ಚಿಂತಾಮಣಿ:
ನಗರದ ಬೆಂಗಳೂರು ಜೋಡಿ ರಸ್ತೆಯ ಕನ್ನಂಪಲ್ಲಿ ಓಟಿ ಕೆರೆಯಿಂದ ಎಂ.ಜಿ. ರಸ್ತೆಯ ಪಿಸಿಆರ್ ಕಾಂಪ್ಲೆಕ್ಸ್ವರೆಗೆ ಅಂದಾಜು 8.37 ಕೋಟಿ ವೆಚ್ಚದಲ್ಲಿ ಫುಟ್ಪಾತ್ ಅಭಿವೃದ್ಧಿ ಕಾಮಗಾರಿ ಆರಂಭವಾಗಿ ವರ್ಷ ಕಳೆದರೂ ಪೂರ್ಣಗೊಂಡಿಲ್ಲ.
ಇಲ್ಲಿನ ಬೆಂಗಳೂರು ಜೋಡಿ ರಸ್ತೆಯ ಪಾದಚಾರಿ ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರೇ ಡೆಲ್ಟ್ ಯೋಜನೆಯಡಿ ಅಜಾದ್ ಚೌಕದ ಕಾಮಗಾರಿಯನ್ನೂ ನಿರ್ವಹಿಸುತ್ತಿದ್ದಾರೆ. ಅಲ್ಲಿ ಸಂಚಾರ ದಟ್ಟಣೆಯಿಂದ ಆ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುತ್ತಿದೆ. ಅಜಾದ್ ಚೌಕ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ತಣವೇ ಜೋಡಿ ರಸ್ತೆಯ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
— ಪ್ರಸಾದ್ ರೆಡ್ಡಿ, ಜೆಇ, ನಗರಸಭೆ, ಚಿಂತಾಮಣಿ
ವ್ಯಾಪಾರಸ್ಥರಿಗೆ ತೊಂದರೆ
ಫುಟ್ಪಾತ್ ಕಾಮಗಾರಿಗಾಗಿ ಅಂಗಡಿಗಳ ಮುಂಭಾಗ ಗುಂಡಿ ತೆಗೆದು ಕಾಂಕ್ರೀಟ್ ಹಾಕದೆ ಹಾಗೆಯೇ ಬಿಡಲಾಗಿದೆ. ಅಂಗಡಿಗಳ ಮೆಟ್ಟಿಲುಗಳನ್ನು ತೆರವುಗೊಳಿಸಿ 6 ತಿಂಗಳು ಕಳೆದರೂ ಕಾಮಗಾರಿ ಮುಂದುವರಿದಿಲ್ಲ. ಇದರಿಂದಾಗಿ ಸಾರ್ವಜನಿಕರು ಹಾಗೂ ಗ್ರಾಹಕರು ಅಂಗಡಿಗಳಿಗೆ ಬರಲು ಹರಸಾಹಸ ಪಡುತ್ತಿದ್ದು, ವ್ಯಾಪಾರ ಸಂಪೂರ್ಣ ಣಿಸಿದೆ. ರಸ್ತೆ ವಿಭಜಕಗಳಲ್ಲಿ ಅಲಂಕಾರಿಕ ಬೀದಿ ದೀಪ ಅಳವಡಿಕೆ ಹಾಗೂ ಗಿಡ ನೆಡುವ ಭರವಸೆಗಳು ಕಾಗದಕ್ಕಷ್ಟೇ ಸೀಮಿತವಾಗಿವೆ.ಪೌರಾಯುಕ್ತ ಜಿ.ಎನ್.ಚಲಪತಿ ಕಳೆದ ಏಪ್ರಿಲ್ನಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಗೆ ವೇಗ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಐದು ತಿಂಗಳು ಕಳೆದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಕೆಎಸ್ಆರ್ಟಿಸಿ ಡಿಪೋ ಮುಂಭಾಗ ಚರಂಡಿ ಗೋಡೆ ಎತ್ತರಿಸಿ ಮುಚ್ಚಳ ಅಳವಡಿಸದೆ ಬಿಡಲಾಗಿದೆ. ಅಂಗಡಿಗಳ ಮುಂದಿನ ಮೆಟ್ಟಿಲು ತೆರವುಗೊಳಿಸಿ 6 ತಿಂಗಳು ಕಳೆದರೂ ಪಾದಚಾರಿ ರಸ್ತೆ ನಿರ್ಮಿಸಿಲ್ಲ. ಇದರಿಂದ ಸಾರ್ವಜನಿಕರು ಹಾಗೂ ಅಂಗಡಿಯವರು ನರಕಯಾತನೆ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಣ ಎಚ್ಚೆತ್ತು ಕೆಲಸ ಪೂರ್ಣಗೊಳಿಸಬೇಕು.
— ಎಂ.ಆರ್. ಲೋಕೇಶ್, ಜಿಲ್ಲಾಧ್ಯ, ಕರವೇ