ಬಸವಕಲ್ಯಾಣದ ಬಸವ ಮಹಾಮನೆ ಪರಿಸರದಲ್ಲಿ ಅಯೋಜಿಸಿದ್ದ ಬಿಜೆಪಿ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗವನ್ನು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಶಾಸಕರಾದ ಪ್ರಭು ಚವ್ಹಾಣ್, ಶರಣು ಸಲಗರ, ಎಂ.ಜಿ.ಮುಳೆ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಗುಂಡಪ್ಪ ವಕೀಲ, ಪ್ರಮುಕರಾದ ರಾಜಶೇಖರ ನಾಗಮೂರ್ತಿ, ಈಶ್ವರಸಿಂಗ್ ಠಾಕೂರ್, ಬಾಬು ವಾಲಿ, ಶಕುಂತಲಾ ಬೆಲ್ದಾಳೆ, ಶಿವಾನಂದ ಮಂಠಾಳಕರ್, ಬಸವರಾಜ ಆರ್ಯ, ಮಾಧವರಾವ ಹಸೂರೆ, ಪೀರಪ್ಪ ಔರಾದೆ, ಸಂಜಯ ಮಿಸ್ಕಿನ್ ಇದ್ದರು.
- ಎನ್.ರವಿಕುಮಾರ್ ಪ್ರತಿಪಾದನೆ
- ಕಲ್ಯಾಣದಲ್ಲಿ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗಕ್ಕೆ ಚಾಲನೆ
ಬಸವಕಲ್ಯಾಣ: ಅಧಿಕಾರ ಮುಖ್ಯವಲ್ಲ. ದೇಶ ಸೇವೆಯೇ ಮುಖ್ಯ. ಅಧಿಕಾರದ ಜತೆಗೆ ಕರ್ತವ್ಯದ ಅರಿವು ಮುಖ್ಯ ಎನ್ನುವ ಉದ್ದೇಶದಿಂದ ಕೆಲಸ ಮಾಡುತ್ತಿರುವ ಪಕ್ಷ ಬಿಜೆಪಿ. ದೇಶದ ಅವಶ್ಯಕತೆಗೆ ಅನುಗುಣವಾಗಿ ಕೆಲಸ ಮಾಡುವ ಕಾರ್ಯಕರ್ತರ ಪಕ್ಷ ಇದಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಹೇಳಿದರು.
ನಗರದ ಬಸವ ಮಹಾಮನೆ ಪರಿಸರದಲ್ಲಿ ಜಿಲ್ಲಾ ಬಿಜೆಪಿಯಿಂದ ಶನಿವಾರ ಆಯೋಜಿಸಲಾಗಿರುವ ಎರಡು ದಿನ ನಡೆವ ಪಂ.ದೀನ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಅಭಿಯಾನ&2026, ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಟನೆ, ಪರಿವಾರ ಬಲವಾದ ಉದ್ದೇಶ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ನಮ್ಮ ಗುರಿ ಅಧಿಕಾರವಷ್ಟೇ ಅಲ್ಲ. ದೇಶ ಸೇವೆಗಾಗಿ ಎನ್ನುವ ತರಬೇತಿ ಇಲ್ಲಿದೆ ಎಂದರು.
ಪಶ್ವಿಮ ಬಂಗಾಲದಲ್ಲಿ ನಮಗೆ ಅಧಿಕಾರಕ್ಕೆ ಬರಲು ಅಗಲಿಲ್ಲ. ಅಲ್ಲಿ 75 ವರ್ಷದಿಂದ ಪಕ್ಷದ ಸಂದ ಅನೇಕ ಕಾರ್ಯಕರ್ತರು ನಿಶ್ವಾರ್ಥವಾಗಿ ಕೆಲಸ ಮಾಡಿದ್ದಾರೆ. ಕಾರ್ಯಕರ್ತರ ಶ್ರಮದ ಫಲವಾಗಿ ಈಗ ಅಧಿಕಾರಕ್ಕೆ ಬಂದಿದ್ದೇವೆ. ಮುಖ್ಯಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮದಲ್ಲಿ ಅಲ್ಲಿಯ ಹಿರಿಯ ಕಾರ್ಯರ್ತರನ್ನು ಪ್ರಧಾನಿ ಮೋದಿ ಸನ್ಮಾನಿಸಿ ಗೌರವಿಸಿದರು ಎಂದು ಹೇಳಿದರು.
