- ಪಾದಚಾರಿ ಮಾರ್ಗದ ಮೇಲೆ ಒತ್ತುವರಿ ತೆರವು ಮಾಡಿಸಿದರೂ ಫಲವಿಲ್ಲ ಎಂದ ಬೆಂಗಳೂರಿಗರು
- ಫುಟ್‌ಪಾತ್ ದುರಸ್ತಿ, ಪಾದಾಚಾರಿ ಮಾರ್ಗದ ಮೇಲೆ ಕಸ, ಹಸುಗಳ ವಾಸಸ್ಥಾನ ಸಾಲು ಸಾಲು ಸಮಸ್ಯೆ ಬಿಚ್ಚಿಟ್ಟ ಜನರು
- ಫುಟ್‌ಪಾತ್‌ಗಳ ದುರಸ್ತಿಗಾಗಿ ರೂ. 70 ಕೋಟಿ ರೂ.ಅನುದಾನ ಘೋಷಿಸಿದ ಸಚಿವ ಕೃಷ್ಣಬೈರೇಗೌಡ
- ಕಳಪೆ ವಿನ್ಯಾಸ ಹಾಗೂ ವೈಜ್ಞಾನಿಕವಲ್ಲದ ಕಾಮಗಾರಿಗಳ ಬಗ್ಗೆ ಬೆಂಗಳೂರಿಗರು ಕಿಡಿ
ನೀವು ಪಾದಚಾರಿ ಮಾರ್ಗದ ಮೇಲೆ ಒತ್ತುವರಿ ಮಾಡಿಕೊಂಡಿರುವುದನ್ನು ತೆರುವುಗೊಳಿಸುತ್ತಿದ್ದೀರಿ. ಆದರೆ, ನಮಗೆ ನಡೆದಾಡಲು ಜಾಗವೇ ಇಲ್ಲ. ಒಂದು ಕಡೆ ಫುಟ್‌ಪಾತ್ ದುರಸ್ತಿಗೆ ಈಡಾಗಿದ್ದರೆ, ಮತ್ತೊಂದು ಕಡೆ ಒಳಚರಂಡಿ ಕಾರ್ಯ ಮುಗಿಸಿ, ಅಲ್ಲೇ ಬಿಟ್ಟೋದ ಕಸ ಇರುತ್ತದೆ. ಅಥವಾ ಸಾವರ್ಜನಿಕರು ಕಸ ಸುರಿದ ಜಾಗವಾಗಿ ಮಾರ್ಪಟ್ಟಿರುತ್ತದೆ. ಈ ಬಗ್ಗೆ ಗಮನಹರಿಸಿ..ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಸಮಸ್ಯೆಗಳ ಪಟ್ಟಿಯನ್ನು ಬೆಂಗಳೂರಿಗರು ಸಚಿವ ಕೃಷ್ಣಬೈರೇಗೌಡರ ಮುಂದೆ ಇರಿಸಿದ್ದಾರೆ.
ಸುಪ್ರೀಂ ಆದೇಶ
ಸುರಕ್ಷಿತ ಪಾದಚಾರಿ ಮಾರ್ಗದಲ್ಲಿ ನಡೆಯುವುದು ನಾಗರಿಕ ಮೂಲಭೂತ ಹಕ್ಕು. ಫುಟ್ಪಾಯ್ತ್ ಮೇಲಿನ ಒತ್ತುವರಿ ಮುಕ್ತಗೊಳಿಸಿ, ಸುರಕ್ಷಿತ ಕಾರಿಡಾರ್ಗಾಗಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಹೀಗಾಗಿ ಸಚಿವ ಕೃಷ್ಣಬೈರೇಗೌಡ ಅವರು, ಮಲ್ಲೇಶ್ವರಂ, ಜಯನಗರ, ವಿಜಯನಗರ ಸೇರಿದಂತೆ ಬೆಂಗಳೂರಿನನ ವಿವಿಧ ಸ್ಥಳಗಳಲ್ಲಿ ಪಾದಚಾರಿ ಮಾರ್ಗದ ಮೇಲಿದ್ದ ಬೀದಿ ಬದಿ ವ್ಯಾಪಾರಿಗಳ ಅಂಗಡಿಯನ್ನು ಎತ್ತಂಗಡಿ ಮಾಡಿಸಿದ್ದರು. ಆ ಬೆನ್ನಲ್ಲೇ ಈ ವಿದ್ಯಾಮಾನದ ವಿರುದ್ಧ ಹೋರಾಟಗಳು ಜೋರಾಗಿತ್ತು. ಸಚಿವರ ನಡೆ ವಿರುದ್ಧ ಕಿಡಿಕಾರಲಾಗಿತ್ತು.
