ಫುಟ್ ಪಲ್ಸ್ ಥೆರಪಿ ಉಚಿತಾ ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡಿರುವ ಶಿಬಿರಾರ್ಥಿಗಳು.
ಕುಶಾಲನಗರ: ಹೆಬ್ಬಾಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕರಿಗಾಗಿ ಫುಟ್ ಪಲ್ಸ್ ಥೆರಪಿ ಉಚಿತಾ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ.
ಏ.7ರಿಂದಲೇ ಈ ಶಿಬಿರ ಆರಂಭವಾಗಿದ್ದು, ಏ.22 ರವರೆಗೆ ನಡೆಯಲಿದೆ. ಪ್ರತಿದಿನವೂ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ನಡೆಯುವ ಶಿಬಿರದಲ್ಲಿ 8 ವರ್ಷದ ಮೇಲ್ಪಟ್ಟು ವೃದ್ಧರವರೆಗೂ ಥೆರಪಿಯ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತರಬೇತಿ ಶಿಬಿರದ ಆಯೋಜಕ ಕಂಪಾನಿಯೋ ಸಂಸ್ಥೆಯ ಥೆರಪಿಯನ್ ಶಶಿಕಾಂತ ಪೂಜಾರಿ ಹೇಳಿದರು.
ಅರ್ಧ ಗಂಟೆ ನಡೆಸುವ ಥೆರಪಿಯಲ್ಲಿ ಒಬ್ಬ ಆರೋಗ್ಯವಂತ ಮನುಷ್ಯ 5 ಕಿ.ಮೀ. ವೇಗದ ನಡಿಗೆ ಮಾಡಿದಷ್ಟು ಪ್ರಯೋಜನವಾಗಲಿದೆ. ಥೆರಪಿಯಿಂದಾಗಿ ದೇಹದ ನರನಾಡಿಗಳಲ್ಲಿ ಸುಗಮ ರಕ್ತ ಸಂಚಾರವಾಗುತ್ತದೆ. ದೇಹದಲ್ಲಿನ ಅಶುದ್ಧ ರಕ್ತ ಶುದ್ಧವಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಸೊಂಟ ನೋವು, ಹಿಂಬದಿ ನೋವು, ಬೆನ್ನು ನೋವು ಮೊದಲಾದ ನರದೌರ್ಬಲ್ಯಗಳ ನೋವುಗಳು ನಿವಾರಣೆಯಾಗಲಿವೆ. ಕಂಪಾನಿಯೋ ಸಂಸ್ಥೆ 2014 ರಿಂದ ಆರಂಭವಾಗಿದ್ದು, ದೇಶಾದ್ಯಂತ 15 ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಯೋಜನವಾಗಿದೆ ಎಂದು ಮಾಹಿತಿ ನೀಡಿದರು.