ಕಾರ್ಯಕರ್ತರನ್ನು ನಿರ್ಮಾಣ ಮಾಡಲು, ದೇಶಕ್ಕಾಗಿ ಕರ್ತವ್ಯ ನಿರ್ವಹಿಸಲು ಪ್ರೇರಣೆ ನೀಡಲು ತರಬೇತಿ ಬೇಕಿದೆ. ಕಾರ್ಯಕರ್ತರಲ್ಲಿ ಶಿಸ್ತು, ಸಂಯಮ, ತ್ಯಾಗ ಬೇಕು. ಈ ತರಬೇತಿ ನೀಡಿ ಕಾರ್ಯಕರ್ತರನ್ನು ನಿರ್ಮಾಣ ಮಾಡುವ ಪಕ್ಷ ಬಿಜೆಪಿ. ಈ ಪಕ್ಷದಂತೆ ದೇಶದಲ್ಲಿ ಇನ್ನೊಂದು ಪಕ್ಷವಿಲ್ಲ. ಶಕ್ತಿಯುತ ರಾಷ್ಟ್ರ ನಿರ್ಮಾಣ ಮಾಡಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಕೆಲಸ ಮಾಡುವ ಪಕ್ಷ ನಮ್ಮದು. ಕಾರ್ಯಕರ್ತರು ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಾಸಕರಾದ ಪ್ರಭು ಚವ್ಹಾಣ್, ಶಾಸಕ ಶರಣು ಸಲಗರ, ಎಂಎಲ್ಸಿ ಎಂ.ಜಿ.ಮುಳೆ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಗುಂಡಪ್ಪ ವಕೀಲ, ಪ್ರಶಿಕ್ಷಣ ವರ್ಗದ ರಾಜ್ಯ ಸಂಚಾಲಕ ರಾಜಶೇಖರ ನಾಗಮೂರ್ತಿ, ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ಬಾಬು ವಾಲಿ, ಶಕುಂತಲಾ ಬೆಲ್ದಾಳೆ, ಶಿವಾನಂದ ಮಂಠಾಳಕರ್, ಬಸವರಾಜ ಆರ್ಯ, ಮಾಧವರಾವ ಹಸೂರೆ, ಪೀರಪ್ಪ ಔರಾದೆ, ಸಂಜಯ ಮಿಸ್ಕಿನ್ ಇದ್ದರು.
"
ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ ವಿಶ್ವಗುರು ಆಗುವತ್ತ ಹೆಜ್ಜೆ ಇಡುತ್ತಿದೆ. ಆತ್ಮ ನಿರ್ಭರ ಭಾರತಕ್ಕಾಗಿ ರೂಪಿಸಿರುವ ಜನಕಲ್ಯಾಣ ಯೋಜನೆ ದೇಶದ ಜನರಲ್ಲಿ ಭರವಸೆ ಮೂಡಿಸಿವೆ. ಜಲಜೀವನ್ ಮಿಷನ್ ಯೋಜನೆ, ರೈತರಿಗೆ ಪ್ರತಿವರ್ಷ 6 ಸಾವಿರ ರೂ, ಸೇರಿ ಅನೇಕ ಜನ ಪರ ಯೋಜನೆಗಳು ದೇಶದ ಜನರ ಬದುಕಿನಲ್ಲಿ ಭರವಸೆ ಮೂಡಿಸಿದೆ.
— > ಶರಣು ಸಲಗರ ಶಾಸಕ
"
ಸಂಘಟನೆಯ ಜತೆಗೆ ಕಾರ್ಯಕರ್ತರಲ್ಲಿ ವ್ಯಕ್ತಿತ್ವ ನಿರ್ಮಾಣ ಮಾಡುವ ಮೂಲಕ ಸಮೃದ್ದ ರಾಷ್ಟ್ರ ನಿರ್ಮಾಣವೇ ಪ್ರಶಿಕ್ಷಣ ವರ್ಗದ ಮೂಲ ಆಶಯ. ಇಂಥ ಪ್ರಶಿಕ್ಷಣ ವರ್ಗಗಳು ದೇಶದಾದ್ಯಂತ ನಡೆಯುತ್ತವೆ. ಕಳೆದ ಎರಡು ತಿಂಗಳ ಹಿಂದೆ ರಾಜ್ಯದ 700 ಮಂಡಳಗಳಲ್ಲಿ ನಡೆದಿದೆ. ಈ ತಿಂಗಳು ಸಂಟನಾತ್ಮಕ ಜಿಲ್ಲೆಗಳಲ್ಲಿ ನಡೆಯಲಿವೆ. ಇಲ್ಲಿ ನಡೆಯುತ್ತಿರುವ ಎರಡು ದಿನಗಳ ಪ್ರಶಿಕ್ಷಣ ವರ್ಗದಲ್ಲಿ 12 ವಿಷಯ ಕುರಿತು ಅಧ್ಯಯನ, ಯೋಗ, ಸಾಂಸತಿಕ ಕಾರ್ಯಕ್ರಮ ನಡೆಯಲಿವೆ.
— > ಸೋಮನಾಥ ಪಾಟೀಲ್ ಬಿಜೆಪಿ ಜಿಲ್ಲಾಧ್ಯಕ್ಷ