ಶಹಾಬಾದ್ಹೊರ ವಲಯದ ಭಂಕೂರ ಕ್ರಾಸ್ನಿಂದ ವಾಡಿ ಕ್ರಾಸ್ವರೆಗಿನ ರಾಷ್ಟ್ರೀಯ ಹೆದ್ದಾರಿಯ ಫುಟ್ಪಾತ್ ಮೇಲಿನ ಮುಳ್ಳು&ಕಂಟಿ ಸ್ವಚ್ಛಗೊಳಿಸಿರುವುದು
- ಪಾದಚಾರಿ ಮಾರ್ಗ ಸ್ವಚ್ಛಗೊಳಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಶಹಾಬಾದ್: ನಗರದ ಹೊರ ವಲಯದ ಭಂಕೂರ ಕ್ರಾಸ್ನಿಂದ ವಾಡಿ ಕ್ರಾಸ್ವರೆಗಿನ ರಾಷ್ಟ್ರೀಯ ಹೆದ್ದಾರಿ-150ರ ಎರಡು ಬದಿಯಲ್ಲಿರುವ ಫುಟ್ಪಾತ್ ಮುಳ್ಳಿ-ಕಂಟಿಯಿಂದ ಮುಕ್ತವಾಗಿದೆ.
ಪ್ರಮುಖ ಪಾದಚಾರಿ ಮಾರ್ಗ ಗಿಡಗಂಟಿ ಹಾಗೂ ವಿವಿಧ ಪ್ರಾಣಿಗಳ ತ್ಯಾಜ್ಯದಿಂದ ಭರ್ತಿಯಾಗಿ ಜನರ ಸಂಚಾರಕ್ಕೆ ಸಂಚಕಾರ ತಂದೊಡ್ಡಿತ್ತು. ಈ ಕುರಿತು ಜೂ.14ರಂದು ವಿಜಯವಾಣಿ ಪತ್ರಿಕೆಯೂ "ಫುಟ್ಪಾತ್ ಕಸಮಯ ಸಂಚಾರ ಕಷ್ಟಕರ' ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.
ವರದಿಯಿಂದ ಎಚ್ಚೆತ್ತುಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಭಾನುವಾರದಿಂದ ರಸ್ತೆಯ ಎಡಭಾಗದ ಫುಟ್ಪಾತ್ ಮೇಲಿನ ತ್ಯಾಜ್ಯ ಸ್ವಚ್ಚಗೊಳಿಸಿದ್ದಲ್ಲದೆ ಹಾಗೂ ಮುಳ್ಳು&ಕಂಟಿಗಳನ್ನು ತೆರವು ಮಾಡಿದೆ. ಪಾದಚಾರಿ ಮಾರ್ಗ ಸ್ವಚ್ಛವಾಗಿದ್ದರಿಂದ ಜನರು ಖುಷಿ ವ್ಯಕ್ತಪಡಿಸುವುದರ ಜತೆಗೆ ವಿಜಯವಾಣಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.