್ಮಾಣಕ್ಕೆ ಗುರು ಮೆಟಗುಡ್ಡ ಚಾಲನೆ ನೀಡಿದರು. ಸದಾಶಿವ ಮಾಕೋಜಿ, ಶಶಿಕಲಾ ಅನಿಗೊಳ, ಲಕ್ಕಪ್ಪ ಕಾರಗಿ, ಸೋಮಪ್ಪ ಈಟಿ ಇತರರಿದ್ದರು. 
ರಾಜ್ಯ

ಜನರಿಗೆ ಭವನ ಸಹಕಾರಿ

ಬೈಲಹೊಂಗಲ: ದಿ.ಸುರೇಶ ಅಂಗಡಿ ಅವರು ತಮ್ಮ ಅಧಿಕಾರವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವದ್ಧಿಗೆ ಶ್ರಮಿಸಿ, ಜನಾನುರಾಗಿ ಆಗಿದ್ದರು. ಜಿಲ್ಲಾದ್ಯಂತ ಸಾಂಸತಿಕ ಭವನ ನಿರ್ಮಾಣ ಮಾಡಿದ್ದು, ಬಡಜನತೆಯ ಕಾರ್ಯಗಳಿಗೆ ಸದುಪಯೋಗವಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ ಹೇಳಿದರು. ಮಾಜಿ ಕೇಂದ್ರ ಸಚಿವ, ದಿ.ಸುರೇಶ ಅಂಗಡಿ ಅವರ 2018&19ನೇ ಸಾಲಿನ ಲೋಕಸಭಾ ೇತ್ರ ಅಭಿವದ್ಧಿ ಅನುದಾನದಡಿ ಬೈಲಹೊಂಗಲ ಮತೇತ್ರದ ಅಮಟೂರ ಗ್ರಾಮದ ಅಂಗವಿಕಲರ ಪ್ರಗತಿ ಕಲ್ಯಾಣ ಸಂದ ಸಾಂಸತಿಕ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ತಹಸೀಲ್ದಾರ್​ ಸದಾಶಿವ ಮಾಕೋಜಿ, ಪಿಡಿಒ ಶಶಿಕಲಾ ಅನಿಗೊಳ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರಗಿ, ಅಂಗವಿಕಲರ ಸಂದ ಅಧ್ಯ ಸೋಮಪ್ಪ ಈಟಿ, ಮುಖಂಡ ಶಂಕರ ಪೂಜಾರ, ವೀರೇಶ ಯಕ್ಕೇರಿ, ಪ್ರಕಾಶ ಗೋಡಿ, ಯಲ್ಲಪ್ಪ ಬೆಳಗಾವಿ, ದೀಪಕ ಸಾಮೋಜಿ ಇತರರಿದ್ದರು.