ವಡಗೇರಾ ತಾಲೂಕಿನ ಹೈಯ್ಯಾಳ (ಬಿ) ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡ ಉಚಿತ ಆರೋಗ್ಯ ಶಿಬಿರವನ್ನು ಯಾದಗಿರಿ ನಗರಾಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ಬಾಬುರಾವ ಕಾಡ್ಲೂರು ಚಾಲನೆ ನಿಡಿದರು. ಖ್ಯಾತ ವೈದ್ಯ ಡಾ.ಎಸ್.ಬಿ.ಕಾಮರಡ್ಡಿ, ಮೌನೇಶ ಪೂಜÁರಿ, ಮಲ್ಲಮ್ಮ ಕೊಮಾರ, ನೀಲಮ್ಮ ಕಣೆಕಲï, ಶಿವರಾಜ ಹಾಲಗೇರಾ, ಅಬ್ದುಲï ಚಿಗನೂರ್, ಶರಣಪ್ಪ ಕ್ಯಾತ್ನಾಳ, ಮುಕೇಶ್ ಇತರರಿದ್ದರು.
- ಅಧ್ಯಕ್ಷ ಬಾಬುರಾವ ಕಾಡ್ಲೂರು ಅಭಿಮತ
- ಹಯ್ಯಾಳ(ಬಿ)ದಲ್ಲಿ ಕಾಮರಡ್ಡಿ ಆಸ್ಪತ್ರೆಯಿಂದ ಆರೋಗ್ಯ ಶಿಬಿರ
ವಡಗೇರಾ: ಪ್ರತಿ ರೋಗಿಗಳ ಪಾಲಿಗೆ ವೈದ್ಯರೇ ದೇವರಾಗಿದ್ದಾರೆ ಎಂದು ಯಾದಗಿರಿ ನಗರಾಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರು ಹೇಳಿದರು.
ತಾಲೂಕಿನ ಹೈಯ್ಯಾಳ (ಬಿ) ಗ್ರಾಮದ ಹೈಯ್ಯಾಳ ಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಕಲಬುರಗಿಯ ಕಾಮರಡ್ಡಿ ಆಸ್ಪತ್ರೆಯಿಂದ ಮಂಗಳವಾಗ ಹಮ್ಮಿಕೊಂಡ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿನ ಬಡ ರೋಗಿಗಳ ಅನುಕೂಲಕ್ಕಾಗಿ ವಿವಿಧ ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳುತ್ತಿರುವ ಈ ಕಾರ್ಯ ಶ್ಲಾಘನೀಯ ಎಂದರು.
ಖ್ಯಾತ ವೈದ್ಯ ಡಾ.ಎಸ್.ಬಿ.ಕಾಮರಡ್ಡಿ ಸುಮಾರು ವರ್ಷಗಳಿಂದ ಅತ್ಯುತ್ತಮ ವೈದ್ಯಕೀಯ ಸೇವೆ ನೀಡುತ್ತಾ ರೋಗಿಗಳ ಪಾಲಿನ ಆಪತ್ಬಾಂಧವರಾಗಿದ್ದಾರೆ. ರೋಗಿಗಳ ಪಾಲಿಗೆ ವೈದ್ಯರೇ ದೇವರು ಎಂಬ ಮಾತು ಸುಳ್ಳಲ್ಲ ಹಗಲು ಇರುಳು ಎನ್ನದೆ ವೈದ್ಯರು ರೋಗಿಯ ಸೇವೆ ತೊಡಗಿಸಿಕೊಂಡಿರುತ್ತಾರೆ. ಸಮಾಜಕ್ಕೆ ವೈದ್ಯರ ಕೊಡುಗೆ ಅಪಾರವಾವಾಗಿದೆ ಎಂದರು.
ಆಸ್ಪತ್ರೆ ಮುಖ್ಯಸ್ಥ ಡಾ.ಎಸ್.ಬಿ.ಕಾಮರಡ್ಡಿ ಮಾತನಾಡಿ, ನಮ್ಮ ಆಸ್ಪತ್ರೆ ವತಿಯಿಂದ ಗ್ರಾಮೀಣ ಭಾಗದ ವೃದ್ಧರು ಸಾರ್ವಜನಿಕರಿಗಾಗಿ ನಿರಂತರವಾಗಿ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳುತ್ತಿದ್ದು ಈ ಶಿಬಿರದ ಲಾಭ ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ಅನಾರೋಗ್ಯಕ್ಕೆ ನಮ್ಮ ಆಹಾರ ಪದ್ಧತಿಯೇ ಮೂಲ ಕಾರಣ. ಉತ್ತಮ ಆಹಾರ ಸೇವನೆ ಮಾಡುವುದರ ಜತೆಗೆ ಪ್ರತಿದಿನ ಯೋಗ ವ್ಯಾಯಾಮದ ಅಭ್ಯಾಸ ಮಾಡಿಕೊಳ್ಳಬೇಕು. ಪ್ರತಿಯೊಬ್ಬರು ಆದಷ್ಟು ದುಶ್ಚಟಗಳಿಂದ ದೂರವಿದ್ದು ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳುವಂತೆ ಕಿವಿಮಾತು ಹೇಳಿದರು.
ಹಯ್ಯಾಳ (ಬಿ) ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೌನೇಶ ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಜಿಪಂ ಸದಸ್ಯೆ ಮಲ್ಲಮ್ಮ ಕೊಮಾರ, ನೀಲಮ್ಮ ಕಣೆಕಲ್, ಶಿವರಾಜ ಹಾಲಗೇರಾ, ಕರವೇ ತಾಲೂಕು ಅಧ್ಯಕ್ಷ ಅಬ್ದುಲ್ ಚಿಗನೂರ್, ಶರಣಪ್ಪ ಕ್ಯಾತ್ನಾಳ, ಮುಕೇಶ್, ಕರವೇ ಹೋಬಳಿ ಘಟಕ ಅಧ್ಯಕ್ಷ ಮಾಳಪ್ಪ, ಡಾ.ಶರೀಫ್, ಶರಣು ಕುರಿ, ಪರಶುರಾಮ ಚಲವಾದಿ, ಶಂಕ್ರಣ್ಣ ಬೋಳ್‌ಶೆಟ್ಟಿ, ಡಾ.ಇಸೂಫ್, ಅಯ್ಯಣ್ಣ ಪೂಜಾರಿ, ಶಾಂತಾ ಸೇರಿ ಅನೇಕರು ಭಾಗವಹಿಸಿದ್ದರು.