ಬೆಂಗಳೂರು ಬೃಹತ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಮುಖ್ಯ ರಸ್ತೆಯಲ್ಲಿರುವ ಯಾವ ಫುಟ್‌ಪಾತ್ ಮೇಲೆಯೂ ವ್ಯಾಪಾರ ಮಾಡುವಂತಿಲ್ಲ. ಸಾರ್ವಜನಿಕರ ಸುರಕ್ಷತೆ ಮುಖ್ಯ. ಅಪಘಾತಗಳನ್ನು ತಡೆಯುವುದು ನನ್ನ ಪ್ರಮುಖ ಗುರಿಯಾಗಿದೆ. ಈ ವಿಚಾರಗಳಿಂದ ನಾನು ನಿಷ್ಠುರನಾದರೂ ಚಿಂತೆಯಿಲ್ಲ ಎಂದು ಹೇಳಿದ್ದರು.
ಪಾದಚಾರಿಗಳ ಸಮಸ್ಯೆಗಳೇನು?
ಕೃಷ್ಣ ಬೈರೇಗೌಡ ಅವರ ಈ ಕಾರ್ಯವೈಖರಿ ಬಗ್ಗೆ ಮೆಚ್ಚಿಕೊಂಡ ಕಾಕ್ಸ್ ಟೌನ್ ನಿವಾಸಿಗಳು ಜನರು, ಮೂಲ ಸಮಸ್ಯೆ ಬಗ್ಗೆ ಬಿಚ್ಚಿಟ್ಟಿದ್ದಾರೆ. ನ್ಯೂ ಬಿಇಎಲ್ ರಸ್ತೆಯು ಪ್ರಮುಖ ಶಾಪಿಂಗ್ ಕೇದ್ರವಾಗಿದೆ. ಇಲ್ಲಿನ ಪಾದಚಾರಿ ಮಾರ್ಗದಲ್ಲಾಗುತ್ತಿರುವ ಒತ್ತುವರಿ ತೆರವುಗೊಳಿಸುತ್ತಿದ್ದೀರಿ. ಆದರೆ, ನಮಗೆ ಅದರ ಮೇಲೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಎಲ್ಲವು ದುರಸ್ತಿಗೆ ಈಡಾಗಿದೆ.
ಸಾಲು ಸಾಲು ಗಾಡಿಗಳೇ ನಿಲ್ಲುತ್ತವೇ
ವಿಜಯನಗರದ ಮೆಟ್ರೋ ನಿಲ್ದಾಣ ಸೇರಿದಂತೆ ನಾನಾ ಭಾಗದಲ್ಲಿ ನಡೆದಾಡಲು ಫುಟ್‌ಪಾತ್ ಇದ್ದರೂ ಬಳಕೆ ಮಾಡೋಕೆ ಸಾಧ್ಯವಿಲ್ಲ. ಏಕೆಂದರೆ ಮೆಟ್ರೋದಲ್ಲಿ ಪ್ರಯಾಣಿಸುವವರು ತಮ್ಮ ದ್ವಿಚಕ್ರವಾಹನಗಳನ್ನು ಮೆಟ್ರೋ ಬಳಿ ನಿಲ್ಲಿಸಿ ಹೋಗುತ್ತಾರೆ. ಹೀಗಾಗಿ ಕಿರಿದಾದ ರಸ್ತೆಯಲ್ಲಿ, ವಾಹನಗಳ ಹಾರ್ನ್ ಕೇಳುತ್ತಾ, ಬೈದಾಡುತ್ತಾ ನಡೆದಾಡಬೇಕು ಎಂದು ವಿಜಯನಗರ ನಿವಾಸಿಯೊಬ್ಬರು ಅಳಲು ತೋಡಿಕೊಂಡರು.
