ಗೋಕಾಕ ನಗರದಲ್ಲಿ ಹಮ್ಮಿಕೊಂಡಿದ್ದ ಹಾಸ್ಯ ರಸಮಂಜರಿ ಕಾರ್ಯಕ್ರಮದಲ್ಲಿ ರಾಹುಲ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು. ದೀಪಕ ಗುಡಗನಟ್ಟಿ, ಸುರೇಶ ಗವನ್ನವರ, ಬಸವರಾಜ ಖಾನಪ್ಪನರ, ಡಾ.ರವೀಂದ್ರ ಅಂಟಿನ, ಮಹೆಬೂಬ್​ ಮಕಾನದಾರ ಇತರರಿದ್ದರು. 
ರಾಜ್ಯ

ಕನ್ನಡಕ್ಕಾಗಿ ಕರವೇ ನಿರಂತರ ಹೋರಾಟ

ಎಂ.ಎಸ್​.ಹಿರೇಮಠ ಬೆಳಗಾವಿ
ಗೋಕಾಕ: ಕನ್ನಡದ ನೆಲ, ಜಲ, ಭಾಷೆೆ ಹಾಗೂ ಸಂಸತಿ ರಣೆಗಾಗಿ ಕರ್ನಾಟಕ ರಣಾ ವೇದಿಕೆ ನಿರಂತರ ಹೋರಾಟ ಮಾಡುತ್ತಿದೆ ಎಂದು ಡಿಸಿಸಿ, ಅಪೆಕ್ಸ್​ ಬ್ಯಾಂಕ್​ ನಿರ್ದೇಶಕ ರಾಹುಲ ಜಾರಕಿಹೊಳಿ ಹೇಳಿದರು.
ನಗರದ ನ್ಯೂ ಇಂಗ್ಲಿಷ್​ ಸ್ಕೂಲ್​ ಕನ್ನಡ ಮಾಧ್ಯಮ ಶಾಲೆ ಆವರಣದಲ್ಲಿ ಕರ್ನಾಟಕ ರಣಾ ವೇದಿಕೆ ತಾಲೂಕು ಟಕ ಹಾಗೂ ಕರವೇ ಸಾಂಸತಿಕ ಟಕದ ವತಿಯಿಂದ ರಾಜ್ಯೋತ್ಸವ ಸಂಭ್ರಮದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಹಾಸ್ಯ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಭಿವೃದ್ಧಿ ದೃಷ್ಟಿಯಿಂದ ಗೋಕಾಕ ಜಿಲ್ಲೆ ಮಾಡಬೇಕಿದೆ. ಗೋಕಾಕ ಜಿಲ್ಲೆ ಮಾಡಲು ಸಚಿವ ಸತೀಶ ಜಾರಕಿಹೊಳಿ ಪ್ರಯತ್ನಿಸುತ್ತಿದ್ದು, ನಾವೆಲ್ಲ ಸಹಕರಿಸೋಣ ಎಂದರು. ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯ ಭರಮಣ್ಣ ಉಪ್ಪಾರ, ಲಕ್ಷಿ$್ಮ ಎಜುಕೇಷನ್​ ಟ್ರಸ್ಟ್​ ನಿರ್ದೇಶಕ ಸವೋರ್ತ್ತಮ ಜಾರಕಿಹೊಳಿ, ಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಆರ್​ೀ ಪೀರಜಾದೆ ಅವರನ್ನು ಸನ್ಮಾನಿಸಲಾಯಿತು.
ಅಂಕಲಗಿ ಅಡವಿಸಿದ್ಧೇಶ್ವರ ಮಠದ ಅಮರಸಿದ್ಧೇಶ್ವರ ಸ್ವಾಮೀಜಿ, ಶೂನ್ಯ ಸಂಪಾದನ ಮಠದ ಬಸವಪ್ರಭು ಸ್ವಾಮೀಜಿ, ಉದಗಟ್ಟಿಯ ಶ್ರೀದೇವಿ ಅಮ್ಮಾಜಿ, ಕರವೇ ಜಿಲ್ಲಾಧ್ಯ ದೀಪಕ ಗುಡಗನಟ್ಟಿ, ರಾಜ್ಯ ಸಂಚಾಲಕ ಸುರೇಶ ಗವನ್ನವರ, ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನರ, ಡಾ.ರವೀಂದ್ರ ಅಂಟಿನ, ಮಹೆಬೂಬ್​ ಮಕಾನದಾರ, ಶಿವಾಜಿ ಪಾಟೀಲ, ಗುರುಪಾದ ಮದನ್ನವರ, ಶಶಿ ಕನ್ನಪ್ಪನವರ ಇತರರಿದ್ದರು.