For a woman, her home is a symbol of peace.
ಶಿರಾ: ತವರು ಮನೆ ಮಹಿಳೆಯ ಜೀವನದಲ್ಲಿ ಭದ್ರತೆ, ಪ್ರೀತಿ ಮತ್ತು ನೆಮ್ಮದಿಯ ಸಂಕೇತವಾಗಿದೆ. ಇತ್ತೀಚಿನ ದಿನಗಳಲ್ಲಿ ಆಸ್ತಿ ಹಂಚಿಕೆ ಮತ್ತು ವಾರಸುದಾರಿಕೆಯ ವಿಚಾರಗಳಲ್ಲಿ ಉಂಟಾಗುತ್ತಿರುವ ಭಿನ್ನಾಭಿಪ್ರಾಯಗಳು ಅನೇಕ ಮಹಿಳೆಯರಲ್ಲಿ ತವರು ಮನೆಯ ಮೇಲಿನ ವಿಶ್ವಾಸ ಹೋಗುತ್ತಿದೆ ಎಂದು ಎಂದು ಮಾಯೂರಿ ನಾಗೇಶ್ ತಿಳಿಸಿದರು.
ಶಿರಾದ ಆರ್ಯವೈಶ್ಯ ಹೆಣ್ಣು ಮಕ್ಕಳಿಂದ ಜೇಷ್ಠ ಅಧಿಕ ಮಾಸದ ಪ್ರಯುಕ್ತ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಿದ್ದ ತವರೂರಿನಲ್ಲಿ ನಮ್ಮ ಭಾಂದವ್ಯದ ಬಾಗಿನ ಕಾರ್ಯಕ್ರಮದಲ್ಲಿ ಮಾತನಾಡಿ, ನಗರದಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮ ರಾಜ್ಯದ್ಯಂತ ಪಸರಿಸಿ ಹೆಣ್ಣು ಮಕ್ಕಳ ತವರಿನ ಬಾಂಧವ್ಯ ವೃದ್ಧಿಸಲಿ ಎಂದರು.
ಶಿರಾ ಹೆಣ್ಣು ಮಕ್ಕಳಿಂದ 260 ಬಾಗಿನ ಸಮರ್ಪಿಸಲಾಯಿತು. 350ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.
ವಿವಿಧ ಭಾಗದಿಂದ ಹೆಣ್ಣು ಮಕ್ಕಳು ಆಗಮಿಸಿದ್ದರು. ಆರ್ಯವೈಶ್ಯ ಮಂಡಳಿ, ವಾಸವಿ ಮಹಿಳಾ ಮಂಡಳಿ, ವಾಸವಿ ಯುವಜನ ಸಂಘದ ಪದಾಧಿಕಾರಿಗಳು ಇದ್ದರು.