ಪಾದಚಾರಿಚಾರಿ ಮಾರ್ಗವೇ ಇಲ್ಲ
ಕನಿಷ್ಠ 100 ಮೀಟರ್ ದೂರದವರೆಗೆ ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುವುದು ಕಷ್ಟ. ಒತ್ತುವರಿ ತೆರವಾದರೂ ಸಹ ನಾವು ರಸ್ತೆಯಲ್ಲೇ ಓಡಾಡಬೇಕು. ಫುಟ್‌ಪಾತ್‌ನ ಬಹುಭಾಗ ಅಸಮತಟ್ಟಾಗಿದೆ ಕೆಲವೊಂದು ಕಡೆ ಸಿಮೆಂಟ್ ಸ್ಲ್ಯಾಬ್ ತೆಗೆದುಹಾಕಲಾಗಿದೆ ಎಂದು ನ್ಯೂ ಬಿಇಎಲ್ ರಸ್ತೆಯಲ್ಲಿ ಶಾಂಪಿಂಗ್ ಮಾಡುವ ಯುವತಿಯೊಬ್ಬರು ಮಾತನಾಡಿದರು.
ಎಲ್ಲೆಲ್ಲೂ ಕಸ
ಮನೆಯಿಂದ ಬಸ್ ನಿಲ್ದಾಣಕ್ಕೆ ನಡೆದು ತಲುಪಲು 15 ನಿಮಿಷ ಬೇಕು. ಇಲ್ಲಿ 5 ಆರು ಅಡ್ಡ ರಸ್ತೆಗಳು ಸಿಗುತ್ತದೆ. ಪ್ರತಿ ರಸ್ತೆಯಲ್ಲಿಯೂ ಕಸದ ರಾಶಿ ಫುಟ್‌ಪಾತ್ ಮೇಲೆ ಇರುತ್ತದೆ. ಅಥವಾ ಹಸುವಿನ ಸಗಣಿ, ಇಲ್ಲವೇ ತರಕಾರಿ ಬಂಡಿಗಳನ್ನು ನಿಲ್ಲಿಸಿಕೊಂಡು ಇರುತ್ತಾರೆ. ಸರಿಯಾದ ಬಸ್ ನಿಲ್ದಾಣವಿಲ್ಲ ಎಂದು ಚಾಮರಾಜಪೇಟೆ ನಿವಾಸಿಯೊಬ್ಬರು ಮಾಹಿತಿ ಹಂಚಿಕೊಂಡರು.
ಸಚಿವರಿಗೆ ಕಾಕ್ಸ್ ಟೌನ್ ನಿವಾಸಿಗಳ ಪತ್ರ
ಫುಟ್‌ಪಾತ್‌ಗಳ ಕಳಪೆ ವಿನ್ಯಾಸದ ಕುರಿತು ಕಾಕ್ ಟೌನ್ ನಿವಾಸಿಗಳು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಪತ್ರ ಬರೆದಿದ್ದಾರೆ. ಸುಪ್ರೀಂ ಕೋರ್ಟ್ ಆದೇಶಕ್ಕೆ ಪ್ರತಿಕ್ರಿಯೆಯಾಗಿ ನೀವು ಕೈಗೊಂಡಿರುವ ಕೇವಲ ಒತ್ತುವರಿ ತೆರವು ಅಭಿಯಾನವು, ಗ್ರೇಟರ್ ಬೆಂಗಳೂರು ಅಭಿವೃದ್ಧಿಯ ಎಂಜಿನಿಯರ್‌ಗಳನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಿದೆ. ವಾಸ್ತವವಾಗಿ ಪಾದಚಾರಿಗಳಿಗೆ ತಕ್ಕಂತೆ ಸರಿಯಾದ ವಿನ್ಯಾಸದೊಂದಿಗೆ ಫುಟ್‌ಪಾತ್ ನಿರ್ಮಿಸುವ ದೊಡ್ಡ ಹೊಣೆಯನ್ನು ಈ ಎಂಜಿನಿಯರ್‌ಗಳ ಮೇಲೆಯೇ ಹೊರಿಸಬೇಕಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮುಂದಿನ ವಾರದಿಂದ ಕಾಮಗಾರಿ ಆರಂಭ
ಫುಟ್‌ಪಾತ್‌ಗಳ ದುರಸ್ತಿಗಾಗಿ ಸಚಿವ ಕೃಷ್ಣ ಬೈರೇಗೌಡ ಅವರು ನಿರ್ದಿಷ್ಟವಾಗಿ 70 ಕೋಟಿ ರೂಪಾಯಿಗಳ ಅನುದಾನವನ್ನು ಘೋಷಿಸಿದ್ದಾರೆ. ಆದರೂ, ಆ ಕೆಲಸಗಳು ಇನ್ನೂ ಆರಂಭವಾಗಬೇಕಿದೆ, (ಏಜೆನ್ಸೀಸ್).